ಉಡುಪಿ:ಇಲ್ಲಿನ ಪಡುಕೆರೆ ಬೀಚ್​ನಲ್ಲಿ ಬಿಕಿನಿ ಫೋಟೋಶೂಟ್​ ಮಾಡುವುದನ್ನು ತಡೆದ ಪೊಲೀಸರ ಕ್ರಮದ ವಿರುದ್ಧ ಯುವತಿಯೊಬ್ಬಳು ತನ್ನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾಳೆ. ಆದರೆ, ಯುವತಿಯ ನಡೆಯ ವಿರುದ್ಧವೂ ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ.
ಫೋಟೋಶೂಟ್​ಗೆ ಯತ್ನಿಸಿದ ಯುವತಿಯ ಹೆಸರು ಖ್ಯಾತಿ ಶ್ರೀ. ಇನ್​​ಸ್ಟಾಗ್ರಾಂ ಪ್ರೊಫೈಲ್​ ಪ್ರಕಾರ ಈಕೆ ಡಿಜಿಟಲ್​ ಕ್ರಿಯೇಟರ್​. ಪ್ರವಾಸಿ ತಾಣಗಳಲ್ಲಿ ಅಡ್ಡಾಡುವುದು ಈಕೆ ಹವ್ಯಾಸಗಳಲ್ಲಿ ಒಂದು ಎಂಬುದು ಆಕೆಯ ಇನ್​ಸ್ಟಾಗ್ರಾಂ ಪೇಜ್​ ನೋಡಿದರೆ ಗೊತ್ತಾಗುತ್ತದೆ. ಇನ್ನು ಎಕ್ಸ್​ ಖಾತೆಯ ಮಾಹಿತಿ ಪ್ರಕಾರ ಈಕೆ ದೆಹಲಿ ಮೂಲದವಳು. ತಾನೊಬ್ಬ ಸ್ತ್ರೀವಾದಿ, ವರ್ಣವಿರೋಧಿ ಹಾಗೂ ಕೋಮುವಾದದ ಶತ್ರು ಎಂದು ಬರೆದುಕೊಂಡಿದ್ದಾಳೆ. ಅಲ್ಲದೆ, ತನ್ನದೇಯಾದ ಓನ್ಲಿ ಫ್ಯಾನ್ಸ್​ ಖಾತೆಯನ್ನು ಸಹ ಈಕೆ ಹೊಂದಿದ್ದಾಳೆ.
ತಾಜಾ ಸಂಗತಿ ಏನೆಂದರೆ, ಈಕೆ ಇತ್ತೀಚೆಗಷ್ಟೇ ಕರ್ನಾಟಕಕ್ಕೆ ಭೇಟಿ ನೀಡಿದ್ದಳು. ತನ್ನ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವಂತೆ ಗಂಡನ ಜತೆ ಆಗಮಿಸಿದ್ದಳು. ಈ ವೇಳೆ ಉಡುಪಿಯ ಪಡುಕೆರೆ ಬೀಚ್​ನಲ್ಲಿ ಬಿಕಿನಿ ಫೋಟೋಶೂಟ್​ ಮಾಡಿಸಲು ಯತ್ನಿಸಿದ್ದಾಳೆ. ಇದು ಸ್ಥಳೀಯರ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಫೋಟೋಶೂಟ್​ ಮಾಡಿಸುವುದನ್ನು ತಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಿ ಪೊಲೀಸರ ನಡೆಯನ್ನು ಖ್ಯಾತಿಶ್ರೀ ಟೀಕಿಸಿದ್ದಾಳೆ.
