ಉಡುಪಿ:ಲಾಕ್​ಡೌನ್​ ಇದ್ದರೂ ಅನಗತ್ಯವಾಗಿ ಗೂಡ್ಸ್​ ವಾಹನದೊಂದಿಗೆ ರಸ್ತೆಗಿಳಿದ ಚಾಲಕನೊಬ್ಬ ಬೀದಿಬದಿಯ ಕಸ ಹೆಕ್ಕಿ ತನ್ನದೇ ವಾಹನದಲ್ಲಿ ಡಂಪಿಂಗ್ ಯಾರ್ಡ್​ಗೆ ಸಾಗಿಸುವ ಶಿಕ್ಷೆ ಎದುರಿಸಿದ್ದಾನೆ. ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಈ ಶಿಕ್ಷೆ ವಿಧಿಸಿದ್ದಾರೆ.
ಗೂಡ್ಸ್​ ವಾಹನ ಚಾಲಕನೊಬ್ಬ ಉಡುಪಿಯ ನಿಟ್ಟೂರು ಪ್ರದೇಶದಲ್ಲಿ ಅನಗತ್ಯವಾಗಿ ಓಡಾಟ ನಡೆಸುವಾಗ ಅಪರ ಜಿಲ್ಲಾಧಿಕಾರಿಯವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ತರಾಟೆಗೆ ತೆಗೆದುಕೊಂಡ ಅಪರ ಜಿಲ್ಲಾಧಿಕಾರಿ ದಂಡ ಕಟ್ಟುವ ಅಥವಾ ಕಸ ಹೆಕ್ಕುವ ಆಯ್ಕೆ ಕೊಟ್ಟಿದ್ದಾರೆ. ಆದರೆ ದಂಡದ ಬದಲು ಕಸ ಹೆಕ್ಕುವುದಾಗಿ ವ್ಯಕ್ತಿ ಹೇಳಿಕೊಂಡಿದ್ದಾನೆ.
ಬಳಿಕ ಅಲ್ಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕಸವನ್ನು ಹೆಕ್ಕಿಸಲಾಯಿತು. ನಂತರ ಆ ಕಸವನ್ನು ಆತನದೇ ಗೂಡ್ಸ್​ ವಾಹನದಲ್ಲಿ ಡಂಪಿಂಗ್ ಯಾರ್ಡ್​ಗೆ ಕಳುಹಿಸಿಕೊಡಲಾಯಿತು. ಹೀಗೆ ವ್ಯಕ್ತಿಯೊಬ್ಬ ಅನಗತ್ಯವಾಗಿ ಹೊರಗಡೆ ಓಡಾಡಿದ್ದಕ್ಕೆ ತಕ್ಕಶಾಸ್ತಿ ಅನುಭವಿಸಿದಂತಾಗಿದೆ.
ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
