|ಸತೀಶ್ ಕಂದಗಲ್​ಪುರಬೆಂಗಳೂರು
ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ಸರಕು ಸೇವಾ ತೆರಿಗೆ (ಜಿಎಸ್​ಟಿ) ಅನ್ವಯಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ವಿವಿಧ ರಾಜ್ಯಗಳು ವಿಧಿಸುತ್ತಿದ್ದ ಮನಸೋ ಇಚ್ಛೆ ತೆರಿಗೆ ಪದ್ಧತಿ ರದ್ದುಗೊಳಿಸಿ ದೇಶಾದ್ಯಂತ ಜಾರಿಯಾದ ಏಕರೂಪದ ಜಿಎಸ್​ಟಿ ವ್ಯವಸ್ಥೆಗೆ ಉದ್ಯಮಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಮುನ್ನ ಇದ್ದಂತಹ ತೆರಿಗೆ ವ್ಯವಸ್ಥೆಗಿಂತ ಜಿಎಸ್​ಟಿಯೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜು.1ಕ್ಕೆ ಜಿಎಸ್​ಟಿ ಜಾರಿಗೊಂಡು 5 ವರ್ಷ ಪೂರ್ಣಗೊಳಿಸಿದೆ. ದೇಶಾದ್ಯಂತ ಶೇ.5ರಿಂದ ಆರಂಭವಾದ ಜಿಎಸ್​ಟಿ ಹಂತ ಹಂತವಾಗಿ ಶೇ.12, ಶೇ.18 ಹಾಗೂ ಶೇ.28ಕ್ಕೆ ತಲುಪಿದೆ. ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ಮೊದಲು ಉದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಎಲ್ಲ ಉದ್ಯಮಗಳಿಗೂ ಜಿಎಸ್​ಟಿ ಸುಲಭ ಮತ್ತು ಪಾರದರ್ಶಕವುಳ್ಳ ತೆರಿಗೆ ಪಾವತಿ ಪದ್ಧತಿ ಎಂಬುದು ಮನವರಿಕೆಯಾಗಿರುವುದು ದೇಶಾದ್ಯಂತ ನಡೆದ ಸಮೀಕ್ಷೆಯಿಂದ ದೃಢಪಟ್ಟಿದೆ.
ಲೋಕಲ್ ಸರ್ಕಲ್ಸ್ ಎಂಬ ಖಾಸಗಿ ಸಂಸ್ಥೆಯು ಒಟ್ಟು ಐದು ವರ್ಷಗಳ ಜಿಎಸ್​ಟಿ ವ್ಯವಸ್ಥೆ ಅನುಸರಣೆ ಬಗ್ಗೆ ದೇಶದ 170 ಜಿಲ್ಲೆಗಳ 2,400ಕ್ಕೂ ವ್ಯವಹಾರಗಳ 12 ಸಾವಿರ ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ಬಿಡುಗಡೆ ಮಾಡಿದೆ. ಈ ಪೈಕಿ ಶೇ.45 ಉದ್ಯಮಿಗಳು ಜಿಎಸ್​ಟಿ ಪದ್ಧತಿ ಉತ್ತಮವಾಗಿದೆ ಎಂದು ಒಪ್ಪಿಕೊಂಡಿದ್ದು, ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉತ್ತಮ ವ್ಯವಸ್ಥೆ:ಜಿಎಸ್​ಟಿಯ ಅನುಷ್ಠಾನದ ಆರಂಭದಲ್ಲಿ ತೆರಿಗೆದಾರರು ರಿಟರ್ನ್​ಗಳನ್ನು ಸಲ್ಲಿಸಲು ತಾಂತ್ರಿಕ ಸಮಸ್ಯೆ ಎದುರಿಸಿದರು. ಪ್ರಸ್ತುತ ದಿನಗಳಲ್ಲಿ ಶೇ.40 ಮಂದಿ ಲಾಗಿನ್ ವ್ಯವಸ್ಥೆ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಉಳಿದ ಶೇ.40 ಮಂದಿ ಈಗಲೂ ಜಿಎಸ್​ಟಿ ರಿಟರ್ನ್ ಸಲ್ಲಿಕೆ ಸವಾಲಾಗಿದೆ ಎಂದರೆ, ಶೇ.20 ಈವರೆಗೆ ಜಿಎಸ್​ಟಿ ಕುರಿತ ವ್ಯವಹಾರವೇ ಅರ್ಥವಾಗಿಲ್ಲ. ರಿಟರ್ನ್ಸ್ ಪಾವತಿಗೆ ಬೇರೊಬ್ಬರ ಸಹಾಯ ಪಡೆಯುತ್ತೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಲೆಕ್ಕಪತ್ರ ವೆಚ್ಚಗಳ ಹೆಚ್ಚಳ:ಒಂದು ಆರ್ಥಿಕ ವರ್ಷದಲ್ಲಿ 2 ಕೋಟಿ ರೂ. ನಿಗದಿತ ಮಿತಿಯನ್ನು ಮೀರಿದ ವಹಿವಾಟು ನಡೆಸಿದ್ದರೆ ಅದರ ಖಾತೆಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕು. ಜಿಎಸ್​ಟಿ ಅಡಿಯಲ್ಲಿ ಖರೀದಿ, ಮಾರಾಟ, ಸ್ಟಾಕ್, ಇತ್ಯಾದಿಗಳಂತಹ ವ್ಯವಹಾರ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ಲೆಕ್ಕಪತ್ರ ನಿರ್ವಹಣೆ ಮತ್ತು ಪುಸ್ತಕ ದಾಖಲೆಗಳನ್ನು ಇಡುವುದರಿಂದ ಸ್ಪಷ್ಟತೆ ಸಿಗುತ್ತದೆ. ಆದರೆ, ಹಳೆಯ ತೆರಿಗೆ ಪದ್ಧತಿಗೆ ಸಂಗ್ರಹಿಸಿ ಇಡಬೇಕಾಗಿದ್ದ ಲೆಕ್ಕಪತ್ರಗಳು ಕಡಿಮೆಯಾಗಿದ್ದು, ವೆಚ್ಚವೂ ಕಡಿಮೆಯಿತ್ತು. ಆದರೆ, ಪ್ರಸ್ತುತ ಜಿಎಸ್​ಟಿ ಪದ್ಧತಿ ಅಡಿಯಲ್ಲಿ ರಿಟರ್ನ್ಸ್ ಸಲ್ಲಿಕೆಗೆ ವಾರ್ಷಿಕವಾಗಿ ಮಾಡಿದ ಎಲ್ಲ ವ್ಯವಹಾರಗಳಿಗೂ ಮಾಸಿಕ ಅಥವಾ ವಾರ್ಷಿಕ ಶುಲ್ಕವನ್ನು ಪಾವತಿಯ ಬಗ್ಗೆ ದಾಖಲೆಗಳನ್ನಿಡಬೇಕು. ಹೀಗಾಗಿ, ಹಳೆಯ ತೆರಿಗೆ ಪದ್ಧತಿಗಿಂತ ಜಿಎಸ್​ಟಿ ಪಾವತಿಯ ಲೆಕ್ಕಪತ್ರಗಳ ಸಂಖ್ಯೆ ಅಧಿಕವಾಗಿದ್ದು, ಇದರ ವೆಚ್ಚವೂ ಶೇ.50 ಅಧಿಕವಾಗಿದೆ. ಜಿಎಸ್​ಟಿ ಸರಳೀಕರಣಗೊಂಡಿದ್ದರೂ ಶುಲ್ಕ ಮಾತ್ರ ಕಡಿಮೆಯಾಗಿಲ್ಲ.
ಮೊದಲಿಗಿಂತಲೂ ಕಡಿಮೆ ಸಮಯ:ಜಿಎಸ್​ಟಿ ಅನುಷ್ಠಾನದ ನಂತರ ಮತ್ತು ಅದಕ್ಕಿಂತ ಪೂರ್ವವಾಗಿ ಇದ್ದ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಯಾವುದಕ್ಕೆ ಹೆಚ್ಚು ಸಮಯ ಮೀಸಲಿಡಲಾಗಿದೆ ಎಂಬ ಪ್ರಶ್ನೆಗೆ 2,692 ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಲ್ಲಿ ಶೇ.37 ಉದ್ಯಮದಾರರು ಮೊದಲಿಗಿಂತ ಕಡಿಮೆ ಸಮಯ ವ್ಯಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಶೇ.26 ಮಂದಿ ಈ ಹಿಂದೆ ಯಾವ ರೀತಿ ಇತ್ತೋ ಅಷ್ಟೇ ಸಮಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಶೇ.11 ಜನರು ಹೆಚ್ಚು ಸಮಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ಶ್ರೇಣಿಯ ಉದ್ಯಮಿಗಳ ಸಮೀಕ್ಷೆ:ಸಮೀಕ್ಷೆಯಲ್ಲಿ ಪಾಲ್ಗೊಂಡ 12 ಸಾವಿರ ಉದ್ಯಮಿಗಳ ಪೈಕಿ ಶೇ.47 ಉನ್ನತ ಶ್ರೇಣಿ, ಶೇ.32 ದ್ವಿತೀಯ ಶ್ರೇಣಿಯ ಉದ್ಯಮಿಗಳು ಹಾಗೂ ಶೇ. 21 ತೃತೀಯ ಮತ್ತು 4ನೇ ಶ್ರೇಣಿಯ (ಜಿಲ್ಲೆ ಮತ್ತು ಗ್ರಾಮೀಣ ಮಟ್ಟದ) ಉದ್ಯಮಿಗಳಿಂದ ಅಭಿಪ್ರಾಯ ಪಡೆಯಲಾಗಿದೆ. ಇವರೆಲ್ಲರೂ ಮೌಲ್ಯೀಕರಿಸಿದ ವ್ಯಾಪಾರೋದ್ಯಮಿಗಳಾಗಿದ್ದಾರೆ. ಈ ಸಮೀಕ್ಷೆಯಿಂದ ಜಿಎಸ್​ಟಿ ಜಾರಿಗೆ ಬರುವ ಮೊದಲಿದ್ದ ತೆರಿಗೆ ಪದ್ದತಿ ಮತ್ತು ಈಗಿನ ಪದ್ದತಿಯ ಬಗ್ಗೆ ಹೋಲಿಕೆ ಮಾಡಲು ನೆರವಾಗಲಿದೆ. ಸರ್ಕಾರದಿಂದ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆಯೂ ವರದಿಯು ಪೂರಕ ಮಾಹಿತಿ ಒದಗಿಸಲಿದೆ.
ನಿಮ್ಮೂರಿಗಿನ್ನು ಇವರೇ ಇನ್​ಸ್ಪೆಕ್ಟರ್; ಇಲ್ಲಿದೆ ಪೂರ್ತಿ ಮಾಹಿತಿ: 12 ಡಿವೈಎಸ್‌ಪಿ, 92 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದ ಅಕ್ಕ ಹೃದಯಾಘಾತದಿಂದ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twenty =
Remember me
