ಬೆಂಗಳೂರು:ರಾಜ್ಯ ಸರ್ಕಾರ ಗಿಗ್ ಕಾರ್ವಿುಕರಿಗೆ ‘ಜೀವನ ಭದ್ರತೆ, ಕುಟುಂಬ ನೆಮ್ಮದಿ’ಯ ಉಡುಗೊರೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಿಸಿದ್ದ ‘ರಾಜ್ಯ ಗಿಗ್ ಕಾರ್ವಿುಕರ ವಿಮಾ ಯೋಜನೆ’ ಬಗ್ಗೆ ರಾಜ್ಯಪತ್ರ (ಗೆಜೆಟ್) ಹೊರಡಿಸಲಾಗಿದ್ದು, ಸೆ. 7ರಿಂದಲೇ ಈ ಯೋಜನೆ ಜಾರಿಯಾಗಿದೆ. ಯೋಜನೆಯ ಸುಗಮ, ಸುಸೂತ್ರ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಸ್ವಿಗ್ಗಿ, ಜೊಮ್ಯಾಟೋ ಇತ್ಯಾದಿ ಆಹಾರ ವಿಲೇವಾರಿ ಮಾಡುವವರು, ಅಮೆಜಾನ್, ಫ್ಲಿಪ್​ಕಾರ್ಟ್, ಬಿಗ್ ಬಾಸ್ಕೆಟ್ ಮುಂತಾದ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ ಅರೆಕಾಲಿಕ ಡೆಲಿವರಿ ಸಿಬ್ಬಂದಿ ಈ ಯೋಜನೆ ಫಲಾನುಭವಿಗಳಾಗಿದ್ದಾರೆ. ಬೆಂಗಳೂರು ಮಹಾನಗರ ಸೇರಿ ರಾಜ್ಯದೆಲ್ಲೆಡೆ ಪ್ಲಾಟ್​ಫಾಮ್ರ್ ಆಧಾರಿತ ಗಿಗ್ ಕಾರ್ವಿುಕರ ಸಮೀಕ್ಷೆ ಈವರೆಗೆ ನಡೆದಿಲ್ಲ. ಆದರೆ ಕೇಂದ್ರ ಸರ್ಕಾರದ ನೀತಿ ಆಯೋಗದ 2022ರ ವರದಿ ಪ್ರಕಾರ ರಾಜ್ಯದಲ್ಲಿ 2.30 ಲಕ್ಷ ಗಿಗ್ ಕಾರ್ವಿುಕರಿದ್ದಾರೆ. ಈ ಎಲ್ಲರಿಗೂ ಯೋಜನೆ ಅನ್ವಯವಾಗಲಿದೆ.
ನಾಲ್ಕು ಲಕ್ಷ ರೂ. ವಿಮೆ:ಗಿಗ್ ಕಾರ್ವಿುಕರು ಅಸಂಘಟಿತ ವಲಯಕ್ಕೆ ಸೇರಿದವರು. ಈಗಿನ ಕಾರ್ವಿುಕ ಕಾಯ್ದೆಗಳಡಿ ಸಾಮಾಜಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಹಕರಿಗೆ ಸರಕು ಅಥವಾ ಸೇವೆಗಳನ್ನು ನಿಗದಿತ ಸಮಯಕ್ಕೆ ತಲುಪಿಸುವ ಸವಾಲು ಈ ಕಾರ್ವಿುಕರದ್ದು. ಇಂತಹ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಅಪಘಾತದಿಂದ ಮರಣ ಇಲ್ಲವೇ ಅಂಗವಿಕಲರಾದರೆ ಅವರ ಅವಲಂಬಿತ ಕುಟುಂಬದ ಬದುಕು ದುರ್ಬರವಾಗಲಿದೆ. ಹೀಗಾಗಿ ಗಿಗ್ ಕಾರ್ವಿುಕರು ಮತ್ತವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ‘ವಿಮಾ ಯೋಜನೆ’ಯ ಗುರಿಯಾಗಿದೆ. ತಲಾ ಎರಡು ಲಕ್ಷ ರೂ.ಗಳ ಜೀವ ಮತ್ತು ಅಪಘಾತ ಸೇರಿ ಒಟ್ಟು ನಾಲ್ಕು ಲಕ್ಷ ರೂ. ವಿಮೆ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ.
ಅಸಂಘಟಿತ ಕಾರ್ವಿುಕರ ಭದ್ರತಾ ಮಂಡಳಿಯ ಮೂಲಕ ಈ ಯೋಜನೆಗೆ ಜಾರಿಗೊಳಿಸಿದ್ದು, ವಿಮೆ ಸೌಲಭ್ಯಕ್ಕೆ ತಗುಲುವ ನಾಲ್ಕು ಲಕ್ಷ ರೂ.ಗಳ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ.
ಎಲ್ಲ ತುಂಡುಗುತ್ತಿಗೆ ದರದ ಕೆಲಸವೂ ಸೇರಿ ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗಿನ ಚಟುವಟಿಕೆ ಗಳಿಂದ ಆದಾಯ ಗಳಿಸುವ ವ್ಯಕ್ತಿಗಳನ್ನು ಗಿಗ್ ಕಾರ್ವಿುಕರೆಂದು ಗುರುತಿಸಲಾಗುತ್ತದೆ. ನಿರ್ದಿಷ್ಟ ದರ ಪಾವತಿಸುವ ಒಪ್ಪಂದದ ನಿಯಮ, ಷರತ್ತುಗಳ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿ ಗಿಗ್ ಕಾರ್ವಿುಕ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 13 =
Remember me
