ಬೆಂಗಳೂರು:ಹುಷಾರು! ಕಾಂಗ್ರೆಸ್ ನವರು ರಾತ್ರಿ ಹೊತ್ತು ಬಂದು ಕ್ಯೂ ಆರ್ ಕೋಡ್ ಇರುವ ಗ್‌ಟಿ ಕೂಪನ್ನುಗಳನ್ನು ಹಂಚುತ್ತಾರೆ. 3,000 ಹಾಗೂ 5,000 ರೂ. ಮೌಲ್ಯದ ಕೂಪನ್ನುಗಳನ್ನು ಕೊಟ್ಟು ಯಾಮಾರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೆಲಂಗಾಣ ಸೇರಿ ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳ ಮತದಾರರಿಗೆ ಎಚ್ಚರಿಕೆ ನೀಡಿದರು.
ಜೆ.ಪಿ. ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ರಾಮನಗರ, ಮಾಗಡಿ, ಕನಕಪುರ, ಕುಣಿಗಲ್ ಸೇರಿ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಕೂಪನ್ನುಗಳನ್ನು ಹಂಚಿತ್ತು. ಮೊದಲು ವೋಟು ಮಾಡಿ. ಆಮೇಲೆ ಬೆಂಗಳೂರಿಗೆ ಹೋಗಿ ಮಾಲ್ ನಲ್ಲಿ ಕೂಪನ್ ಕೊಟ್ಟು ಅದರ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿತ್ತು ಎಂದು ಆರೋಪಿಸಿದರು.
ವೋಟು ಹಾಕಿದ ಜನ ಮಾಲ್ ಗೆ ಬಂದು ಕೂಪನ್ ಕೊಟ್ಟರೆ, ಈ ಕೂಪನ್‌ಗೆ ಯಾವ ಮೌಲ್ಯವೂ ಇಲ್ಲ. ಅದರಲ್ಲಿ ದುಡ್ಡಿಲ್ಲ. ವಸ್ತುಗಳು ಬೇಕಿದ್ದರೆ ದುಡ್ಡು ಕೊಟ್ಟು ಖರೀದಿ ಮಾಡಿ. ಇಲ್ಲವಾದರೆ ಸುಮ್ಮನೆ ಹೋಗಿ ಎಂದು ಮಾಲ್ ನವರು ಹೇಳಿದ್ದರು. ತೆಲಂಗಾಣದಲ್ಲಿ ಇಂಥ ಕೂಪನ್ನುಗಳನ್ನು ಕಾಂಗ್ರೆಸ್ ಹಂಚುವ ಸಾಧ್ಯತೆ ಇದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ವಾಮಮಾರ್ಗದಿಂದ ಚುನಾವಣೆ ಗೆಲ್ಲುವುದು ಕರತಲಾಮಲಕ. ಹೀಗಾಗಿ ಭಾರತ್ ರಾಷ್ಟ್ರ ಸಮಿತಿ, ಬಿಜೆಪಿ ಸೇರಿದಂತೆ ಕಾಂಗ್ರೆಸ್ ವಿರೋಧಿ ಪಕ್ಷಗಳು ತೀವ್ರ ನಿಗಾ ವಹಿಸಬೇಕು ಎಂದು ಕುಮಾರಸ್ವಾಮಿ ಸಲಹೆ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
