ಬೆಂಗಳೂರು:ಗಣೇಶ ಚತುರ್ಥಿ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. 10 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ವಿನಾಯಕನನ್ನು ಪೂಜಿಸಿ 11ನೇ ದಿನ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಅದ್ದೂರಿಯಾಗಿ ಆಚರಿಸುವ ಈ ಗಣೇಶ ಚತಿರ್ಥಿ ಯಾವಾಗ? ಶುಭ ಮುಹೂರ್ತ ಹಾಗೂ ಪೂಜಾ ವಿಧಿಗಳ ಬಗ್ಗೆ ತಿಳಿಯೋಣ….

10 ದಿನಗಳ ಕಾಲ ನಡೆಯುವ ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುವುದು. ಆದರೆ ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗಣೇಶನನ್ನು ಶಾಸ್ತ್ರೋಕ್ತವಾಗಿ ಪೂಜಿಸುವ ಹಬ್ಬದ ವಿಧಾನ, ಪೂಜೆ, ಮಹೂರ್ತಗಳ ಕುರಿತಾಗಿ ಇಲ್ಲಿದೆ ಮಾಹಿತಿ…..
ಈ ವರ್ಷವು ಹಬ್ಬವನ್ನು ಸೆಪ್ಟೆಂಬರ್ 18ರ ಜತೆಗೆ ಸೆಪ್ಟೆಂಬರ್ 19 ರಂದು ಆಚರಿಸಲಾಗುತ್ತದೆ. ಇದರಿಂದಾಗಿ ಕೆಲವರು ಸೆ.18ರಂದು ವಿನಾಯಕ ಚೌತಿ ಆಚರಿಸಿದರೆ, ಇನ್ನು ಕೆಲವರು ಸೆ.19ರಂದು ಆಚರಿಸಲಿದ್ದಾರೆ. ಗಣಪತಿಗೆ ಪತ್ರಿನಿತ್ಯ ಒಂದು ರೀತಿಯ ವೀಶೇಷ ಪೂಜೆ ಮಾಡಲಾಗುತ್ತದೆ. ನಂತರ ಸೆ.28ರಂದು ಗಣಪತಿ ವಿಸರ್ಜನೆ ಮಾಡಲಾಗತ್ತದೆ. ಗಣಪತಿಯನ್ನು ಪೂಜಿಸಲು ಸರಿಯಾದ ಪೂಜಾ ವಿಧಾನವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಹಿನ್ನಲೆಯಲ್ಲಿ ವಿನಾಯಕ ಚೌತಿಯ ಶುಭ ಮುಹೂರ್ತವನ್ನು ತಿಳಿಯೋಣ.

ಗಣೇಶ ಚತುರ್ಥಿ ಪೂಜಾ ವಿಧಾನ: ಗಣೇಶ ಚತುರ್ಥಿಯಂದು ಮುಂಜಾನೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ. ಶುಭ ಮುಹೂರ್ತದಲ್ಲಿ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಶುಭ ಮುಹೂರ್ತದಲ್ಲಿ ಮನೆಗೆ ತಂದು ಪೀಠದ ಮೇಲೆ ಇಡಿ. ಗಣಪತಿಯನ್ನು ಪ್ರತಿಷ್ಠಾಪಿಸಿದ ನಂತರ 10 ದಿನಗಳ ಕಾಲ ವಿಧಿವಿಧಾನಗಳ ಪ್ರಕಾರ ಗಣೇಶನನ್ನು ಪೂಜಿಸಿ. 11 ನೇ ದಿನ ನಿಯಮಾನುಸಾರ ಭಕ್ತಿಯಿಂದ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಿ.

ವಿನಾಯಕ ಚವತಿ ಆಚರಿಸುವ ಸಮಯ :ಹಿಂದೂ ಪಂಚಾಂಗದ ಪ್ರಕಾರ ವಿನಾಯಕ ಚವಿತಿ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12.39 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಅಂದರೆ ಸೆಪ್ಟೆಂಬರ್ 19 ರಂದು ರಾತ್ರಿ 8.43 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಆಚರಿಸಲಾಗುವುದು. ಗಣೇಶ ಪೂಜೆಯನ್ನು ಮಾಡಲು ಶುಭ ಸಮಯ 2 ಗಂಟೆ 27 ನಿಮಿಷಗಳು. ಈ ಸಮಯವು ಬೆಳಿಗ್ಗೆ 11:01 ರಿಂದ ಮಧ್ಯಾಹ್ನ 01:28 ರವರೆಗೆ ಇರುತ್ತದೆ. ಗಣೇಶ ಚತುರ್ಥಿಯಂದು ಬೆಳಿಗ್ಗೆ 09:45 ರಿಂದ ರಾತ್ರಿ 08:44 ರವರೆಗೆ ಚಂದ್ರನನ್ನು ನೋಡದಂತೆ ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಗಣೇಶ ಚತುರ್ಥಿಯನ್ನು ವಿಘ್ನಲಕಾಧಿಪತಿ ಗಣಪತಿಯನ್ನು ಮೆಚ್ಚಿಸಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಗಣಪತಿಯನ್ನು ಮನಃಪೂರ್ವಕವಾಗಿ ಪೂಜಿಸಿದರೆ ಆತನ ಕೃಪೆಗೆ ಪಾತ್ರರಾಗಬಹುದು.
ಗಮನಿಸಿ :ಗಣೇಶ ಚತುರ್ಥಿ ಪೂಜಾ ವಿಧಾನ ಹಾಗೂ ಯಾವ ದಿನ ಆಚರಿಸಬೇಕು ಎನ್ನುವ ಗೊಂದಲಗಳು ನಿಮ್ಮಲ್ಲಿದ್ದರೆ ಹೆಚ್ಚಿನ ಮಾಹಿತಿಗಾಗಿ ಜ್ಯೋತಿಷಿಗಳ ಬಳಿ ಕೆಲವು ಸಲಹೆ ಪಡೆಯಬಹುದಾಗಿದೆ.
ನಿಶ್ಚಿತಾರ್ಥಕ್ಕೆ ಬಂದ ಅತಿಥಿಗಳಿಗೆ ಭಗವದ್ಗೀತೆಯ ಪ್ರತಿಗಳನ್ನು ಗಿಫ್ಟ್​​ ಕೊಟ್ಟ ವರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 19 =
Remember me
