ಹುಬ್ಬಳ್ಳಿ:ದೇಶದಲ್ಲಿ ಶುದ್ಧ, ಸ್ವಚ್ಛ ಗಾಳಿ ಬೀಸುವ ನಗರ ಪಟ್ಟಿಯಲ್ಲಿ ಗದಗ ನಗರವು ಜೂನ್​ 15ರಂದು ಮುಂಚೂಣಿ ಸ್ಥಾನಕ್ಕೇರಿದ ಸಾಧನೆ ಮಾಡಿದೆ. ಅಲ್ಲದೆ ರಾಜ್ಯದ ಹಲವು ನಗರಗಳು ಟಾಪ್​ ಟೆನ್​ನಲ್ಲಿ ಕಾಣಿಸಿಕೊಂಡಿವೆ.ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿದಿನ ದೇಶದ ಪ್ರಮುಖ ನಗರದ ಗಾಳಿಯ ಗುಣಮಟ್ಟದ ಮಾನದಂಡ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡುತ್ತದೆ. ಜೂನ್​ 15ರಂದು 131 ನಗರಗಳ ಸೂಚ್ಯಂಕ ಪ್ರಕಟಿಸಿದೆ. ಈ ಪೈಕಿ 41 ನಗರಗಳು ಉತ್ತಮ, 65 ನಗರಗಳು ಸಮಾಧಾನಕರ ಹಾಗೂ 21 ನಗರಗಳ ಗಾಳಿಯ ಸ್ಥಿತಿ ಮಧ್ಯಮ ಎಂದು ಮಂಡಳಿ ತಿಳಿಸಿದೆ.
ಇದರಲ್ಲಿ ಗದಗ ನಗರವು 10 ಸೂಚ್ಯಂಕಗಳೊಂದಿಗೆ ಶುದ್ಧ ಗಾಳಿ ಬೀಸುವ ಅತ್ಯುತ್ತಮ ನಗರವಾಗಿ ಗುರುತಿಸಲ್ಪಟ್ಟಿದೆ. ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್​ 11 ಸೂಚ್ಯಂಕಗಳೊಂದಿಗೆ ಎರಡನೇ ಸ್ಥನದಲ್ಲಿದೆ. ರಾಜ್ಯದ ಯಾದಗಿರಿ 14 ಸೂಚ್ಯಂಕಗಳೊಂದಿಗೆ ಮೂರನೇ, ಹುಬ್ಬಳ್ಳಿ 21 ಸೂಚ್ಯಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರೆ, 25 ಸೂಚ್ಯಂಕಗಳೊಂದಿಗೆ ಬಾಗಲಕೋಟೆಯು 6, 26 ಸೂಚ್ಯಂಕಗಳೊಂದಿಗೆ ಬೀದರ್​ ಮತ್ತು ರಾಯಚೂರು ಏಳನೇ ಸ್ಥಾನ ಹಂಚಿಕೊಂಡಿವೆ. ದಾವಣಗೆರೆ 27, ಮೈಸೂರು 28, ಕಲಬುರಗಿ 29 ಸೂಚ್ಯಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಮಂಡಳಿಯ ವರದಿಯಂತೆ ಗಾಳಿ ಗುಣಮಟ್ಟದ ಸೂಚ್ಯಂಕದಲ್ಲಿ 0&50 ಬಂದರೆ ತುಂಬಾ ಕಡಿಮೆ ಕಲುಷಿತ ಗಾಳಿ ಎಂದು ಪರಿಗಣಿಸಲಾಗುತ್ತದೆ.
| ಶೋಭಾ ಪೋಳ ಪರಿಸರ ಅಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
