ಬೆಂಗಳೂರು:ಸಾಮಾಜಿಕ ಜಾಲತಾಣದಲ್ಲಿ(Social Media)ಸುಳ್ಳು ಸುದ್ದಿ ಹಬ್ಬಿಸುವುದು, ನಕಲಿ ಫೋಟೋವನ್ನು ಹರಿಬಿಡುವುದು ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್(Dr.G. Parameshwar)ಅವರು ಹೇಳಿದ್ದಾರೆ.
ಇದನ್ನೂ ಓದಿ:VIDEO | ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಹಾಕಲಾದ ಸೂಚನಾಫಲಕದ ಮೇಲೆ ಪುಷ್​ಅಪ್ಸ್ ಮಾಡಿದ!
“ಸುಳ್ಳು ಸುದ್ದಿಗಳಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವ ವಿಚಾರವನ್ನು ಮುನ್ನೆಲೆಗೆ ತಂದ ಡಾ.ಜಿ. ಪರಮೇಶ್ವರ್ ಅವರು, ಸೋಶೀಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹಾಗೂ ಸ್ಟೋರಿಗಳನ್ನು ರೂಪಿಸಿ ಅದನ್ನು ಹರಿಬಿಡುತ್ತಾರೆ. ಇದು ಶಾಂತಿ ಕದಡುವ ಹಾಗೂ ಬೇರೆ ಬೇರೆ ಸಮುದಾಯಗಳ‌(Community)ಕೋಪಕ್ಕೆ ಕಾರಣವಾಗುತ್ತಿದೆ. ಇದನ್ನು ಯಾರು ಮಾಡುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಮದರಸಾ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಭ್ಯಾಸ
“ಕಮ್ಯೂನಲ್ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಈ ಹಿಂದೆ ಗಲಭೆಗಳು ನಡೆದಿರುವುದು ನಮಗೆಲ್ಲಾ ತಿಳಿದಿದೆ. ಈ ಕುರಿತು ಗೂಗಲ್(Google)ಹಾಗೂ ಫೇಸ್​​ಬುಕ್​ನ ನ್ಯಾಷನಲ್ ಹೆಡ್​​ಗಳನ್ನು ಭೇಟಿ ಮಾಡಿ ಸಹಕರಿಸುವಂತೆ ಮನವಿ ಮಾಡುತ್ತೇನೆ. ಅಂತಹ ಚಟುವಟಿಕೆಗಳ ಮೇಲೆ‌ ನಿಯಂತ್ರಣ ಹೇರಲು ಕ್ರಮ ತಗೆದುಕೊಳ್ಳಲು ಮುಂದಾಗಿದ್ದೇವೆ” ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲಿಸದೆ ಬಿಲ್​ ಪಾವತಿಸುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 1 =
Remember me
