ಬೆಂಗಳೂರು:ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆ ನಿಮಿತ್ತ 21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ- ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು 24, 25ರಂದು ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವೀಯತೆ ಎದುರಿಸುತ್ತಿರುವ ಸವಾಲುಗಳೊಂದಿಗೆ ಗಾಂಧಿಯವರು ಪ್ರತಿಪಾದಿಸಿದ ಚಿಂತನೆಗಳು ಮತ್ತು ಕಾಳಜಿಗಳು ಗಾಢವಾಗಿ ಅನುರಣಿಸುತ್ತವೆ.
ಇವೆಲ್ಲವನ್ನೂ ಒಗ್ಗೂಡಿಸಿ ದೇಶ ವಿದೇಶಗಳ ಚಿಂತನೆಗಳನ್ನು ಗಾಂಧಿವಾದಿಗಳು, ತಂತ್ರಜ್ಞರು ಮತ್ತು ಚಿಂತಕರನ್ನು ಸೇರಿಸಿ ಚರ್ಚೆ, ಸಂವಾದ ನಡೆಸುವುದಕ್ಕೆ ಎರಡು ದಿನಗಳ ವಿಚಾರ ಸಂಕಿರಣ ವೇದಿಕೆಯಾಗಲಿದೆ.
ಜನತಾಂತ್ರಿಕ ವ್ಯವಸ್ಥೆಯಲ್ಲಿ ಭಿನ್ನಮತ, ಆರೋಗ್ಯಕರ ಚರ್ಚೆಯ ಅವಕಾಶಗಳನ್ನು ಕುಗ್ಗದಂತೆ ನೋಡಿಕೊಳ್ಳಲು ಗಾಂಧಿ ಸ್ಮಾರಕ ನಿಧಿ ಕ್ರಿಯಾಶೀಲವಾಗಿ ಪ್ರಯತ್ನಿಸುತ್ತಿದೆ. ಇವತ್ತಿನ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ. ಯುವಪೀಳಿಗೆಗೂ ಕಟ್ಟಿಕೊಡುತ್ತವೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಗಾಂಧಿ ಸಂಘರ್ಷ ನಿರ್ಣಯ ಮತ್ತು ಶಾಂತಿ ನಿರ್ಮಾಣ, ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಗಾಗಿ ಗಾಂಧೀಜಿ, ಗಾಂಧಿ, ಪ್ರಜಾತಂತ್ರ ಮತ್ತು ಭಿನ್ನಾಭಿಪ್ರಾಯ, ಗಾಂಧಿ ಮೌಲ್ಯಗಳು ಮತ್ತು ತಂತ್ರಜ್ಞಾನ ಕ್ರಾಂತಿಕಾರಿ ಶಕ್ತಿ: ಸಮ್ಮಿಳಿತ ಸಾಧ್ಯವೆ ?, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧರ್ಮಗಳ ನಡುವಿನ ಸಂವಾದ ಮತ್ತು ಗಾಂಧಿ, ಜಾಗತೀಕರಣ ಮತ್ತು ಜಾಗತಿಕ ಆಳ್ವಿಕೆ ವಿಷಯಗಳು ಆಧಾರಿತ ಚರ್ಚೆಗಳು ನಡೆಯಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದರೆ, ಗಾಂಧಿಯವರ ಮರಿಮೊಮ್ಮಗ ತುಷಾರ ಗಾಂಧಿ ದಿಕ್ಸೂಚಿ ಭಾಷಣ, ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.
ಗಾಂಧಿ ಸ್ಮಾರಕ ನಿಧಿ ಕರ್ನಾಟಕ ಶಾಖೆ ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್ ಮಾತನಾಡಿ ಒಟ್ಟು 28 ಜನ ವಾಗ್ಮಿಗಳು ಭಾಗವಹಿಸಲಿದ್ದಾರೆ. ಈ ಪೈಕಿ 20 ಜನ ನೇರ, ಎಂಟು ಜನರು ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಳ್ಳುವರು.
ಹೈಕೋರ್ಟ್ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್, ಅಂಕಣಕಾರ ಸುಧೀಂದ್ರ ಕುಲಕರ್ಣಿ, ಗಾಂಧಿವಾದಿ ಹೆಗ್ಗೋಡು ಪ್ರಸನ್ನ, ಪಬ್ಲಿಕ್ ರಿಸೋರ್ಸ್ ಸಂಸ್ಥೆಯ ಕಾರ್ಲ್ ಮಲಪಡ್, ಬೆಂಗಳೂರಿನ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ಸ್ವಾಮಿ ನಿತ್ಯಸ್ಥಾನಂದ ಸ್ವಾಮೀಜಿ, ಅರ್ಚ್ ಬಿಷಪ್ ೆಲಿಕ್ಸ್ ಮಚಾಡೋ ಖುದ್ದು ವಿಚಾರ ಮಂಡಿಸಲಿದ್ದಾರೆ.
ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಟೆಲಿಕಾಂ ಉದ್ಯಮದ ಪ್ರವರ್ತಕ ಸ್ಯಾಮ್ ಪಿತ್ರೋಡ, ಶ್ರೀಲಂಕಾದ ಸರ್ವೋದಯ ಶ್ರಮದಾನ ಸಂಸ್ಥೆ ಅಧ್ಯಕ್ಷ ವಿನಯ ಅರಿಯರತ್ನೆ ವರ್ಚುವಲ್ ವೇದಿಕೆಯಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ.
ಅಮೆರಿಕ, ಬಾಂಗ್ಲಾ, ಚೀನಾ, ದಕ್ಷಿಣಕೊರಿಯಾ ದೇಶಗಳ ವಿದ್ವಾಂಸರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ದೇಶಗಳ 25 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ವಿಶುಕುಮಾರ್ ವಿವರಿಸಿದರು.
ಗಾಂಧಿ ಸ್ಮಾರಕ ನಿಧಿ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಎಚ್.ಬಿ.ದಿನೇಶ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 19 =
Remember me
