ಬಳ್ಳಾರಿ:ಪತಿ-ಪತ್ನಿ ಇಬ್ಬರು ಕೋಟ್ಯಾಧೀಶರಿದ್ದರು ಸ್ವಂತ ಕಾರಿಲ್ಲ. ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಿದ್ದರೂ ಹೆಸರಿಗೆ ಯಾವುದೇ ವಾಹನ ಖರೀದಿಸಿಲ್ಲ…! ಹೌದು ಇದು ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರಿಗಿಂತ ಪತ್ನಿ ಲಕ್ಷ್ಮೀ ಅರುಣಾ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಕಂಡು ಬಂದಿರುವ ಮಾಹಿತಿ. ಪತಿ ಜನಾರ್ದನ ರೆಡ್ಡಿಗಿಂತ ಅವರ ಪತ್ನಿಯೇ ಶ್ರೀಮಂತೆಯಾಗಿದ್ದಾರೆ. ಲಕ್ಷ್ಮೀ ಅರುಣಾ ಅವರು 1.76 ಲಕ್ಷ ರೂ. ನಗದು ಹೊಂದಿದ್ದರೆ, ಅವರ ಪತಿ 1.33 ಲಕ್ಷ ರೂ. ಹೊಂದಿದ್ದಾರೆ.
ಲಕ್ಷ್ಮೀ ಅರುಣಾ ಅವರ ಚರಾಸ್ತಿ ಮೌಲ್ಯ 96.23 ಕೋಟಿ ರೂ. ಇದ್ದರೆ, ಜನಾರ್ದನ ರೆಡ್ಡಿ 29.20 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಮಗ ಕಿರೀಟಿ ರೆಡ್ಡಿ 7.24 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಇನ್ನು ಲಕ್ಷ್ಮೀ ಅರುಣಾ 104.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತಿ ಜನಾರ್ದನ ರೆಡ್ಡಿ ಹೆಸರಿನಲ್ಲಿ 8 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಕಿರೀಟಿ ರೆಡ್ಡಿ 1.24 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಆನೆ ಮೇಲೆ ಕುಳಿತು ಬಂದು ನಾಮಪತ್ರ ಸಲ್ಲಿಸಿದ ಬಿಎಸ್​ಪಿ ಅಭ್ಯರ್ಥಿ!
ಚಿನ್ನಾಭರಣದಲ್ಲೂ ಪತಿಗಿಂತ ಪತ್ನಿಯೇ ಮೇಲುಗೈ ಸಾಧಿಸಿದ್ದಾರೆ. ಲಕ್ಷ್ಮೀ ಅರುಣಾ ಅವರು 77.20 ಲಕ್ಷ ರೂ. ಮೌಲ್ಯದ 2,58,237 ಗ್ರಾಂ ಬೆಳ್ಳಿ ಆಭರಣ, 16. 44 ಕೋಟಿ ರೂ. ಮೌಲ್ಯದ 38,486 ಗ್ರಾಂ ಚಿನ್ನ ಹಾಗೂ ಡೈಮಂಡ್ ಹೊಂದಿದ್ದಾರೆ. ಜನಾರ್ದನ ರೆಡ್ಡಿ ಅವರು 32.18 ಲಕ್ಷ ರೂ. ಮೌಲ್ಯದ 1,78,741 ಗ್ರಾಂ ಬೆಳ್ಳಿ ಆಭರಣ, 7.93 ಕೋಟಿ ರೂ. ಮೌಲ್ಯದ 46,258 ಗ್ರಾಂ ಚಿನ್ನಾಭರಣ ಹಾಗೂ ಡೈಮಂಡ್ ಹೊಂದಿದ್ದಾರೆ.
