ಕಾರವಾರ/ಹಳಿಯಾಳ:ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯನನ್ನು ಅಪಹರಣ ಮಾಡಿದ ಆರೋಪದ ಮೇರೆಗೆ ಶುಕ್ರವಾರ ಮೂವರನ್ನು ಬಂಧಿಸಲಾಗಿದೆ.
ಗಂಗಾವತಿ ಕಾರ್ಪೋರೇಟರ್​ ಮನೋಹರಸ್ವಾಮಿ ಎಂಬುವವರನ್ನು ಅಪಹರಿಸಿ ಹಳಿಯಾಳಕ್ಕೆ ಕರೆತಂದಿದ್ದ ಗಂಗಾವತಿಯ ರಾಕೇಶ ಅಡಿವೆಪ್ಪ ನಾಯಕ (24), ಬಸವರಾಜ ಮಲ್ಲಪ್ಪ ಉಪ್ಪಾರ (22), ಶರಣಬಸು ಬಸವರಾಜ ವಂಕಲಕುಂಟೆ (24) ಬಂಧಿತರು. ಇನ್ನೊಬ್ಬ ಆರೋಪಿ ಲಿಂಗರಾಜ ಕ್ಯಾಂಪ್​ನ ರವಿ ಕುರುಬರ ತಲೆಮರೆಸಿಕೊಂಡಿದ್ದಾನೆ.
ನ.2ರಂದು ಗಂಗಾವತಿ ನಗರಸಭೆಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಪರ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಅ.29ರಂದು ಕಾರ್ಪೋರೇಟರ್​ ಮನೋಹರಸ್ವಾಮಿಯನ್ನು ಗಂಗಾವತಿಯ ಬಾರ್​ವೊಂದರಿಂದ ನಾಲ್ವರು ಅಪಹರಿಸಿದ್ದರು. ಈ ವೇಳೆ ಮಬ್ಬು ಬರುವ ಸ್ಪ್ರೇ ಸಿಂಪಡಿಸಿದ್ದರು. ಇನ್ನೊವಾ ಕಾರಿನಲ್ಲಿ ಕಾರ್ಪೋರೇಟರ್​ನನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ಕರೆ ತಂದಿದ್ದರು.
ಇಲ್ಲಿನ ಲಾಡ್ಜ್​ವೊಂದಕ್ಕೆ ಸ್ಥಳಾಂತರಿಸುವ ವೇಳೆ ಬೆಳಗಿನ ಜಾವ 4.20ರ ಸುಮಾರಿಗೆ ಕಾರ್ಪೋರೇಟರ್​ ಕೂಗಿಕೊಂಡಿದ್ದರು. ಅವರನ್ನು ಹಳಿಯಾಳ ಪೊಲೀಸರು ರಕ್ಷಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಅಪಹರಣ ಸಂಬಂಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲರನ್ನೂ ಗಂಗಾವತಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಶಿವರಾಜ ತಂಗಡಗಿ, ಕಿಡ್ನಾಪ್ ಮಾಡುವ ಸಂಸ್ಕೃತಿಯನ್ನು ಕೊಪ್ಪಳ ಜಿಲ್ಲೆಗೆ ಬಿಜೆಪಿ ಪರಿಚಯಿಸಿದೆ ಎಂದು ಕಿಡಿಕಾರಿದ್ದಾರೆ.
ಆಟವಾಡುತ್ತಲೇ ಲಿಫ್ಟ್​ ಗುಂಡಿಗೆ ಬಿದ್ದು ಪ್ರಾಣಬಿಟ್ಟ 2 ವರ್ಷದ ಮಗು!

‘ಕನಕಪುರ ಬಂಡೆಯಲ್ಲಿ ಕ್ರಿಶ್ಚಿಯನ್ ಮೂರ್ತಿ ಸ್ಥಾಪಿಸುವಾಗ ಒಕ್ಕಲಿಗರು ನೆನಪಾಗಲಿಲ್ಲವೇ?’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
