ಗದಗ:ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದವನ ಉದ್ದೇಶ ಹಣ ಮಾಡುವುದೇ ಹೊರತು ಜನರ ಸೇವೆ ಮಾಡುವುದಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತಹ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.
ನೂತನವಾಗಿ ಆಯ್ಕೆಯಾದ ಚಿಂಚಲಿ ಗ್ರಾಮ ಪಂಚಾಯತಿ 3ನೇ ವಾರ್ಡ್ ಸದಸ್ಯ ಮುತ್ತಪ್ಪ ಸಂದಕದ ಅಂದಾ ದರ್ಬಾರ್ ಆರಂಭವಾಗಿದೆ. ಫಲಿತಾಂಶ ಬಂದು ಒಂದು ವಾರವೂ ಕಳೆದಿಲ್ಲ. ಪಂಚಾಯಿತಿಯಲ್ಲಿ ಇನ್ನು ಅಧ್ಯಕ್ಷ-ಉಪಾಧ್ಯಕ್ಷರೇ ಆಯ್ಕೆಯಾಗಿಲ್ಲ. ಅಷ್ಟರಲ್ಲೇ ಮುತ್ತಪ್ಪ ಸಂದಕದ ತನ್ನ ದುರ್ಬುದ್ಧಿಯನ್ನು ತೋರಿದ್ದಾನೆ.
ಇದನ್ನೂ ಓದಿರಿ:ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!
ಸಂದಕದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಂದಕದ ಸುಮಾರು ಐದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆನ್ನಲಾಗಿದೆ. ಹಣ ಮಾತ್ರವಲ್ಲದೆ ಮದ್ಯದ ಹೊಳೆಯನ್ನು ಹರಿಸಿದ್ದಾನೆ. ಹೀಗಾಗಿ ಇಷ್ಟೊಂದು ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಮನೆಯ ನಾಲ್ಕನೇಯ ಬಿಲ್ ಬಿಡುಗಡೆ ಮಾಡಲು ನನಗೆ ಲಂಚ ಕೊಡಬೇಕು ಎಂದು ಒತ್ತಾಯಿಸಿದ್ದಾನೆ. ಅಲ್ಲದೆ, ಹಣ ಕೊಡಲು ಆಗದಿದ್ದರೆ ಲೈಂಗಿಕವಾಗಿ ಸಹಕರಿಸಬೇಕೆಂದು ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವ ಆರೋಪ ಸಂದಕದ ವಿರುದ್ಧ ಕೇಳಿಬಂದಿದೆ.
ಗ್ರಾಮದ ಅಂಗನವಾಡಿ ಕಾರ್ಯಕರ್ತೆಗೆ ಸಂದಕದ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಇನ್ನು ಸಂದಕದ ಎರಡನೇ ಭಾರಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾನೆ. ಇತ್ತ ಸದಸ್ಯನ ಕಿರುಕುಳಕ್ಕೆ ಎರಡು ಮಕ್ಕಳ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಮುಳಗುಂದ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೀವ ಭಯದಿಂದಲೇ ಮಹಿಳೆ ಈವರೆಗೆ ದೂರು ದಾಖಲು ಮಾಡಿಲ್ಲ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿರಿ:ವೃದ್ಧ ಮಹಿಳೆಯ ಭೀಕರ ಹತ್ಯೆ! ಆಸ್ತಿಗಾಗಿ ಸಂಬಂಧಿಕರಿಂದಲೇ ನಡೆಯಿತಾ ದುಷ್ಕೃತ್ಯ?
ಸುದೀಪ್ ಅಭಿನಯದ ಫ್ಯಾಂಟಮ್​ನಲ್ಲಿ ಜಾಕ್​ಲೀನ್ ಡಾನ್ಸ್

ರಾಜ್ಯಕ್ಕೆ ಮತ್ತೆ ಕರೆಂಟ್ ಶಾಕ್?; ಯೂನಿಟ್​ಗೆ 1.39 ರೂ. ಹೆಚ್ಚಳಕ್ಕೆ ಶೀಘ್ರ ಪ್ರಸ್ತಾವನೆ

ಸಂಚಾರ ಪೊಲೀಸರ ಕಿರಿಕಿರಿ: ದಂಡ ವಸೂಲಿ ಹೆಸರಲ್ಲಿ ಕಿರುಕುಳ, ಕಾನೂನು ಅರಿವಿನ ಕೊರತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − one =
Remember me
