ಬೆಂಗಳೂರು:ಸಣ್ಣ ಸಣ್ಣ ಮತ ಬ್ಯಾಂಕ್ ಹೊಂದುವಂತಹ ಗ್ರಾಮ ಪಂಚಾಯಿತಿ ಸದಸ್ಯರು, ತಮ್ಮ ಪರವಾಗಿರಬೇಕೆಂಬ ಹಂಬಲದಿಂದ ಮೂರೂ ರಾಜಕೀಯ ಪಕ್ಷಗಳು ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ. 5761 ಗ್ರಾಪಂಗಳ 92 ಸಾವಿರ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ತಮ್ಮ ಪಕ್ಷದ ಪರ ಒಲವುಳ್ಳವರೇ ಆಯ್ಕೆಯಾಗಬೇಕೆಂಬ ನಿಟ್ಟಿನಲ್ಲಿ ಶಕ್ತಿ ಸಾಮರ್ಥ್ಯ ತೋರ್ಪಡಿಸಲು ರಾಜಕೀಯ ನಾಯಕರು ಮುಂದಾಗಿರುವುದರಿಂದ ಹಿಂದೆಂದಿಗಿಂತಲೂ ಈ ಮಿನಿ ಮತಸಮರ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
ಮುಂಚಿತವಾಗಿ ಎಚ್ಚೆತ್ತ ಬಿಜೆಪಿ: ಗ್ರಾಮ ಸ್ವರಾಜ್ಯ ಅಭಿಯಾನಸರಣಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸುವ ಮೂಲಕ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆ ತಯಾರಿಯಲ್ಲಿ ಇತರ ಎರಡು ಪಕ್ಷಗಳಿಗಿಂತ ಎರಡು ಹೆಜ್ಜೆ ಮುಂದಿದೆ. ಸಚಿವರು, ಶಾಸಕರು, ಪ್ರಮುಖ ನಾಯಕರನ್ನು ಸಮಾವೇಶದಲ್ಲಿ ತೊಡಗಿಸುವ ಮೂಲಕ ಗಂಭೀರತೆ ತರಿಸಿದೆ. ಜನರ ಮೇಲೆ ಪರಿಣಾಮ ಬೀರುವಂತೆಯೂ ಮಾಡಿಕೊಂಡು ಬಂದಿದೆ. ಸಿಎಂ ಹೊರತುಪಡಿಸಿದರೆ, ಬಹುತೇಕ ಸಚಿವರಿಗೆ ಪಕ್ಷವು ವೇಳಾಪಟ್ಟಿ ನೀಡಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಮುಂದಿನ ಹಂತದಲ್ಲಿ ಪಕ್ಷದ ಪರ ಒಲವಿರುವ ಅಭ್ಯರ್ಥಿಗಳನ್ನು ಹುಡುಕಿ, ಗೆಲ್ಲಿಸಿಕೊಂಡು ಬರಲು ಗ್ರಾಪಂವಾರು ಜವಾಬ್ದಾರಿಗಳನ್ನು ನೀಡಲು ಬಯಸಿದೆ. ಪಕ್ಷದ ಸಂಘಟನೆಯು ವಿಧಾನಸಭಾ ಚುನಾವಣೆ ತಯಾರಿ ಮಾದರಿಯಲ್ಲೇ ಒತ್ತುಕೊಟ್ಟಿರುವುದು ಅಚ್ಚರಿ ತಂದಿದೆ. ಹಾಗೆಯೇ ಸರ್ಕಾರದ ತೀರ್ವನಗಳು, ಯೋಜನೆಗಳನ್ನು ಜನರಿಗೆ ಮುಟ್ಟಿಸಲು ತಂಡ ನಿಗದಿ ಮಾಡಲಾಗುತ್ತದೆ.
ಗ್ರಾ.ಪಂ. ಚುನಾವಣೆ ಎದುರಿಸಲು ಪಕ್ಷ ಸಕಲ ರೀತಿಯಲ್ಲಿ ಸಜ್ಜಾಗಿದೆ. ಎಂಪಿ ಚುನಾವಣೆ ಮಾದರಿಯಲ್ಲೇ ಶ್ರಮಿಸಲು ಕಾರ್ಯಕರ್ತರು ಸರ್ವಸನ್ನದ್ಧರಾಗಿದ್ದಾರೆ.| ನಳಿನ್​ಕುಮಾರ್ ಕಟೀಲ್ಬಿಜೆಪಿ ರಾಜ್ಯಾಧ್ಯಕ್ಷ
ಹೊಸ ಹುಮ್ಮಸ್ಸಲ್ಲಿ ಜೆಡಿಎಸ್: ನಿಖಿಲ್-ಪ್ರಜ್ವಲ್ ಜೋಡಿ, ಮೋಡಿರಾಜ್ಯಾದ್ಯಂತ ತನ್ನ ಬಲ ವಿಸ್ತರಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಎಂದು ಭಾವಿಸಿರುವ ಜೆಡಿಎಸ್, ಸೂಕ್ತ ತಯಾರಿ ನಡೆಸಿದೆ. ಹಳೇ ಮೈಸೂರು ಭಾಗ ಹೊರತುಪಡಿಸಿ ಉಳಿದೆಡೆ ಹೆಚ್ಚೆಚ್ಚು ಸ್ಥಳೀಯ ಸಂಸ್ಥೆ ಸದಸ್ಯರನ್ನು ಹೊಂದಿದರೆ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಈ ಪ್ರಯತ್ನ ಜತೆಗೆ ವಿಧಾನಸಭೆ ಚುನಾವಣೆ ಗೆಲ್ಲುವಷ್ಟು ಕಷ್ಟವಲ್ಲ. ಕೊಂಚ ಯೋಚಿಸಿ ತೀರ್ಮಾನ ಕೈಗೊಂಡರೆ ಬೇರು ಮಟ್ಟದಲ್ಲಿ ಪಕ್ಷವನ್ನು ನೆಲೆಗೊಳಿಸಬಹುದೆಂದು ದಳಪತಿಗಳು ಅಂದಾಜಿಸಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಅವರೇ ಈ ಚುನಾವಣೆ ಜವಾಬ್ದಾರಿ ತೆಗೆದುಕೊಂಡು ಪಕ್ಷದ ನೊಗ ಹೊರುತ್ತಿರುವುದು ವಿಶೇಷ ಸಂಗತಿ. ಮಂಡ್ಯ, ಹಾಸನ, ರಾಮನಗರ, ಮೈಸೂರು ಹೊರತುಪಡಿಸಿ ಉಳಿದ ಕಡೆಗಳಲ್ಲೂ ಯುವಕರಿಗೆ ಹೆಚ್ಚೆಚ್ಚು ಅವಕಾಶ ನೀಡುವ ಮೂಲಕ ಹೊಸ ಕಾರ್ಯತಂತ್ರ ರೂಪಿಸುತ್ತಿದೆ. ಈಗಾಗಲೆ ರಾಜ್ಯ ಮಟ್ಟದಲ್ಲಿ ಸಭೆ ನಡೆಸಿದ್ದು, ಮುಂದೆ ಜಿಲ್ಲೆ ಮಟ್ಟದಲ್ಲೂ ಸಭೆಗಳನ್ನು ಮಾಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಪಕ್ಷದ ಬೇರು ಬಿಡಲು ಯೋಜನೆ ರೂಪಿಸಲಿದೆ.
ಚುನಾವಣೆ ಅಂದ್ರೆ ಏನು ಎಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತೋರಿಸುತ್ತೇವೆ. ವಿಧಾನಸೌಧದಲ್ಲಿ ಮತ್ತೆ ಪಕ್ಷದ ಧ್ವಜ ಹಾರಿಸುತ್ತೇವೆ.| ಪ್ರಜ್ವಲ್ ರೇವಣ್ಣಸಂಸದ
ಕಾಂಗ್ರೆಸ್​ನಲ್ಲೀಗ ತರಾತುರಿ: ‘ಪ್ರಜಾಪ್ರತಿನಿಧಿ’ ಪ್ರಯೋಗಕರೊನಾ ಇದ್ದರೂ ಪರವಾಗಿಲ್ಲ, ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕೆಂದು ಅಪೇಕ್ಷೆ ಪಟ್ಟಿದ್ದು ಕಾಂಗ್ರೆಸ್. ತಯಾರಿ ಮಾತ್ರ ಮಾಡಿಕೊಂಡಿಲ್ಲ. ಸೋಮವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ಚುನಾವಣೆ ಬಗ್ಗೆ ಮೊದಲ ಬಾರಿ ಚರ್ಚೆ ನಡೆಸಿದೆ. ಪಕ್ಷವನ್ನು ಕೇಡರ್ ಬೇಸ್ ಪಕ್ಷವಾಗಿ ಮಾಡಲು, ಪಂಚಾಯಿತಿ ಹಾಗೂ ಬೂತ್ ಮಟ್ಟದಲ್ಲಿ ಸಮಿತಿ ರಚಿಸಲು ಬಯಸಿದ್ದು, ಅದಕ್ಕೆ ಪ್ರಜಾ ಪ್ರತಿನಿಧಿ ಎಂದು ಹೆಸರಿಡಲಾಗುತ್ತದೆ, ಗ್ರಾಪಂ ಚುನಾವಣೆಯಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ತಯಾರಿ ನಡೆಸಲಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನಾಯಕರು ಸೇರಿ 9 ತಂಡಗಳನ್ನು ರಚನೆ ಮಾಡುತ್ತಿದ್ದು, ಅವರು ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಪ್ರವಾಸ ಮಾಡಲಿದ್ದಾರೆ. ಸರ್ಕಾರದ ತಪ್ಪುಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಸುವುದು ಮತ್ತು ಜನರ ಕೈಗೆ ಅಧಿಕಾರ ನೀಡುವ ಕಲ್ಪನೆ ಇಟ್ಟುಕೊಂಡಿರುವ ಚುನಾವಣೆಗೆ ಧುಮುಕಲು ಪಕ್ಷದ ನಾಯಕರು ಬಯಸಿದ್ದಾರೆ.
ಗ್ರಾ.ಪಂ. ಚುನಾವಣೆ ನಡೆಯಬೇಕು ಎಂದು ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಮತದಾನದ ವೇಳೆ ಕೋವಿಡ್ ನಿಯಮ ಪಾಲನೆ ಬಗ್ಗೆ ಸರ್ಕಾರ, ಅಧಿಕಾರಿಗಳು ನೋಡಿಕೊಳ್ಳಬೇಕು.| ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಪ್ರಾಮುಖ್ಯತೆ ಏಕೆ?
ಪಕ್ಷಕ್ಕೇಕೆ ಮಹತ್ವ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
