ಕೊಪ್ಪಳ:ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಹೋಲುವ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಬೇಡ್ಕರ್ ನಗರದಲ್ಲಿ ಶ್ರೀ ವಿನಾಯಕ ಸ್ನೇಹ ವೃಂದದವರು ಈ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇದನ್ನು ದಲಿತ ಸಮುದಾಯದವರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಗಣೇಶನನ್ನು ವಿಸರ್ಜನೆ ಮಾಡಿದರೆ ಅಂಬೇಡ್ಕರ್ ಅವರನ್ನೇ ವಿಸರ್ಜನೆ ಮಾಡಿದಂತಾಗುತ್ತದೆ ಎಂಬುದು ಅವರ ವಾದ.
ದಲಿತ ಸಮುದಾಯದ ಎರಡು ಗುಂಪುಗಳ ನಡುವೆ ಉಂಟಾದ ಈ ಅಭಿಪ್ರಾಯ ಭೇದ ನಿನ್ನೆ ವಾಗ್ವಾದದ ರೂಪ ಪಡೆದಿತ್ತು. ಪೊಲೀಸರ ಜತೆಗೂ ಕೆಲವರು ತೀವ್ರ ವಾಗ್ವಾದ ನಡೆಸಿದ್ದರು. ನಂತರ ಈ ಮೂರ್ತಿ ತಯಾರಿಸಿದವರು ಮತ್ತು ಪ್ರತಿಷ್ಠಾಪನೆ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೂರ್ತಿ ಪ್ರತಿಷ್ಠಾಪಿಸಿದ ಸಂಸ್ಥೆಯ ವಿರುದ್ಧ ಇಂದು ಪ್ರಕರಣ ದಾಖಲಾಗಿದೆ.
ಇಂದಿನ ಯುವಕರಿಗೆ ಹೆಂಡತಿ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’!; ಹೈಕೋರ್ಟ್​

ಸಂಭಾವನೆ ಪಡೆಯದೆ ಪುಣ್ಯಕೋಟಿ ರಾಯಭಾರಿ ಆದ ಸುದೀಪ್​; ಕಿಚ್ಚನಿಗೆ ಸರ್ಕಾರದಿಂದಲೇ ಬರ್ತ್​ಡೇ ಗಿಫ್ಟ್​

ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..

Sign in to your account
Please enter an answer in digits:ten − 6 =
Remember me
