ಬೆಂಗಳೂರು: ಅರಮನೆ ಮೈದಾನದ ಕಿಂಗ್ಸ್​ ಕೋರ್ಟ್​ನಲ್ಲಿ ಆಯೋಜಿಸಿರುವ “ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಉಪಕರಣಗಳ ಮೇಳ”ದ ಕೊನೇ ದಿನವಾದ ಇಂದು(ಸೋಮವಾರ) ಕೂಡ ಜನಸಾಗರವೇ ಹರಿದುಬರುತ್ತಿದೆ.
ವೈಪಿಆರ್​ ಇವೆಂಟ್ಸ್​ ಆ್ಯಂಡ್​ ಎಕ್ಸಿಬಿಷನ್​ ಸಂಸ್ಥೆಯು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿರುವ 4 ದಿನಗಳ ಫರ್ನಿಚರ್​ ಮೇಳಕ್ಕೆ ಸೆ.11ರಂದು ಚಾಲನೆ ನೀಡಲಾಗಿದೆ. ಆರಂಭದ ಎರಡು ದಿನ ನಗರದಲ್ಲಿ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಗ್ರಾಹಕರು ಮೇಳಕ್ಕೆ ಆಗಮಿಸಿದ್ದರು. ಭಾನುವಾರವೂ ಕುಟುಂಬಸಮೇತರಾಗಿ ಮೇಳಕ್ಕೆ ಆಗಮಿಸಿದ ಸಾವಿರಾರು ಗ್ರಾಹಕರು ಮೇಳದಲ್ಲಿ ತಮ್ಮಿಷ್ಟದ ಪೀಠೋಪಕರಣಗಳನ್ನು ಖರೀದಿಸಿದ್ದರು. ಇಂದು ರಾತ್ರಿ ಮೇಳಕ್ಕೆ ತೆರೆಬೀಳಲಿದ್ದು, ಕೊನೇ ದಿನ ಸಹಸ್ರಾರು ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದಾರೆ.
ತಮ್ಮ ಮನೆಯ ಒಳಾಂಗಣ ವಿನ್ಯಾಸಕ್ಕೆ ಬೇಕಾಗಿರುವ ಸೋಫಾ, ಡೈನಿಂಗ್​ ಟೇಬಲ್​ ಸೆಟ್​, ಇಟಾಲಿಯನ್​ ವಿನ್ಯಾಸದ ಸೋಫಾ, ಕಚೇರಿ ಪೀಠೋಪಕರಣ, ಕಾರ್ಪೆಟ್​ಗಳು, ಬೆಡ್​ರೂಮ್​ ಸೆಟ್​ಗಳು, ವಾಲ್​ಫ್ರೇಮ್​, ಟೀಕ್​ವುಡ್​ ಪೀಠೋಪಕರಣಗಳನ್ನು ಖರೀದಿಸುತ್ತಿದ್ದಾರೆ. ಸಾವಿರಾರು ಗ್ರಾಹಕರು ಹೊಸ ಮಾದರಿಯ ಡೈನಿಂಗ್​ ಟೇಬಲ್​, ಸೋಫಾ ಸೆಟ್​, ಕುರ್ಚಿ, ಟೇಬಲ್​ಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಒಂದೇ ಸೂರಿನಡಿ ಹಲವು ಬಗೆಯ ವಿನ್ಯಾಸ ಮತ್ತು ಬಣ್ಣಗಳನ್ನು ಒಳಗೊಂಡ ವಸ್ತುಗಳು ಕಡಿಮೆ ಮತ್ತು ಕೈಗೆಟುಕುವ ದರದಲ್ಲಿ ಎಲ್ಲ ವರ್ಗದ ಜನರಿಗೆ ದೊರೆಯುತ್ತಿರುವುದರಿಂದ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಎಕ್ಸ್​ಪೋಗಾಗಿಯೇ ವಿಶೇಷ ರಿಯಾಯಿತಿ ದರಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.
ಶೇ.70ರವರೆಗೆ ಡಿಸ್ಕೌಂಟ್​:ವಿವಿಧ ಮಾದರಿಯ ಐಷಾರಾಮಿ ಸೋಫಾ, ವಿವಿಧ ಶೈಲಿಯ ಕುರ್ಚಿಗಳು, ಬೆಡ್​, ಮರ ಹಾಗೂ ಮಾರ್ಬಲ್​ ಬಳಸಿ ನಿರ್ಮಿಸಿರುವ ಸುಂದರ ವಿನ್ಯಾಸದ ಡೈನಿಂಗ್​ ಟೇಬಲ್​ಗಳ ಮೇಲೆ ಶೇ.70ರವರೆಗೆ ರಿಯಾಯಿತಿ ಇದೆ, ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಎಕ್ಸ್​ಪೋದಲ್ಲಿ ಏನೇನಿದೆ?:ಎಕ್ಸ್​ಪೋದಲ್ಲಿ ಇಟಾಲಿಯನ್​ ಡಿಸೈನರ್​ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್​ಗಳು, ಬೆಡ್​ರೂಮ್​ ಸೆಟ್​ಗಳು, ವಾಲ್​ಪ್ರೇಮ್​ಗಳು, ಮಸಾಜ್​ ಚೇರ್​ಗಳು, ಆರಾಮದಾಯಕ ಸೋಫಾಗಳು, ಡೈನಿಂಗ್​ ಸೆಟ್​ಗಳು, ಗಾರ್ಡನ್​ ಪೀಠೋಪಕರಣಗಳು, ಆರ್ಟಿಫಿಸಿಯಲ್​ ಹೂವುಗಳು, ಡೆಕೋರೇಟಿವ್​ ವಸ್ತುಗಳು, ಟೀಕ್​ವುಡ್​ ಪೀಠೋಪಕರಣಗಳು ಸೇರಿ ಇನ್ನು ಅನೇಕ ಉಪಕರಣಗಳು ಇಲ್ಲಿ ಲಭ್ಯವಾಗುತ್ತದೆ.ಮೂರು ದಿನಗಳಿಂದ ನಡೆಯುತ್ತಿರುವ ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಉಪಕರಣಗಳ ಮೇಳಕ್ಕೆ ಸೋಮವಾರ (ನ.14) ತೆರೆ ಬೀಳಲಿದೆ. ಆಸಕ್ತ ಗ್ರಾಹಕರು ರಾತ್ರಿ 8.30ರವರೆಗೂ ಮೇಳಕ್ಕೆ ಭೇಟಿ ನೀಡಬಹುದು.
ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

ಜಾತ್ರೆಯಂತಾದ ಒಕ್ಕಲಿಗರ ವಧು-ವರರ ಸಮಾವೇಶ: 25 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ, ಆದಿಚುಂಚನಗಿರಿ ಮಠದ ಆವರಣದಲ್ಲಿ ಜನಜಂಗುಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
