ಬೆಂಗಳೂರು:ರಕ್ತದಾನ ಬಗ್ಗೆ ಇರುವ ತಪ್ಪು ಕಲ್ಪನೆ ದೂರ ಮಾಡುವ ಮೂಲಕ ಸಾರ್ವಜನಿಕರಲ್ಲಿ ಸ್ವಯಂಪ್ರೇರಿತವಾಗಿ ಹೆಚ್ಚು ರಕ್ತದಾನ ಮಾಡಲು ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಕೆಂಪೇಗೌಡ ವೈದ್ಯಕಿಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಡಾ.ಬಿ.ಸಿ.ಭಗವಾನ್​ ಅಭಿಪ್ರಾಯಪಟ್ಟರು.
ವಿಶ್ವ ರಕ್ತದಾನಿಗಳ ದಿನ ನಿಮಿತ್ತ ಲಯನ್ಸ್​ ಕ್ಲಬ್​ ಸಹಭಾಗಿತ್ವದಲ್ಲಿ ಶಿಲ್ಪಾ ಫೌಂಡೇಷನ್​, ಬನಶಂಕರಿ 2ನೇ ಹಂತದ ಬ್ರಿಗೇಡ್​ ಸಾಫ್ಟ್​​​​​​ವೇರ್​ ಪಾರ್ಕ್​ನಲ್ಲಿ ಶುಕ್ರವಾರ ಆಯೋಜಿಸಿದ್ದ “ರಕ್ತದಾನ ಶಿಬಿರ’ ದಲ್ಲಿ ಮಾತನಾಡಿದರು. ರಕ್ತದಾನ ಮಾಡುವವರು ಆರೋಗ್ಯದಿಂದ ಇರುತ್ತಾರೆ. ಒಂದು ಬಾರಿ ರಕ್ತದಾನ ಮಾಡಿದ ನಂತರ ಕೆಲವೇ ದಿನಗಳಲ್ಲಿ ದೇಹದಲ್ಲಿ ರಕ್ತ ಮರು ಶೇಖರಣೆಯಾಗುತ್ತದೆ. ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡಿದರೆ ಜೀವದಾನ ಮಾಡಿದಂತಾಗುತ್ತದೆ. ಆದ್ದರಿಂದ, ಯುವಜನಾಂಗ ರಕ್ತದಾನ ಮಾಡಲು ಮುಂದೆ ಬರಬೇಕೆಂದರು.
ಕೊಲೆ ಪ್ರಕರಣ:ದರ್ಶನ ಹಾಗು ಆತನ ಸಹಚರರ ವಿರುದ್ಧ ಪ್ರತಿಭಟನೆನೂರಾರು ಐಟಿ, ಬಿಟಿ ಉದ್ಯೋಗಿಗಳು ರಕ್ತದಾನ ಮಾಡಿದರು. ಐಪಿಎಸ್​ ಅಧಿಕಾರಿ ಮತ್ತು ದಕ್ಷಿಣ ಟ್ರಾಫಿಕ್​ ವಿಭಾಗದ ಉಪ ಆಯುಕ್ತ ಶಿವಪ್ರಕಾಶ್​ ದೇವರಾಜು, ಶಿಲ್ಪಾ ಫೌಂಡೇಷನ್​ ಸಂಸ್ಥಾಪಕ ಅಚ್ಯುತ್​ ಗೌಡ, ಫಿಡಲಿಟಸ್​ ಎಚ್​ಆರ್​ ಲ್ಯಾಬ್​ನ ನಿರ್ದೇಶಕಿ ಸುಹಾಸಿನಿ ದೇಶಪಾಂಡೆ ರಕ್ತದಾನ ಕುರಿತು ಪ್ರತಿಜ್ಞಾನ ವಿಧಿ ಸ್ವೀಕರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
