ತುಮಕೂರು:ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ರೆ ಆಗೋದೆ ಬೇರೆ ಎಂಬ ಮಾತು ಜಿಲ್ಲಾ ಕಾಂಗ್ರೆಸ್​ಗೆ ಸಂಬಂಧಸಿದ ಫ್ಲೆಕ್ಸ್​ಗೆ ಅಕ್ಷರಶಃ ಅನ್ವಯಿಸುತ್ತೆ. ಎರಡು ದಿನದ ಹಿಂದೆ ನಗರದಾದ್ಯಂತ ಹಾಕಲಾಗಿದ್ದ ಪಕ್ಷದ ಮುಖಂಡರ ಭಾವಚಿತ್ರವುಳ್ಳ ಫ್ಲೆಕ್ಸ್​ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಸಾಸಲು ಸತೀಶ್ ಅಧಿಕಾರ ಸ್ವೀಕಾರ ಸಮಾರಂಭ ಇತ್ತು. ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್​ನಿಂದ ನಗರದಲ್ಲಿ ಫ್ಲೆಕ್ಸ್​ ಹಾಕಲಾಗಿತ್ತು. ಅಲ್ಲೇ ನೋಡಿ ಆಗಿದ್ದು ಯಡವಟ್ಟು. ಯಾರ ಜಯಂತಿ ಪ್ರಯುಕ್ತ ಫ್ಲೆಕ್ಸ್​ ಹಾಕಲಾಗಿತ್ತೋ ಅದರಲ್ಲಿ ಅವರ ಭಾವಚಿತ್ರಗಳೇ ಇರಲಿಲ್ಲ. ಬದಲಿಗೆ ಕಾಂಗ್ರೆಸ್​ ಮುಖಂಡರ ಫೋಟೋಗಳೇ ರಾರಾಜಿಸುತ್ತಿದ್ದವು. ಗಾಂಧಿ ಮತ್ತು ಶಾಸ್ತ್ರಿ ಅವರ ಭಾವಚಿತ್ರ ಹಾಕುವುದನ್ನೇ ಜಿಲ್ಲಾ ಕಾಂಗ್ರೆಸ್​ ಮರೆತಿತ್ತು.
ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರುಗಳಿಂದ ತುಂಬಿಹೋಗಿರುವ ಫ್ಲೆಕ್ಸ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕೆಲವರು ಗಾಂಧಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರ ಹುಡುಕಿಕೊಟ್ಟವರಿಗೆ ಬಹುಮಾನ ಎಂದು ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ. ಅಲ್ಲದೆ ಕಾಂಗ್ರೆಸ್ ನಡೆಯ ಬಗ್ಗೆ ತೀವ್ರ ವ್ಯಂಗ್ಯವಾಡಿರುವ ಟ್ರೋಲಿಗರು, ರಾಷ್ಟ್ರಪಿತ ಗಾಂಧೀಜಿ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ಸಿಗರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
https://m.facebook.com/story.php?story_fbid=1946410782162829&id=100003817783883&sfnsn=wiwspwa
https://m.facebook.com/story.php?story_fbid=203895494416708&id=100792004727058&sfnsn=wiwspwa
ಬೆಳಗ್ಗೆ ಮನೆಯಲ್ಲಿದ್ದ ಬಾಲಕ ಮಧ್ಯಾಹ್ನ ಪೊದೆಯಲ್ಲಿ ಶವವಾಗಿ ಬಿದ್ದಿದ್ದ !

ಪ್ರಭಾವಿ ನಾಯಕರಿಗೆ ಅನುಶ್ರೀ ಫೋನ್​ ಕಾಲ್​: ‘ಮಾಜಿ ಸಿಎಂ’ ಎಂದಿದ್ದಕ್ಕೆ ಕಿಡಿಕಾರಿದ ಕುಮಾರಸ್ವಾಮಿ

ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 19 =
Remember me
