ಗದಗ:ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬೀದಿಯಲ್ಲಿ ಪರದಾಡುತ್ತಿದ್ದ ತಾಯಿ ಹಾಗೂ ಮಕ್ಕಳಿಗೆ ಆಶ್ರಯ ನೀಡಿ ಗದಗ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಗದಗ ನಗರದ ಮುಳಗುಂದ ನಾಕಾ ಬೀದಿಯಲ್ಲೇ ತಾಯಿಯೊಬ್ಬಳು ತನ್ನ ಮಕ್ಕಳೊಂದಿಗೆ ಯಾವುದೇ ಆಶ್ರಯವಿಲ್ಲದೇ ನಾಲ್ಕು ದಿನ‌ ಕಳೆದಿದ್ದು, ತಮ್ಮ ಗಮನಕ್ಕೆ ಬಂದ ಕೂಡಲೇ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸರು ತಾಯಿ, ಮಕ್ಕಳಿಗೆ ಆಶ್ರಯ ಕಲ್ಪಿಸಿದರು.
ಊಟ, ನೀರು, ಮಾಸ್ಕ್ ಹಾಗೂ ಹಣ್ಣುಗಳು ನೀಡಿ ಖಾಕಿ‌ ಪಡೆ ಒಳ್ಳೆಯ ಉಪಚಾರ ನೀಡಿತು. ಬಳಿಕ ಅವರನ್ನು ಪೊಲೀಸ್ ವಾಹನದಲ್ಲಿ ವಾಲ್ಮೀಕಿ ಭವನಕ್ಕೆ ಕರೆದೊಯ್ದು ಆಶ್ರಯ ನೀಡಿದರು.
ಗಂಡ ಫಲೀರಪ್ಪ ಮನೆಯಿಂದ ಹೊರ ಹಾಕಿದ್ದಕ್ಕೆ ಮಕ್ಕಳೊಂದಿಗೆ ಬೀದಿಯಲ್ಲಿ ಬದುಕು ಸಾಗಿಸುವಂತಾಯಿತು ಎಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ‌ ಮೂಲದ ಅನಂತಮ್ಮ ಕಣ್ಣೀರಾಕಿದ್ದಾರೆ. ಗದಗ ತಾಲೂಕಿನ ಹುಲಕೋಟಿ ಗ್ರಾಮದ ಪತಿ ಮನೆಯವರು ಹೊರ ಹಾಕಿದ್ದಕ್ಕೆ ಮಕ್ಕಳಾದ ಭೀಮೇಶ ಹಾಗೂ ತುಳಸಿ ಕೂಡ ತಾಯಿಯೊಂದಿಗೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.(ದಿಗ್ವಿಜಯ ನ್ಯೂಸ್​)
https://www.facebook.com/VVani4U/videos/187331448907397/
VIDEO| ಸಾಕು ನಾಯಿ-ಚಿರತೆ ನಡುವೆ ರೋಚಕ ಕಾಳಗ: ಕಾದಾಟಕ್ಕೆ ಟ್ವಿಸ್ಟ್​ ಕೊಟ್ಟ ಕಾರಿನ ಶಬ್ದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 5 =
Remember me
