ಬೆಂಗಳೂರು:ಕರೊನಾ ತಂದೊಡ್ಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಲಾಕ್​ಡೌನ್​ ವೇಳೆ ಕೆಲಸ ಕಳೆದುಕೊಂಡ ಗಗನಸಖಿಯ ಸಂಸಾರದಲ್ಲಿ ವಿರಸ ಉಂಟಾಗಿ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮೃತಹಳ್ಳಿ ಸಮೀಪದ ಕೆಂಪಾಪುರ ನಿವಾಸಿ ಪರಿಣಿತ ಬೋರಾ (26) ಮೃತರು. ಅಸ್ಸಾಂ ಮೂಲದ ಪರಿಣಿತ ಮತ್ತು ವಿಶಾಲ್​ 3 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ 1 ವರ್ಷದ ಗಂಡು ಮಗುವಿದೆ. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಣಿತ ಗಗನಸಖಿ ಆಗಿದ್ದರು. ವಿಶಾಲ್​ ಖಾಸಗಿ ದೂರ ಸಂಪರ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದಿಂದ ಕೆಂಪಾಪುರದಲ್ಲಿ ನೆಲೆಸಿದ್ದ ದಂಪತಿಯ ಬದುಕು ಅನ್ಯೋನ್ಯವಾಗಿತ್ತು.
ಇದನ್ನೂ ಓದಿರಿಭೂಸಮಾಧಿ ಆದ ನಾರಾಯಣಾಚಾರ್​ರ ಮನೆಯಲ್ಲಿತ್ತು ಲಕ್ಷ ಲಕ್ಷ ಹಣ , ಚಿನ್ನಾಭರಣ?
ಕರೊನಾ ಲಾಕ್​ಡೌನ್​ ಬಳಿಕ ಪರಿಣಿತ ಕೆಲಸದಿಂದ ವಜಾಗೊಂಡಿದ್ದರು. ಅದೇ ಸಮಯಕ್ಕೆ ವಿಶಾಲ್​ ಕೂಡ ನಿರುದ್ಯೋಗಿಯಾದ. ಇದಾದ ಬಳಿಕ ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ಸೋಮವಾರ ರಾತ್ರಿ ಕೂಡ ಪರಿಣಿತ ಮತ್ತು ವಿಶಾಲ್​ ನಡುವೆ ಗಲಾಟೆಯಾಗಿದೆ. ಕೊಠಡಿಗೆ ತೆರಳಿದ ಪರಿಣಿತ ನೇಣು ಬಿಗಿದುಕೊಂಡಿದ್ದಾರೆ. ಮನೆ ಕೆಲಸದಾಕೆ ರಾತ್ರಿ ಗಮನಿಸಿ ಪೊಲೀಸ್​ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತಳ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಅವರು ನೀಡುವ ದೂರು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ಕಡಲ್ಕೊರೆತ, ಪ್ರಾಣಾಪಾಯದಿಂದ ಸಚಿವ ಪಾರು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
