ಬಳ್ಳಾರಿ:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಗಾಣಿ ನಾಡು ಬಳ್ಳಾರಿಯಲ್ಲಿ ಸಹೋದರರ ಟಾಕ್ ವಾರ್ ಆರಂಭವಾಗಿದೆ. ತನ್ನ ವಿರುದ್ಧ ಪತ್ನಿಯನ್ನು ಅಭ್ಯರ್ಥಿಯಾಗಿ ಘೋಷಿಸಿದ ಸಹೋದರ ಜನಾರ್ದನ‌ ರೆಡ್ಡಿಗೆ ಸೋಮಶೇಖರ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ಹಳೆಯದನ್ನೆಲ್ಲ ನೆನಪಿಸಿ, ಆಕ್ರೋಶ ಹಾಗೂ ಭಾವುಕತೆಯ ಮಿಶ್ರಿತ ಮಾತುಗಳಿಂದ ಜನಾರ್ದನ‌ ರೆಡ್ಡಿಗೆ ಸೋಮಶೇಖರ ರೆಡ್ಡಿ ಮಾತಿನ ಪಂಚ್​ ನೀಡಿದ್ದಾರೆ. ಅವರು ಕೂಡ ಬರಲಿ, ಸೊಸೆ ಮತ್ತು ಭಾವನ ಮಧ್ಯದಲ್ಲಿ ರಸವತ್ತಾದ ಫೈಟ್ ಇರುತ್ತದೆ. ನನ್ನನ್ನು ಅವರ ಹೊಸ ಪಾರ್ಟಿ ಕೆಆರ್​ಪಿಪಿಗೆ ಕರೆದರು. ಆದರೆ, ನಾನು ಬರಲ್ಲ ಎಂದು ಹೇಳಿದೆ. ಇದೇ ಸಿಟ್ಟಿನಲ್ಲಿ ಈ ರೀತಿ ಮಾಡಿದ್ದಾರೆ ಎಂದರು.
2013ರಲ್ಲಿ ತಮ್ಮ ಜನಾರ್ದನಾ ರೆಡ್ಡಿ ಜೈಲಿನ ಒಳಗಿದ್ದಾನೆ ಅಂತಾ ಸ್ಪರ್ಧೆ ಮಾಡದೆ ತ್ಯಾಗ ಮಾಡಿದೆ. ಅವನ‌ ಸಲವಾಗಿ 63 ದಿನ ಜೈಲಿಗೂ ಹೋಗಿ ಬಂದಿದ್ದೇನೆ. ಅವನನ್ನು ಜೈಲಿನಿಂದ ಹೊರತರಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಭಾವನ ಋಣವನ್ನು ತೀರಿಸಲಾಗದು ಎಂದು ತಮ್ಮ ಪತ್ನಿ ಅರುಣಾ ಲಕ್ಷ್ಮಿ ಹೇಳಿದ್ದರು. ಅವರ ಪುತ್ರಿಯು ಕೂಡ ಇದೇ ಮಾತುಗಳನ್ನಾಡಿದ್ದರೂ. ಆದರೆ, ಅದ್ಯಾವುದನ್ನೂ ಅವರು ಲೆಕ್ಕಕ್ಕೆ ತಗೊಂಡಿಲ್ಲ. ನಾನು ಎಲ್ಲದಕ್ಕೂ ರೆಡಿಯಾಗಿದ್ದೇನೆ. ಇದು ಹೊಂದಾಣಿಕೆ ರಾಜಕೀಯ ಅಲ್ಲ ಎಂದರು.
ಹೊಸ ಪಾರ್ಟಿ ಬೇಡ ಅಂತಾ ನಾನು, ಕರುಣಾಕರ ರೆಡ್ಡಿ ಹಾಗೂ ರಾಮುಲು ಎಲ್ಲರೂ ಹೇಳಿದೆವು. ನಮ್ಮ ಕೆಲವು ಕಾರ್ಯಕರ್ತರಿಗೆ ಹಣ ಅಂದ್ರೆ ಆಸೆ. ಸೋಮಶೇಖರ ರೆಡ್ಡಿ ಹಿಂದೆ ಇದ್ದರೆ ಆ ಹಣ ಬರಲ್ಲ ಅಂತಾ ಅವರ ಹಿಂದೆ ಹೋಗಿದ್ದಾರೆ. ಆದರೆ, ನಿಷ್ಠಾವಂತ ಕಾರ್ಯಕರ್ತರು ನನ್ನ ಜೊತೆಯಲ್ಲೇ ಇದ್ದಾರೆ ಎಂದು ಸೋಮಶೇಖರ ರೆಡ್ಡಿ, ಜನಾರ್ದನ ರೆಡ್ಡಿಗೆ ಟಾಂಗ್ ಕೊಟ್ಟರು.(ದಿಗ್ವಿಜಯ ನ್ಯೂಸ್​)
ದೇಶದ ಮೊದಲ ತೃತೀಯಲಿಂಗಿ ಗರ್ಭಧಾರಣೆ! ಫೋಟೋ ಶೇರ್​ ಮಾಡಿ ಸಂತಸ ಹಂಚಿಕೊಂಡ ದಂಪತಿ

ಯುವಕನಿಗೆ ಸಾನ್ಯ ಅಯ್ಯರ್ ಕಪಾಳಮೋಕ್ಷ: ತಿರುಗಿ ಪುಟ್ಟಗೌರಿಯ ಕೆನ್ನೆಗೆ ಬಾರಿಸಿದ ಯುವಕ, ಪುತ್ತೂರಿನಲ್ಲಿ ಸಾನ್ಯ ಟೀಂ ಗರಂ

ವಿಷ್ಣು ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ: ಅಭಿಮಾನಿಗಳ ಆರಾಧ್ಯ ದೈವನ ಭವ್ಯ ಸ್ಮಾರಕದಲ್ಲಿ ಏನೇನಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
