ತುಮಕೂರು:ಈ ಊರಲ್ಲಿ ಗಣೇಶ ಚೌತಿ ಬದಲು ಕಾರ್ತೀಕ ಮಾಸದಲ್ಲಿ ಗಣೇಶೋತ್ಸವ ನಡೆಯಲಿದೆ. ಕಾರ್ತೀಕ ಮಾಸದಲ್ಲಿ ಗೂಳೂರಿನಲ್ಲಿ 1 ತಿಂಗಳು ಗಣೇಶ ಉತ್ಸವ ನಡೆಯುವುದು ವಿಶೇಷ. ಬಲಿಪಾಡ್ಯಮಿಯಂದು ಗಣೇಶಮೂರ್ತಿಗೆ ಕಣ್ಣುಧಾರಣೆ ಮಾಡಲಾಗುವುದು. ಅಂದಿನಿಂದ 1 ತಿಂಗಳವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಇಲ್ಲಿ ಗಣೇಶ ಚೌತಿಯಂದು ಗಣೇಶ ಮೂರ್ತಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಆಯುಧಪೂಜೆ, ವಿಜಯದಶಮಿ ಹೊತ್ತಿಗೆ ಗಣೇಶ ಮೂರ್ತಿ ಒಂದು ಆಕಾರಕ್ಕೆ ಬರಲಿದೆ. ಆ ಸಂದರ್ಭದಲ್ಲಿ ಅದರ ನಾಬಿಯೊಳಗೆ ಚಿಕ್ಕಗಣಪತಿ ಕೂರಿಸಲಾಗುವುದು. ಕಾರ್ತೀಕ ಪಾಡ್ಯ ಪ್ರಾರಂಭವಾಗುವ ವೇಳೆಗೆ ಸರ್ವಾಲಂಕಾರ ಭೂಷಿತನಾಗಿ ರೂಪಗೊಳ್ಳುವ ಗಣಪತಿಗೆ ಬಲಿಪಾಡ್ಯಮಿಯಂದು ಬೆಳಗ್ಗೆ ಶುಭ ಮಹೂರ್ತದಲ್ಲಿ ದೃಷ್ಟಿ ಧಾರಣೆ ಮೂಲಕ ಪ್ರಥಮ ಪೂಜೆಗೆ ಅಣಿಗೊಳಿಸಲಾಗುವುದು. ಅಲ್ಲಿಂದ ಆರಂಭವಾಗುವ ಗಣೇಶ ಉತ್ಸವ 1 ತಿಂಗಳ ನಡೆಯಲಿದೆ.
ಈ ವರ್ಷ ನ.16 ರಿಂದ ಡಿ.20ರವರೆಗೆ ಗಣೇಶೋತ್ಸವ ಜರುಗಲಿದೆ. 1 ತಿಂಗಳ ಕಾಲ ಗಣೇಶಮೂರ್ತಿಗೆ ನಿತ್ಯ ವಿಶೇಷ ಪೂಜೆ ನಡೆಯಲಿದೆ. ಡಿ.19 ರಂದು ರಾತ್ರಿ ಶ್ರೀ ಮಹಾಗಣಪತಿ ಸ್ವಾಮಿ ಉತ್ಸವ ಜರುಗಲಿದೆ. ಡಿ.20 ರಂದು ಸಂಜೆ 5ಕ್ಕೆ ಗೂಳೂರು ಕೆರೆಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 18 =
Remember me
