ಗದಗ:ಕರೊನಾ ತಡೆಗಟ್ಟಲು ಲಾಕ್​ಡೌನ್​ ಹೇರಿರುವ ಸಮಯದಲ್ಲಿ ಬಹುತೇಕ ಮಂದಿ ಟಿಕ್​ಟಾಕ್​ ಮೊರೆ ಹೋಗಿರುವುದು ಸುಳ್ಳಲ್ಲ. ಮನರಂಜನೆಯ ರಸದೌತಣ ನೀಡುವ ಟಿಕ್​ಟಾಕ್​ ಕೆಲ ಸಮಯದಲ್ಲಿ ಅಷ್ಟೇ ಅಪಾಯಕಾರಿ ಎಂಬುದನ್ನು ನಿರೂಪಿಸಿದೆ. ಟಿಕ್​ಟಾಕ್​ ಗೀಳಿಗೆ ಬಿದ್ದು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಂತಹ ಉದಾಹರಣೆಗಳಿವೆ. ಇದೀಗ ಆ ಸಾಲಿಗೆ ಗದಗಿನಲ್ಲಿ ನಡೆದ ಪ್ರಕರಣವೊಂದು ಸೇರಿಕೊಂಡಿದೆ.
ಪ್ರಕಾಶ್​(26) ಎಂಬ ಯುವಕನೊರ್ವ ನೇಣು ಹಾಕಿದ ಹಾಗೆ ನಟಿಸಿ, ಟಿಕ್​ಟಾಕ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಎದುರಿಗೆ ಇರುವ ಕಿಟಕಿಯ ಮೇಲೆ ತನ್ನ ಮೊಬೈಲ್​ ಇಟ್ಟು ಟಿಕ್​ಟಾಕ್​ ವಿಡಿಯೋ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ವಿಧಿಯಾಟ ಏನಿತ್ತೋ? ದುರಾದೃಷ್ಟದಿಂದ ಅದೇ ಕುಣಿಕೆಯಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ.
ಗದಗ ತಾಲೂಕಿನ ನರಸಾಪೂರ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಘಟನೆ ನಡೆದಿದೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್, ಟಿಕ್​ಟಾಕ್​ ಹುಚ್ಚಾಟದಿಂದಾಗಿ ಇದೀಗ ಜೀವವನ್ನು ಕಳೆದುಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿಯ ಪಡುಕೆರೆ ಬೀಚ್​ನಲ್ಲಿ ಭಾರಿ ಗಾತ್ರದ ತಿಮಿಂಗಿಲ ಪತ್ತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + 20 =
Remember me
