ಬೆಂಗಳೂರು:ರಾಜಧಾನಿಯ ಹೋಟೆಲೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹೋಟೆಲ್​ನ ಏಳು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಇಂದಿರಾನಗರದ ಎಚ್​ಡಿಎಫ್​ಸಿ ಸಿಗ್ನಲ್ ಬಳಿ ನ್ಯೂ ಶಾಂತಿ ಸಾಗರ್ ಹೋಟೆಲ್​ನಲ್ಲಿ ಈ ಅವಘಡ ಸಂಭವಿಸಿದೆ.
ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿನ ಈ ಹೋಟೆಲ್​ನ ಕಿಚನ್​ನಲ್ಲಿ ಗ್ಯಾಸ್​ ಸೋರಿಕೆಯ ವಾಸನೆ ಬಂದ ಕಾರಣ, ಸಿಬ್ಬಂದಿ ಪರೀಕ್ಷಿಸಿಲೆಂದು ಬಳಿಗೆ ಹೋದ ಸಂದರ್ಭದಲ್ಲೇ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡಿದೆ.
ಗ್ಯಾಸ್ ಲೀಕ್ ಆಗುತ್ತಿದ್ದಂತೆ ಗ್ರಾಹಕರನ್ನು ಸಿಬ್ಬಂದಿ ಹೊರಗಡೆ ಕಳಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಹೋಟೆಲ್​ನ ಏಳು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹೊಟೆಲ್ ಸಿಬ್ಬಂದಿಗಳಾದ ನರಸಿಂಹ (50), ಜಗ್ಗ (52), ಗಂಗಾಧರ (38), ಕೃಷ್ಣ (23), ಕೃಷ್ಣ (54) ಸೇರಿ 7 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಮೂವರು ಸಿಬ್ಬಂದಿ ಉತ್ತರ ಭಾರತ ಮೂಲದವರು.
52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 12 =
Remember me
