ಮೈಸೂರು:ಕಾಂಗ್ರೆಸ್​​ ಅವನತಿಯ ಸಮಯಕ್ಕೆ ಜನ ಮತ ನೀಡಿ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಜೆಡಿಎಸ್​​ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಟಿ ದೇವೇಗೌಡ ಅವರು ವಿಜಯಶಾಲಿಯಾಗಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನ ಎಸ್​. ಸಿದ್ದೇಗೌಡ ಅವರು ಪ್ರಬಲ ಪೈಪೋಟಿ ನೀಡಿದ್ದರು.
ಈ ಕುರಿತಾಗಿ ಮಾತನಾಡಿದ ಅವರು, ಕಾಂಗ್ರೆಸ್​​ ಅವನತಿಯ ಸಮಯಕ್ಕೆ ಜನ ಮತ ನೀಡಿ ಪುನರಜನ್ಮ ಕೊಟ್ಟಿದ್ದಾರೆ. ಈ ಕ್ಷೇತ್ರದ ಜನರು ಜೆಡಿಎಸ್​​ ಪಕ್ಷವನ್ನು ಕೈ ಬಿಟ್ಟಿಲ್ಲ. ಎಲ್ಲಾ ಮತದಾರರು, ಮುಖಂಡರು ಹಾಗೂ ಪಕ್ಷದ ನಾಯಕರು ಕಾರ್ಯಕರ್ತರಿಗೆ ಕೃತಜ್ಱತೆ ಸಲ್ಲುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್​​ ಪಕ್ಷವನ್ನು ಕಟ್ಟಿದ್ದು ಕರ್ನಾಟಕ. ಇದೀಗ ಕಾಂಗ್ರೆಸ್​​ಗೆ ಶಕ್ತಿ ತುಂಬಿರುವುದು ಕರ್ನಾಟವಾಗಿದೆ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್​​ ನಶಿಸಿ ಹೋಗುತ್ತಿದೆ ಎನ್ನುವ ಸಂಧರ್ಭದಲ್ಲಿ ಮತ್ತೊಮ್ಮೆ ಕಾಂಗ್ರೆಸ್​​ ಪಕ್ಷಕ್ಕೆ ಜನ ಮತ ನೀಡಿ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಜೆಡಿಎಸ್‌ ಅಭ್ಯರ್ಥಿ ಜಟಿ ದೇವೇಗೌಡ ಅವರು 24,994 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಎಸ್​​. ಸಿದ್ದೇಗೌಡ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಇಲ್ಲಿ ಬಿಜೆಪಿಯಿಂದ ಕವೀಶ್‌ ಗೌಡ ಅವರು ಸ್ಪರ್ಧೆ ಮಾಡಿದ್ದರು. ಆಮ್​ ಆದ್ಮಿ ಪಾರ್ಟಿಯಿಂದ ಜಯಶ್ರೀ ಕಿರಣ್​ ನಾಗೇಶ್​ ಕಲ್ಯಾಣಿ ಕಣಕ್ಕೆ ಇಳಿದಿದ್ದರು.
Karnataka Election Result 2023; ಬಿಜೆಪಿ ಸೋಲಿಗೆ ಕಾರಣಗಳೇನು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
