ವಿಜಯಪುರ:ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರಿಂದಾಗಿ ಗಣೇಶನ ಗೋಲ್ಡನ್ ಟೆಂಪಲ್​ ಕುಸಿದು ಬಿದ್ದ ಪ್ರಕರಣವೊಂದು ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ಸಾರ್ವಜನಿಕ ಗಣೇಶ ಮಂಟಪ ಶನಿವಾರ ಸಂಜೆ ದಿಢೀರನೆ ಕುಸಿದು ಬಿದ್ದಿದ್ದು, ಕೆಲವರು ಗಾಯಗೊಂಡಿದ್ದಾರೆ.
ವೆಲ್ಲೋರದ ಗೋಲ್ಡನ್ ಟೆಂಪಲ್ ಮಾದರಿಯಲ್ಲಿ ನಿರ್ಮಾಣಗೊಂಡಿದ್ದ ಈ ಸಾರ್ವಜನಿಕ ಗಣೇಶನ ಮಂಟಪ, ಪಟ್ಟಣದಲ್ಲಿ ಈ ಸಲದ ವಿಶೇಷ ಮಂಟಪವಾಗಿತ್ತು. ಹೀಗಾಗಿ ಈ ಗೋಲ್ಡನ್ ಟೆಂಪಲ್ ಗಣೇಶನನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು. ಇಂದು ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗಿದ್ದು, ಅವರೆಲ್ಲ ಮಂಟಪಕ್ಕೇರಿದ್ದೇ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಮಕ್ಕಳು, ಮಹಿಳೆಯರು, ಯುವಕರು ಮಂಟಪದಲ್ಲಿನ ಗಣೇಶನ ದರುಶನಕ್ಕೆ ನಿಂತ ವೇಳೆಯಲ್ಲಿ ಮಂಟಪದ ಮಧ್ಯದ ಸ್ಥಳವೇ ಏಕಾಏಕಿ ಕುಸಿದಿದೆ. ಆಗ ಮಂಟಪದಲ್ಲಿದ್ದ ಜನರು ಮೇಲೆ ಬಿದ್ದ ಮಂಟಪವನ್ನು ತಕ್ಷಣವೇ ಕೈಯಿಂದ ಮೇಲೆ ಎತ್ತಿ ಹಿಡಿಯುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಅದಾಗ್ಯೂ ಈ ಘಟನೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಯುವಕರು ಸೇರಿ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ವೃತ್ತದ ಬಳಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಂಟಪದಲ್ಲಿನ ಗಣೇಶನ ವಿಗ್ರಹವೂ ಹಾನಿಗೀಡಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಬರ್ತ್​​ಡೇಗೆ ಕೇಕು-ಹೂಗುಚ್ಛ ಬೇಡ, 18 ಪದಗಳೇ ಸಾಕು: ಅಭಿಮಾನಿಗಳಲ್ಲಿ ವಿಶಿಷ್ಟ ಬೇಡಿಕೆ ಇಟ್ಟ ಉಪೇಂದ್ರ!
Sign in to your account
Please enter an answer in digits:two + twelve =
Remember me
