ಗದಗ:ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದ ಅವಿವೇಕಿಯೊಬ್ಬ ತನ್ನ ಮಡಗಿಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ.
ಸನಾ ಅಗಸಿಬಾಗಿಲ (25) ಕೊಲೆಯಾದ ಮಹಿಳೆ. ಪತಿ ಸದ್ದಾಂ ಅಗಸಿಬಾಗಿಲ, ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರು ವರ್ಷಗಳ ಹಿಂದೆಯೇ ವಿವಾಹವಾಗಿದ್ದರು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ:ಹೈದರಾಬಾದ್​ನಲ್ಲಿದ್ದ ಹೆಂಡತಿ, ಮನೆಯವರ ಮೇಲೆ ವಿಷ ಪ್ರಯೋಗ: ಲಂಡನ್​ನಲ್ಲಿದ್ದುಕೊಂಡೇ ಮಾಸ್ಟರ್ ಪ್ಲಾನ್ ಮಾಡಿದ ಪತಿ..!
ಆದರೆ, ಬೇರೆ ಹೆಣ್ಣಿನ ಸಹವಾಸ ಮಾಡಿದ್ದ ಸದ್ದಾಂ ಅಗಸಿಬಾಗಿಲ ತನ್ನ ಕುಟುಂಬವನ್ನು ನಿರ್ಲಕ್ಷಿಸಿದ್ದ. ಪರಸ್ತ್ರೀ ಸಂಗವನ್ನು ಪತ್ನಿ ಪ್ರಶ್ನೆ ಮಾಡಿದಕ್ಕೆ ಆಕೆಯೊಂದಿಗೆ ನಿತ್ಯವು ಜಗಳ ಆಡುತ್ತಿದ್ದ. ಅಲ್ಲದೆ, ಕಿರುಕುಳ ನೀಡುತ್ತಿದ್ದ. ಇದೀಗ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪರಸ್ತ್ರೀ ಸಂಗಕ್ಕೆ ತಾಯಿಯನ್ನು ಕಳೆದುಕೊಂಡು ಎರಡು ಮಕ್ಕಳು ಅನಾಥರಾಗಿದ್ದಾರೆ.
ಸನಾ ಅಗಸಿಬಾಗಿಲ ಮೃತದೇಹದ ಕತ್ತು ಮತ್ತು ಮುಖದ ಮೇಲೆ‌ ಗಾಯ ಕುರುಹು ಇದೆ. ಹೀಗಾಗಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆರೋಪಿ ಸದ್ದಾಂ ಸೇರಿ ಆಕೆಯ ಕುಟುಂಬಸ್ಥರ ವಿರುದ್ಧ ಗದಗ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಸನಾ ಕುಟುಂಬ ಕೊಲೆ ಪ್ರಕಣ ದಾಖಲಿಸಿದೆ.(ಏಜೆನ್ಸೀಸ್​)
ಎಮೋಜಿ ಪಜಲ್​ ಸವಾಲು: ಕೇವಲ 10 ಸೆಕೆಂಡ್​ನಲ್ಲಿ ದೇಶದ ಹೆಸರನ್ನು ಗೆಸ್​ ಮಾಡುವಿರಾ?

7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