ಆಸ್ತಿಯಲ್ಲೂ ಪತಿಗಿಂತ ಪತ್ನಿಯೇ ಹೆಚ್ಚು ಹೊಂದಿದ್ದಾರೆ. ವಿವಿಧ ಕಂಪನಿಗಳ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ. ಲಕ್ಷ್ಮೀ ಅರುಣಾ ಅವರು ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 29.55 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಬ್ರಾಹ್ಮಣಿ ಇಂಡಸ್ಟ್ರೀಸ್‌ನಲ್ಲಿ 25.08 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮುದಿತಾ ಪ್ರಾಪರ್ಟಿಸ್‌ನಲ್ಲಿ 18.27 ಕೋಟಿ ರೂ. ತುಬ್ಲರ್ ರಿವಿಟ್ಸ್ ಕಂಪನಿಯಲ್ಲಿ 1 ಕೋಟಿ ರೂ., ಕಿರೀಟಿ ಅವಿಟೇಷನ್ ಪ್ರೈ.ಲಿ.ನಲ್ಲಿ 1 ಕೋಟಿ ರೂ., ಓಡಿಸ್ಸಿ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ 3.42 ಕೋಟಿ ರೂ., ಆದಿತ್ಯ ಬಿರ್ಲಾ ವಿಮಾ ಕಂಪನಿಯಲ್ಲಿ 44 ಲಕ್ಷ ರೂ., ಹೂಡಿಕೆ ಮಾಡಿದ್ದಾರೆ. ಇನ್ನು ಮಗ ಕಿರೀಟಿ ರೆಡ್ಡಿ ಹೆಸರಿನಲ್ಲಿ ಎಸ್‌ಬಿಐ ಮ್ಯುಚುಯಲ್ ಫಂಡ್‌ನಲ್ಲಿ 2 ಕೋಟಿ ರೂ., ಬೇರೆ ಷೇರು ಮತ್ತು ಬಾಂಡ್‌ಗಳಲ್ಲಿ 5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ:ಅತೀ ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿಗೆ 2ನೇ ಸ್ಥಾನ; ಸಿಎಂ ಆಸ್ತಿ ವಿವರ ಹೀಗಿದೆ…
ಜನಾರ್ದನ ರೆಡ್ಡಿ ಕೂಡ ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 19.58 ಕೋಟಿ ರೂ. ವ್ಯಯಿಸಿದ್ದಾರೆ. ಲಕ್ಷ್ಮೀ ಅರುಣಾ ಆಕ್ಸಿಜನ್ ಕೋ.ಪ್ರೈ.ಲಿ.ನಲ್ಲಿ 2.50 ಲಕ್ಷ ರೂ., ಕಿರೀಟಿ ಪವರ್ ಕಾರ್ಪೋರೇಷನ್ ಲಿ.ನಲ್ಲಿ 2.50 ಲಕ್ಷ ರೂ., ಕಿರೀಟಿ ಅವಿಟೇಷನ್ ಪ್ರೈ.ಲಿ.ನಲ್ಲಿ 1 ಕೋಟಿ ರೂ. ಹೀಗೆ ವಿವಿಧ ಕಂಪನಿಗಳಲ್ಲಿ ಹಣವನ್ನು ವ್ಯಯಿಸಿದ್ದಾರೆ. ಲಕ್ಷ್ಮೀ ಅರುಣಾ ಅವರು ಚರಾಸ್ತಿ ಮೇಲೆ 96.23 ಕೋಟಿ ರೂ, ಮತ್ತು ಸ್ಥಿರಾಸ್ತಿ ಮೇಲೆ 74.89 ಕೋಟಿ ರೂ. ಸಾಲ ಹೊಂದಿದ್ದಾರೆ. ಜನಾರ್ದನ ರೆಡ್ಡಿ ಒಟ್ಟು 34.61 ಕೋಟಿ ರೂ., ಮಗ ಕಿರೀಟಿ ರೆಡ್ಡಿ 7.66 ಕೋಟಿ ರೂ. ಸಾಲ ಹೊಂದಿದ್ದಾರೆ.
ಇದನ್ನೂ ಓದಿ:ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ; ದೇವೆಗೌಡರಿಂದ ಬಿ ಫಾರ್ಮ್ ಪಡೆಯುತ್ತಲೇ ಕಣ್ಣೀರು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
