ಬೆಂಗಳೂರು ದಕ್ಷಿಣ:ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟ, ರಾಗಿಹಳ್ಳಿ ಹಾಗೂ ಮಂಟಪ ಗ್ರಾಮ ಪಂಚಾಯಿತಿಯ ಹಲವೆಡೆ ಕಾಲ್ನಡಿಗೆ ಮೂಲಕ ಗಾಯತ್ರಿ ಕೃಷ್ಣಪ್ಪ ಮತಯಾಚನೆ ನಡೆಸಿದರು.
ಕ್ಷೇತ್ರದಲ್ಲಿ ಮಾಡಿರುವ ಹಲವು ಜನಪರ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿದ ಅವರು, ‘ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿಯೇ ಭರವಸೆ’ ಎಂಬುದನ್ನು ಪುನರುಚ್ಚರಿಸಿದರು. ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರನ್ನು ಮತ್ತೊಂದು ಬಾರಿ ಗೆಲ್ಲಿಸುವ ಮೂಲಕ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಅಭಿವೃದ್ಧಿಗಾಗಿ ಕಮಲಕ್ಕೆ ಮತ ಚಲಾಯಿಸಿ: ಮತದಾರರಿಗೆ ಮಹದೇವಪುರ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಮನವಿ
ಮನೆ ಬಳಿ ಬಂದವರಿಗೆ, ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಅಬ್ಬರದ ಪ್ರಚಾರವಿಲ್ಲದೆ ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದಾರೆ. ಜನರ ಪ್ರಶ್ನೆಗಳಿಗೆ ಕೈಗೊಂಡಿರುವ ಅಭಿವೃದ್ಧಿಯೊಂದೇ ಉತ್ತರ ಎಂದು ನಂಬಿದ್ದಾರೆ. ನಿಮ್ಮೆಲ್ಲ ಸಮಸ್ಯೆಗಳಿಗೆ ಬಿಜೆಪಿಯೇ ಪರಿಹಾರ ಎಂದರು. ರಸ್ತೆಯುದ್ದಕ್ಕೂ ನೆರೆದಿದ್ದ ಜನರು ಗಾಯತ್ರಿ ಕೃಷ್ಣಪ್ಪ ಅವರಿಗೆ ಜೈಕಾರ ಹಾಕಿ ಬರಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಯರಾಮ್ ಮುಖಂಡರಾದ ಪ್ರೇಮಾ, ಬಾಬು ಸಿಂಗ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ಗಾಯತ್ರಿ ಕೃಷ್ಣಪ್ಪ ಅವರಿಗೆ ಸಾಥ್ ನೀಡಿದರು.
ರಸ್ತೆ ಅಭಿವೃದ್ದಿ, ಒಳಚರಂಡಿ,110 ಹಳ್ಳಿಗಳಿಗೆ ಕುಡಿಯುವ ನೀರು, ಸರ್ಕಾರಿ ಶಾಲೆಗಳಿಗೆ ಕಟ್ಟಡ, ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಹತ್ತುಹಲವು ಮೂಲಸೌಕರ್ಯಗಳನ್ನು ಒದಗಿಸಿರುವ ಅಭಿವೃದ್ಧಿ ಆಧಾರದ ಮೇಲೆ ಮತಯಾಚನೆ ನಡೆಸುತ್ತಿದ್ದೇವೆ. ಪ್ರಜ್ಞಾವಂತ ಮತದಾರರು ಬಿಜೆಪಿ ಬೆಂಬಲಿಸಿ ಅತಿಹೆಚ್ಚು ಮತಗಳ ವಿಜಯದ ಮಾಲೆಯನ್ನು ಎಂ. ಕೃಷ್ಣಪ್ಪ ಅವರಿಗೆ ತೊಡಿಸಲಿದ್ದಾರೆ.
| ಜಯರಾಮ್ ಜಿಪಂ ಮಾಜಿ ಸದಸ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯೇ ಭರವಸೆ: ಎಂ.ಕೃಷ್ಣಪ್ಪ ಪ್ರತಿಪಾದನೆ

ಎಂ. ಕೃಷ್ಣಪ್ಪ ಮಂತ್ರಿಯಾಗುತ್ತಾರೆ; ಬಿಜೆಪಿ ಯುವ ಮುಖಂಡ ಸುಪ್ರೀತ್​ ಭವಿಷ್ಯ

ಎಂ. ಕೃಷ್ಣಪ್ಪ ಪಾದಯಾತ್ರೆ; ಬೆಂಗಳೂರು ದಕ್ಷಿಣದಲ್ಲಿ ಮತ್ತೊಮ್ಮೆ ಗೆಲುವಿನ ವಿಶ್ವಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
