ತುಮಕೂರು:ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅಧಿಕೃತ ಚರ್ಚೆ ನಡೆದಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ತುಮಕೂರು ತಾಲೂಕು ಹೆಗ್ಗೆರೆಯಲ್ಲಿ ಮತದಾನ ಮಾಡಿ ಮತನಾಡಿದ ಅವರು, ಶ್ರೀನಿವಾಸ್ ಸೇರ್ಪಡೆಗೆ ಒಲವು ತೋರಿದರೆ ನಮ್ಮ‌ ಹೈಕಮಾಂಡ್ ನಿರ್ಧರಿಸಲಿದೆ ಎಂದರು. ನಮ್ಮ ಅಭಿಪ್ರಾಯ ಕೇಳಿದರೆ ನಮ್ಮ‌ ಜಿಲ್ಲೆಯ ಹಿತದೃಷ್ಟಿಯಿಂದ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ಇದನ್ನೂ ಓದಿ:ಅಮೆರಿಕದಲ್ಲಿ ಭಾರತೀಯನ ಮೇಲೆ ಗುಂಡಿನ ದಾಳಿ: ನೋಡಿಕೊಳ್ಳಲು ಯಾರು ಇಲ್ಲ, ಆತಂಕದಲ್ಲಿ ಕುಟುಂಬ
ಬಿಜೆಪಿ ಹಾಗೂ ಜೆಡಿಎಸ್ ವಿಲೀನದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ, ಈ ಬಗ್ಗೆ ಜೆಡಿಎಸ್ ಮುಖಂಡರೇ ಹೇಳಬೇಕು. ರಾಜಕಾರಣದಲ್ಲಿ ಒಂದು ಹಂತದಲ್ಲಿದ್ದೇವೆ. ನಾವು ಮಾತನಾಡುವಾಗ ಸಂಯಮ, ಎಚ್ಚರಿಕೆಯಿಂದ ಮಾತನಾಡಬೇಕು. ನಾವು ಮನರಂಜನೆ ನೀಡುವ ವ್ಯಕ್ತಿಗಳಲ್ಲ ಎಂದು ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಲೋಕಾಭಿರಾಮವಾಗಿ ಮಾತನಾಡಿದ ಮಾತನ್ನು ರಾಜ್ಯಾದ್ಯಂತ ಚರ್ಚಿಸುವ ಅಗತ್ಯವಿಲ್ಲ, ಒಬ್ಬ ಅಭ್ಯರ್ಥಿಯನ್ನು ಯಾರೊ ಒಬ್ಬರು ಸೋಲಿಸಲು ಅಥವಾ ಗೆಲ್ಲಿಸಲು ಸಾಧ್ಯವಿಲ್ಲ ಎಂದರು. ನಾನು 2013ರ ಚುನಾವಣೆಯಲ್ಲಿ ಸೋತ ವಿಷಯವನ್ನು ನಾನು ಮತ್ತೆ ಗೆದ್ದು ಶಾಸಕನಾದರೂ ಬಿಟ್ಟಿಲ್ಲ ಎಂದು ಇದರಲ್ಲಿ ರಾಜಕೀಯ ಹೊರತಾಗಿ ಮತೇನು ಇಲ್ಲ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ನಾಮಪತ್ರ ಹಿಂಪಡೆಯದಿದ್ದರೆ ನಿನ್ನ ಹೆಂಡತಿಯನ್ನು ಬಿಡೋದಿಲ್ಲ: ಪಿಸ್ತೂಲ್​ ತೋರಿಸಿ ಬೆದರಿಕೆ ಆರೋಪ!
ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ‌ ಮುಳಗಡೆಯಾಗುವ ಹಳ್ಳಿಗಳ ನಿರಾಶ್ರಿತರ ಪುನರ್ವಸತಿ ಕಲ್ಪಿಸುವವರೆಗೂ ಯೋಜನೆಗೆ ತೊಡಕು ಮುಂದುವರಿಯಲಿದೆ ಈ ಬಗ್ಗೆ ಸರ್ಕಾರ ಕೂಡಲೇ ಗಮನ‌ಹರಿಸಬೇಕು ಎಂದರು.
ಶಾಲಾ ಶುಲ್ಕದ್ದೇ ದೊಡ್ಡ ಸಮಸ್ಯೆ: ಪಾಲಕರು, ಖಾಸಗಿ ಶಾಲೆಗಳ ಸಹಕಾರ ಕೋರಿದ ಸುರೇಶ್​ಕುಮಾರ್

ಯಡಿಯೂರಪ್ಪ ಅನುಭವಸ್ಥ, ಸಲಹೆ ಅಗತ್ಯವಿಲ್ಲ

ಕೋಟಿ ರೂ. ಲಂಚಕ್ಕೆ ಸಚಿವ ನಾಗೇಶ್ ಬೇಡಿಕೆ? ಸಚಿವರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