ಖ್ಯಾತಿಶ್ರೀ ಹೇಳಿದ್ದೇನು?ಯುವತಿಯರು ಈ ಬೀಚ್​ನಲ್ಲಿ ನಿಜವಾಗಿಯು ಎಂಜಾಯ್​ ಮಾಡುತ್ತಾರೆಯೇ? ಎಂಬ ಪ್ರಶ್ನೆ ಎತ್ತಿರುವ ಖ್ಯಾತಿಶ್ರೀ, ನಾವು ಉಡುಪಿಯ ಪಡುಕೆರೆ ಬೀಚ್​ಗೆ ಭೇಟಿ ಕೊಟ್ಟಿದ್ದೆವು. ಒಳ್ಳೆಯ ಸಮಯವನ್ನು ಕಳೆಯುತ್ತಿದ್ದೆವು. ನನ್ನ ಗಂಡ ನನ್ನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದನು. ಈ ವೇಳೆ ಇಬ್ಬರು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಿಕಿನಿ ಏಕೆ ಧರಿಸಿದ್ದೀರಿ? ಫೋಟೋ ಕ್ಲಿಕ್ಕಿಸಲು ಅನುಮತಿ ಪಡೆದಿದ್ದೀರಾ? ಎಂದು ಪ್ರಶ್ನೆ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ನನ್ನ ಗಂಡ ಬೀಚ್​ನಲ್ಲಿ ಬಿಕಿನಿ ಧರಿಸುವುದು ಕಾನೂನುಬದ್ಧವಾಗಿದೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಫೋಟೋಗ್ರಫಿ ಮಾಡಲು ಯಾವುದೇ ಅನುಮತಿ ಬೇಕಿಲ್ಲ ಎಂದರು. ಈ ವೇಳೆ ಪೊಲೀಸರು ಅಲ್ಲಿಯೇ ಇದ್ದ ಕೆಲ ಸಮಾಜ ವಿರೋಧಿ ಜನರತ್ತ ಕೈತೋರಿಸಿ, ನಿಮ್ಮ ಬಿಕಿನಿಯಿಂದ ಆ ಜನರಿಗೆ ತೊಂದರೆಯಾಗುತ್ತದೆ. ನೀವು ಬಟ್ಟೆ ಬದಲಾಯಿಸಲಿಲ್ಲ ಅಂದರೆ ನಿಮಗೆ ಥಳಿಸುತ್ತಾರೆ. ನಿಮ್ಮ ರಕ್ಷಣೆಗಾದರೂ ಬಟ್ಟೆ ಬದಲಾಯಿಸಿಕೊಳ್ಳಿ ಎಂದರು. ಇದರಿಂದ ನನಗೆ ತುಂಬಾ ಬೇಸರವಾಯಿತು. ನಮ್ಮ ಹಕ್ಕುಗಳನ್ನು ರಕ್ಷಿಸುವ ಬದಲು ಪೊಲೀಸರು ನೈತಿಕ ಪೊಲೀಸ್​ ಗಿರಿ ಪ್ರದರ್ಶಿಸಲು ಬಂದರು. ನಾವು ನಮ್ಮ ರಕ್ಷಣೆಯ ದೃಷ್ಟಿಯಿಂದ ನಮ್ಮ ಕಾಟೆಜ್​ ಒಳಗೆ ಹೋದೆವು. ಕಾಟೇಜ್​ ಒಳಗಡೆಯಿಂದ ಪೊಲೀಸರು ಆ ಗೂಂಡಾಗಳ ಜತೆ ಮಾತನಾಡುವುದನ್ನು ನೋಡಿದೆವು. ನಮ್ಮನ್ನು ಒಳಗೆ ಕಳುಹಿಸಿ ತಾವು ಬೀಚ್​ನಲ್ಲಿ ಆರಾಮಾಗಿ ನಿಂತಿದ್ದರು. ಇದು ನಿಜಕ್ಕೂ ಅನ್ಯಾಯ. ಆದರೆ, ನಾವು ಯಾರಿಗೋ ಹೆದರಿಕೊಂಡು ಕಾಟೇಜ್​ ಒಳಗಡೆ ಕೂರಲಿಲ್ಲ. ನಮ್ಮ ಹಕ್ಕುಗಳನ್ನು ಸಾಧಿಸಲು ಮತ್ತು ಬೀಚ್​ ಸೌಂದರ್ಯವನ್ನು ಸವಿಯಲು ಮತ್ತೆ ಬೀಚ್​ ಕಡೆ ಹೋದೆವು. ಸೂರ್ಯಾಸ್ತದ ಸಮಯದಲ್ಲಿ ಡಾನ್ಸ್​ ಮಾಡಿ, ಫೋಟೋ ತೆಗೆದುಕೊಂಡು ಕತ್ತಲಾಗುವವರೆಗೂ ಸಮಯ ಕಳೆದವು. ಇದನ್ನು ನೋಡಿ ಗೂಂಡಾಗಳಿಗೆ ಖಂಡಿತ ಕೋಪ ಬಂದಿರುತ್ತದೆ. ಆದರೆ, ನಮ್ಮ ರಕ್ಷಣೆಗಾಗಿ ನಮ್ಮ ವಸ್ತುಗಳನ್ನು ಪ್ಯಾಕ್​ ಮಾಡಿ ಉಡುಪಿಯ ಮತ್ತೊಂದು ಗ್ರಾಮದ ಕಡೆ ಹೊರಟೆವು ಎಂದು ಯುವತಿ ಖ್ಯಾತಿ ಶ್ರೀ ಬರೆದುಕೊಂಡಿದ್ದಾಳೆ.
ಇದಿಷ್ಟು ಘಟನೆಯನ್ನು ವಿಡಿಯೋದಲ್ಲಿ ತನ್ನ ಬಿಕಿನಿ ಫೋಟೋಗಳ ಸಮೇತ ಹಂಚಿಕೊಂಡಿದ್ದಾಳೆ. ಪೊಲೀಸರು ಆಗಮಿಸಿದ ಫೋಟೋ ಮತ್ತು ಕೆಲ ವ್ಯಕ್ತಿಗಳ ಗುಂಪಿನ ಫೋಟೋವನ್ನು ಸಹ ಯುವತಿ ವಿಡಿಯೋದಲ್ಲಿ ಬಳಸಿದ್ದಾಳೆ.
