ಬೆಂಗಳೂರು:ಪ್ರೀತಿಸಿದವರಿಗಾಗಿ ಏನೇನೋ ಮಾಡುವ ಯುವಕರನ್ನು ಕೇಳಿರುತ್ತೀರಿ. ಆದರೆ ಪ್ರೀತಿಸಿಯ ಯುವಕನಿಗಾಗಿ ಯುವತಿಯೊಬ್ಬಳು ಗಾಂಜಾ ಮಾರಾಟ ಆರಂಭಿಸುತ್ತಾಳೆ ಎಂದರೆ ನಂಬುತ್ತೀರಾ?
ಹೌದು! ಇಂತದ್ದೊಂದು ವಿಚಿತ್ರ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ರೇಣುಕಾ ಹೆಸರಿನ ಯುವತಿ ಚೆನ್ನೈನಲ್ಲಿ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಸಿದ್ಧಾರ್ಥ್​ ಹೆಸರಿನ ಯುವಕನೊಂದಿಗೆ ಪ್ರೀತಿ ಹುಟ್ಟಿತ್ತು. ಅದಾದ ಮೇಲೆ ಬೆಂಗಳೂರಿಗೆ ಬಂದಿದ್ದ ಸಿದ್ದಾರ್ಥ್​ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಹೊಸ ಬಿಜಿನೆಸ್ ಸ್ಟಾರ್ಟ್ ಮಾಡಿದ್ದೇನೆ, ಒಳ್ಳೆಯ ಲಾಭವಿದೆ, ನೀನೂ ಬಂದು ನನ್ನ ಜತೆ ಕೈ ಜೋಡಿಸು ಎಂದು ರೇಣುಕಾಳಿಗೆ ಬ್ರೈನ್ ವಾಶ್ ಮಾಡಿದ್ದ. ಪ್ರೀತಿ ವಿಚಾರದಲ್ಲಿ ಮನೆಯವರೊಂದಿಗೆ ಜಗಳ ಆಡಿದ ರೇಣುಕಾ ಸಿದ್ಧಾರ್ಥ್​ ಮಾತಿಗೆ ಮರುಳಾಗಿದ್ದಳು.
ರೇಣುಕಾ ಬೆಂಗಳೂರಿಗೆ ಬಂದು ಸಿದ್ಧಾರ್ಥ್​ ಜತೆ ಗಾಂಜಾ ಮಾರಾಟಕ್ಕೆ ಇಳಿದಿದ್ದಳು. ಸಿದ್ಧಾರ್ಥ್​ ಗಾಂಜಾ ತರಿಸಿಕೊಂಡು ಕಸ್ಟಮರ್ ಹುಡುಕುತ್ತಿದ್ದ. ನಂತರ ರೇಣುಕಾಳನ್ನು ರಸ್ತೆ ಪಕ್ಕದಲ್ಲಿರುವ ಓಯೋ ರೂಂಗೆ ಕಳುಹಿಸಿ ಅಲ್ಲಿಗೆ ಕಸ್ಟಮರ್​ ಕಳುಹಿಸಿ, ರೇಣುಕಾಳಿಂದ ಗಾಂಜಾ ಮಾರಿಸುತ್ತಿದ್ದ. ಕಸ್ಟಮರ್ ಜತೆ ರೇಣುಕಾ ಕೂಡ ಕಾನ್ಫರೆನ್ಸ್​ ಕಾಲ್​ನಲ್ಲಿ ಮಾತನಾಡುತ್ತಿದ್ದಳು ಎನ್ನಲಾಗಿದೆ.
ಪೊಲೀಸರಿಗೆ ಅನುಮಾನ ಬರಬಾರದು ಎಂದು ರೇಣುಕಾಳನ್ನು ಬಳಸಿಕೊಂಡು ಸಿದ್ಧಾರ್ಥ್​ ಗಾಂಜಾ ಮಾರಾಟ ಮಾಡುತ್ತಿದ್ದ. ಇದೀಗ ರೇಣುಕಾ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಂತೆಯೇ ಆತ ನಾಪತ್ತೆಯಾಗಿದ್ದಾನೆ. ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.
ಎರಡು ತಿಂಗಳ ಬಳಿಕೆ ಮತ್ತೆ ತಾಜ್​ ಮಹಲ್ ಓಪನ್; ದಿನಕ್ಕೆ 650 ಪ್ರವಾಸಿಗರಿಗೆ ಮಾತ್ರ ಅವಕಾಶ

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 7 =
Remember me
