ಬೆಂಗಳೂರು:ಯುವತಿಯರ ಸೋಗಿನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಹುಡುಗಿಯೊಬ್ಬಳ ಸ್ನೇಹ ಬೆಳೆಸಿದ ಇಬ್ಬರು ಪುರುಷರು, ಆಕೆಯ ಖಾಸಗಿ ದೃಶ್ಯಗಳನ್ನು ಕಳುಹಿಸುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆ.ಆರ್.ಪುರದ ಭಟ್ಟರಹಳ್ಳಿ ನಿವಾಸಿ 17 ವರ್ಷದ ಹುಡುಗಿ ಕೊಟ್ಟ ದೂರಿನ ಮೇರೆಗೆ ಮೋನಿಕಾ ಪೆದ್ದು ಮತ್ತು ಅದಿತಿ ಶ್ರೀನಿವಾಸ್ ಎಂಬುವರ ವಿರುದ್ಧ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಥಮ ವರ್ಷ ಪಿಯುಸಿ ಓದುತ್ತಿರುವ ಈ ಹುಡುಗಿ ಕೆಲ ತಿಂಗಳಿಂದ ಇನ್‌ಸ್ಟಾಗ್ರಾಂ ಖಾತೆ ಬಳಕೆ ಮಾಡುತ್ತಿದ್ದು, ಜೂ. 23ರಂದು ಅದಿತಿ ಶ್ರೀನಿವಾಸ್ ಎಂಬ ಹೆಸರಿನಲ್ಲಿ ಸ್ನೇಹ ಬಯಸಿ ರಿಕ್ಷೆಸ್ಟ್ ಬಂದಿತ್ತು. ಅದನ್ನು ಈ ಹುಡುಗಿ ಸ್ವೀಕರಿಸಿದ್ದಾಳೆ. ಎರಡು ದಿನಗಳ ನಂತರ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ್ದಾಳೆ. ತದನಂತರ ಅದಿತಿ ಶ್ರೀನಿವಾಸ್ ಖಾಸಗಿ ದೃಶ್ಯಗಳನ್ನು ಹುಡುಗಿಗೆ ರವಾನಿಸಿದ್ದಾಳೆ.
ಇದನ್ನೂ ಓದಿ:10 ವರ್ಷದಿಂದಲೂ ಪೊಲೀಸ್​ ಮೆದುಳಿನಲ್ಲಿದೆ ಬುಲೆಟ್​: ಹೀಗಿದ್ರೂ ಎಲ್ಲರಂತೆ ಜೀವಿಸೋದು ಹೇಗೆ ಸಾಧ್ಯ!
ಅವರು ಕಳುಹಿಸಿದ್ದ ಅಶ್ಲೀಲ ಚಿತ್ರಗಳನ್ನು ಹುಡುಗಿ ವೀಕ್ಷಿಸಿದ್ದು, ಅದನ್ನೇ ಟಾರ್ಗೆಟ್ ಮಾಡಿಕೊಂಡ ಆರೋಪಿಗಳು ನಿನ್ನ ಖಾಸಗಿ ದೃಶ್ಯ ಹಾಗೂ ಫೋಟೋಗಳನ್ನು ಕಳುಹಿಸು ಎಂದು ಹೇಳಿದ್ದಾರೆ. ಅದಕ್ಕೆ ಹುಡುಗಿ ನಿರಾಕರಿಸಿದ್ದು, ಮೋನಿಕಾ ಪೆದ್ದು ಎಂಬಾಕೆ ಫೋನ್ ನಂಬರ್ ಕಳುಹಿಸಿ ಕರೆ ಮಾಡುವಂತೆ ಸೂಚಿಸಿದ್ದಾಳೆ. ಪ್ರತಿಕ್ರಿಯಿಸದಿದ್ದರೆ ನಿನ್ನ ಜತೆ ಚಾಟಿಂಗ್ ಮಾಡಿರುವ ವೈಯಕ್ತಿಕ ಮಾಹಿತಿಯನ್ನು ಫೋಟೋ ಸಮೇತ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ನಂತರ ಹುಡುಗಿ ತನ್ನ ಪಾಲಕರಿಗೆ ವಿಷಯ ತಿಳಿಸಿ ಪೊಲೀಸರ ಮೊರೆ ಹೋಗಿದ್ದಾಳೆ. ಪೊಲೀಸರು ಈಗ ಆ ವ್ಯಕ್ತಿಗಳ ಇನ್‌ಸ್ಟಾಗ್ರಾಂ ವಿವರ ಜಾಲಾಡುತ್ತಿದ್ದು, ಸದ್ಯದಲ್ಲೇ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ.
ಮದುವೆಯಾದ ಎರಡೇ ದಿನದಲ್ಲಿ ವಿವಾಹಿತೆ ನೇಣಿಗೆ ಶರಣು: ಕನ್ನಡಿ ಮೇಲಿತ್ತು ಡೆತ್​ನೋಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + eleven =
Remember me