A post shared by Khyati Shree (@khyatishree2)

ಯುವತಿ ವಿರುದ್ಧ ಆಕ್ರೋಶಇನ್ನು ಪಡುಕೆರೆ ಬೀಚ್​ನಲ್ಲಿ ಬಿಕಿನಿ ಫೋಟೋಶೂಟ್​ ಮಾಡಿಸಿದ್ದಕ್ಕೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಹಿಂದು ಸಂಘಟನೆ ಕಾರ್ಯಕರ್ತರನ್ನು ಗೂಂಡಾ ಎಂದು ಕರೆದಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಯುವತಿ ಹಂಚಿಕೊಂಡಿರುವ ವಿಡಿಯೋಗೆ ಕಾಮೆಂಟ್​ಗಳ ಸುರಿಮಳೆಯಾಗಿದ್ದು, ಬಹುತೇಕ ನೆಟ್ಟಿಗರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಮಾಡಿದ್ದು ಸರಿ ಇದೆ. ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಸಂಸ್ಕೃತಿಯನ್ನು ಗೌರವಿಸಿ ಎಂದು ಬುದ್ಧಿಮಾತು ಹೇಳಿದ್ದಾರೆ. ಅಲ್ಲದೆ, ಸಭ್ಯ ಉಡುಪುಗಳಲ್ಲಿ ಬೀಚ್ ಆನಂದಿಸಲು ನೀವು ಸ್ವತಂತ್ರರು. ಆದರೆ, ಅಶ್ಲೀಲತೆ ಪ್ರದರ್ಶಿಸಲು ಇದು ಅಮೆರಿವಲ್ಲ, ಇದು ನಮ್ಮ ಭಾರತ. ಇಲ್ಲಿ ನಮ್ಮದೇಯಾದ ಸಂಸ್ಕೃತಿ ಇದೆ. ಅದನ್ನು ಗೌರವಿಸಿ. ನೀವು ಇದೇ ರೀತಿ ಇರಲು ಬಯಸಿದರೆ ಅಮೆರಿಕಕ್ಕೆ ತೆರಳಿ ಎಂದಿದ್ದಾರೆ. ಖ್ಯಾತಿಶ್ರೀ ನಿನ್ನ ತಂದೆ ತಾಯಿ ನಿನಗೆ ಇಷ್ಟು ಪ್ರಸಿದ್ದ ಹೆಸರು ಕೊಟ್ಟು ಆಶೀರ್ವದಿಸಿದ್ದಾರೆ. ಖ್ಯಾತಿ ಅಂದರೆ ಫೇಮಸ್. ಹಾಗಾಗಿ ನಿಮಗೆ ಬೇಕಾದುದನ್ನು ಧರಿಸಿ ಜನಮನ ಸೆಳೆಯಲು ಇದು ಪಾಶ್ಚಿಮಾತ್ಯ ದೇಶವಲ್ಲ. ಇದು ನಮ್ಮ ಭಾರತ. ನಿಮಗೆ ತಿಳಿದಿರುವಂತೆ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಕ್ರೂರ ಘಟನೆಯೊಂದು ಸಂಭವಿಸಿದೆ. ಆದ್ದರಿಂದ ಅಸಾಮಾಜಿಕ ಅಂಶಗಳು ಪ್ರಪಂಚದ ಎಲ್ಲೆಡೆ ಇರುವುದರಿಂದ ಸುರಕ್ಷಿತವಾಗಿರುವುದು ಬಹಳ ಮುಖ್ಯ. ಆದ್ದರಿಂದ ಖ್ಯಾತಿಶ್ರೀ ಸುರಕ್ಷಿತವಾಗಿ ಆಟವಾಡಿ ಎಂದು ನೆಟ್ಟಿಗರು ಕಿವಿಮಾತು ಹೇಳಿದ್ದಾರೆ.
A post shared by Khyati Shree (@khyatishree2)

ಮದುವೆಯಾಗಿ ಮಕ್ಕಳು ಮಾಡಿಕೊಂಡರೆ 31 ಲಕ್ಷ ರೂಪಾಯಿ! ಬಂಪರ್ ಆಫರ್​ ಘೋಷಿಸಿದ ಸರ್ಕಾರ

ಕೊಹ್ಲಿ, ಧೋನಿ, ಸಚಿನ್​ ಅಲ್ಲವೇ ಅಲ್ಲ… ಭಾರತದ ಈ ಯುವ ಆಟಗಾರನೇ ವಿಶ್ವದ ಶ್ರೀಮಂತ ಕ್ರಿಕೆಟಿಗ!

ಅನ್ನ ತಿಂದರೆ ತೂಕ ಹೆಚ್ಚಾಗುತ್ತಾ? ಯಾವ ಸಮಯದಲ್ಲಿ ತಿನ್ನುವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × 2 =
Remember me
