ತುಮಕೂರು:ಮಾಜಿ ಡಿಸಿಎಂ ಜಿ. ಪರಮೇಶ್ವರ್​ ಅವರಿಗೆ ಬಿಜೆಪಿ ಟಿಕೆಟ್​ ಆಕಾಂಕ್ಷಿ ಅನಿಲ್​ ಕುಮಾರ್​ ಅವರ ಮೀಸೆ ಮೇಲೆ ಕಣ್ಣು ಬಿದ್ದಿದೆ. ಯಾವುದೇ ವೇದಿಕೆಗೆ ಹೋದರು ಮೀಸೆಯ ಬಗ್ಗೆ ಲೇವಡಿ ಮಾಡುವುದನ್ನು ನೋಡಿದರೆ, ಮೀಸೆಗೆ ಹೆದರಿದಂತೆ ಕಾಣುತ್ತದೆ.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್​ ಬೆಂಬಲಿತ ಒಕ್ಕಲಿಗರ ಸಮಾವೇಶದಲ್ಲಿ ಮಾಜಿ ಡಿಸಿಎಂ ರೋಷಾವೇಶದ ಭಾಷಣ ಮಾಡಿದರು.
ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ ಎಂದು ಸವಾಲೆಸೆದ ಪರಮೇಶ್ವರ್, ಯಾವ ಮೀಸೆನೂ ಇಲ್ಲ ಗೀಸೆಗೂ ನಾನು ಹೆದರುವುದಿಲ್ಲ ಎಂದು ಅಬ್ಬರದ ಭಾಷಣ ಮಾಡುವ ಮೂಲಕ ಪರೋಕ್ಷವಾಗಿ ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿ ಅನಿಲ್ ಕುಮಾರ್​ಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:ಬೆಂಗ​ಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ಪ್ರತಿಭಟನೆ; ಸಮಸ್ಯೆ ಬಗೆಹರಿಸುವಂತ ಸೂಚನೆ ನೀಡಿದ್ದೇನೆ ಎಂದ ಸಿಎಂ
ಬೆಂಗಳೂರಿಗೆ ಬನ್ನಿ ಎಂದು ಸಾವಿರಾರು ಜನ ನನ್ನನ್ನು ಕರೆದರು. ಆದರೆ, ನಾನು ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದರು.
ಇನ್ನು ಬಿಜೆಪಿ ಕೊರಟಗೆರೆ ಕ್ಷೇತ್ರವನ್ನು ಕಬ್ಜ ಮಾಡಲು ಮುಂದಾಗಿದೆ. ವಿಜಯ ಸಂಕಲ್ಪ ಯಾತ್ರೆ, ಯುವ ಮೋರ್ಚಾ ಸಮಾವೇಶ ನಡೆಸುವ ಮೂಲಕ ಬಿಜೆಪಿ ಮತಗಳನ್ನು ಸೆಳೆಯುತ್ತಿದೆ. ಇಷ್ಟು ವರ್ಷ ಕೊರಟಗೆರೆಯಲ್ಲಿ ಕಾಂಗ್ರೆಸ್​ಗೆ ಕೇವಲ ಜೆಡಿಎಸ್ ಮಾತ್ರ ಪ್ರತಿಸ್ಪರ್ಧಿ ಆಗಿತ್ತು. ಆದರೆ, ಈಗ ಬಿಜೆಪಿಯ ಅನಿಲ್ ಕುಮಾರ್ ಪ್ರಬಲ ಪೈಪೋಟಿ ಕೊಡುವ ಸಾಧ್ಯತೆ ಇದೆ.
ಕಳೆದ ಭಾನುವಾರ ಬಿ.ವೈ.ವಿಜಯೇಂದ್ರ, ತೇಜಸ್ವಿ ಸೂರ್ಯ ಉಪಸ್ಥಿತಿಯಲ್ಲಿ ಬೃಹತ್ ಸಮಾವೇಶವನ್ನು ಅನಿಲ್​ ಕುಮಾರ್​ ಅವರು ನಡೆಸಿದ್ದಾರೆ. ಹಾಗಾಗಿ ಪದೇ ಪದೇ ಅನಿಲ್ ಕುಮಾರ್ ‌ಅವರ ಮೀಸೆ ಬಗ್ಗೆ ಪರಮೇಶ್ವರ್​ ಅವರು ಲೇವಡಿ ಮಾಡುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಯುಗಾದಿ ಬಳಿಕ ಮತ್ತೆ ಪಕ್ಷ ಸಂಘಟನೆ: ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

ನಟಿ ಮೀನಾಗೆ ಈ ನಟನ ಮೇಲೆ ನಿಜವಾಗಿ ಲವ್​ ಆಗಿತ್ತಂತೆ! ಮದ್ವೆ ದಿನ ಕಣ್ಣೀರು ಸಹ ಹಾಕಿದ್ದರಂತೆ

10ನೇ ಹಾಗೂ 12ನೇ ತರಗತಿ ಪರೀಕ್ಷೆಗೆ ಹಾಜರಾದ ಜೈಲು ಹಕ್ಕಿಗಳು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + nineteen =
Remember me
