ಬೆಂಗಳೂರು:ಕಳೆದ ಕೆಲವು ವಾರಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಬೆಳ್ಳಳ್ಳಿ ಕಬಾಬ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ರೆಸಿಪಿ ತಿಂದರೆ ಒನ್ ಮೋರ್, ಒನ್ ಮೋರ್ ಅಂತ ಹೇಳಬೇಕು, ಚಟಪಟ, ಚಟಪಟ ಎಂಬ ಡೈಲಾಗ್​ಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ಸದ್ಯ ಇದೊಂದು ಟ್ರೆಂಡ್ ಆದಂತೆ ಬೆಳ್ಳುಳ್ಳಿ ಕಬಾಬ್​ಗೆ ಕೂಡ ಬೇಡಿಕೆ ಹೆಚ್ಚಿದ್ದು, ಅದರ ಜತೆಗೆ ಬೆಳ್ಳುಳ್ಳಿ ದರ ಕೂಡ ದುಬಾರಿಯಾಗಿದೆ. ಇದೀಗ ಈ ಬೆಲೆ ಬಿಸಿ ಸದ್ಯ ಜನಸಾಮಾನ್ಯರ ಮೇಲೆ ಕೊಂಚ ಒತ್ತಡ ಹೇರಿದಂತೆ ಕಾಣುತ್ತಿದೆ.
ಇದನ್ನೂ ಓದಿ:ವಿಜಯವಾಣಿ ವರದಿ ಪ್ರತಿಧ್ವನಿ: ಮುದ್ರಾಂಕ ಶುಲ್ಕದ ಭಾರ ಇಳಿಸಲು ರುದ್ರಗೌಡ ಒತ್ತಾಯ
ದರ ಏರಿಕೆಯ ಬೆನ್ನಲ್ಲೇ ಬೆಳ್ಳುಳ್ಳಿ ಕಬಾಬ್ ದುಬಾರಿಯಾಗಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಸಾಮಾನ್ಯವಾಗಿ ನಾವೆಲ್ಲಾ ನೋಡಿರುವಂತೆ ಏಕಾಏಕಿ ಟೊಮೊಟೊ, ಈರುಳ್ಳಿ ಬೆಲೆಗಳಲ್ಲಿ ಮಾತ್ರ ದಿಢೀರ್ ಏರಿಕೆ ಕಾಣುತ್ತಿತ್ತು. ಈ ದರ ಏರಿಕೆ ಬಿಸಿಯಿಂದ ಜನರು ತತ್ತರಿಸುತ್ತಿದ್ದರು. ಆದರೆ, ಕೆಲವು ದಿನಗಳ ನಂತರ ದರದಲ್ಲಿ ಇಳಿಕೆ ಕಂಡುಬರುತ್ತಿದ್ದನ್ನು ಗಮನಿಸಿದ್ದೇವೆ. ಇದೀಗ ಈ ಗಾಳಿ ಬೆಳ್ಳುಳ್ಳಿಗೂ ಬೀಸಿದೆ!
ಅಡುಗೆ ಮನೆಯಲ್ಲಿ ಅದರಲ್ಲೂ ಹೆಚ್ಚಾಗಿ ಮಾಂಸದ ಅಡಿಗೆಗೆ ರುಚಿ ತರುವ ಬೆಳ್ಳುಳ್ಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಸದ್ಯ ಬೆಳ್ಳುಳ್ಳಿಗೆ ಬಂಪರ್ ಬೆಲೆ ಬಂದಿದ್ದು, ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ಉತ್ಪಾದನೆ ಕುಂಠಿತಗೊಂಡು, ಮಾರುಕಟ್ಟೆಗಳಲ್ಲಿ ಪೂರೈಕೆಯಲ್ಲಿ ಭಾರಿ ಕಡಿತ ಉಂಟಾಗಿದೆ. ಈ ಕಾರಣಗಳಿಂದ ದಿಢೀರ್​ ಬೆಳ್ಳುಳ್ಳಿ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ.
ಇದನ್ನೂ ಓದಿ:ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣದ ವೇಳೆ ಕಲ್ಲು ತೂರಾಟ! ಗಾಯಗೊಂಡ ಸಚಿವ
ಮಳೆಯ ಕೊರತೆಯಿಂದ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಹಾಗೂ ಹೈಬ್ರಿಡ್ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ರಾಜ್ಯದಲ್ಲಿ ಕಳೆದ ಡಿಸೆಂಬರ್‌ನ ಮೂರನೇ ವಾರದಲ್ಲಿ ಬೆಳ್ಳುಳ್ಳಿ ದರವು ಏರಿಕೆಯ ಹಾದಿ ಹಿಡಿದಿತ್ತು. ಅಂದಿನಿಂದ ಇಲ್ಲಿಯವರೆಗೂ ಬೆಲೆ ಇಳಿಕೆ ಕಂಡಿಲ್ಲ. ಕಳೆದ ನಾಲ್ಕು ದಿನಗಳಿಂದ ಸಗಟು ಬೆಳ್ಳುಳ್ಳಿ ದರವು ಕೆ.ಜಿಗೆ 20-30 ರೂ. ಇಳಿಕೆಯಾಗಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಧಾರಣೆ ಮಾತ್ರ ಇಳಿಕೆಯಾಗಿಲ್ಲ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹೈಬ್ರಿಡ್ ಬೆಳ್ಳುಳ್ಳಿ ಒಂದು ಕೆ.ಜಿಗೆ 60-80 ರೂ. ಹಾಗೂ ಜವಾರಿ ಬೆಳ್ಳುಳ್ಳಿ 90ರಿಂದ 120 ರೂ. ಇತ್ತು. ಪ್ರಸ್ತುತ ಹೈಬ್ರಿಡ್ 400-430 ರೂ. ಮತ್ತು ಜವಾರಿ 440-480 ರೂ.ಗೆ ಮಾರಾಟವಾಗುತ್ತಿದೆ.
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
