ಹಾಸನ:ರಾಜ್ಯದಲ್ಲಿ ಫ್ಲೆಕ್ಸ್ ಸಂಘರ್ಷ ಮುಗಿಯುವ ಹಾಗೆ ಕಾಣುತ್ತಿಲ್ಲ. ಸಾರ್ವಕರ್ ಫೋಟೋದಿಂದ ಆರಂಭಗೊಂಡ ಫ್ಲೆಕ್ಸ್ ಗಲಾಟೆ ಇನ್ನೂ ಮುಂದುವರಿದಿದ್ದು, ಹಾಸನದಲ್ಲೂ ಫ್ಲೆಕ್ಸ್​ವೊಂದನ್ನು ಛಿದ್ರಗೊಳಿಸಲಾಗಿದೆ. ಇದಕ್ಕೂ ರಾಜಕೀಯ ಲೇಪ ಇರುವ ಲಕ್ಷಣಗಳು ಗೋಚರಿಸಿವೆ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಗಣೇಶ ಚತುರ್ಥಿಗೆ ಶುಭಾಶಯ ಕೋರಿ ರಸ್ತೆಯ ಬದಿಯಲ್ಲಿ ಫ್ಲೆಕ್ಸ್ ಅಳವಡಿಸಿದ್ದರು. ಅದರಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೋಟೋಗಳೂ ಇದ್ದವು. ಆದರೆ ಅದನ್ನು ಬಳಿಕ ಛಿದ್ರಗೊಳಿಸಲಾಗಿದೆ.
ವ್ಯಕ್ತಿಯೊಬ್ಬ ಫ್ಲೆಕ್ಸ್​ಗೆ ದೊಡ್ಡ ಬಡಿಗೆಯಿಂದ ಹೊಡೆದು ಹರಿದು ಹಾಕಿದ್ದು, ಸಂಪೂರ್ಣವಾಗಿ ಹಾಳುಗೆಡವಲಾಗಿದೆ. ಇದರ ವಿಡಿಯೋ ಕೂಡ ವೈರಲ್ ಆಗಿದ್ದು, ಕೆಲವೆಡೆ ಆಕ್ಷೇಪವೂ ವ್ಯಕ್ತವಾಗಿದೆ. ಫ್ಲೆಕ್ಸ್ ಛಿದ್ರಗೊಳಿಸಿದ ವ್ಯಕ್ತಿ ಸಕಲೇಶಪುರ ಬಿಜೆಪಿ ಯುವ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಮಿಥುನ್​ ಎನ್ನಲಾಗಿದೆ. ಆದರೆ ಫ್ಲೆಕ್ಸ್​ಗೆ ಹಾನಿ ಮಾಡಲು ಏನು ಕಾರಣ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.
ಪಾಕ್​ ವಿರುದ್ಧ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ; ಕ್ರಿಕೆಟ್​ನಲ್ಲಿ ಭಾರತ ಗೆಲ್ಲಲಿ ಎಂದು ಕೋರಿಕೆ..

ರಾಜ್ಯಸಭೆ ಸದಸ್ಯ ಜಗ್ಗೇಶ್ ಮನೆ ಒಳಗೆಲ್ಲ ಕೆಸರು; ಕಾವೇರಿ ನಿಗಮಕ್ಕೆ ನಟನ ವಿನಂತಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 + seven =
Remember me
