ಬೆಂಗಳೂರು:ಸಿನಿಮಾದಲ್ಲಿ ಚಾನ್ಸ್​ ನೀಡುವುದಾಗಿ ನಂಬಿಸಿ ಯುವತಿಯರಿಗೆ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಜಾಲದಲ್ಲಿ ಸಿಲುಕಿ ಬೀಳುವ ಮುನ್ನ ಯುವತಿಯರು ತುಂಬಾ ಎಚ್ಚರಿಕೆ ವಹಿಸುವುದು ಒಳ್ಳೆಯದು. ಇದೇ ರೀತಿ ವಂಚನೆಗೆ ಒಳಗಾಗಿರುವ ಯುವತಿಯೊಬ್ಬಳು ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.
ರಂಗಿನರಾಟೆ ಹೆಸರಿನ ಸಿನಿಮಾ ನಿರ್ಮಾಪಕ ಸಂತೋಷ್​ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಹಾಸನ ಮೂಲದ ಭವ್ಯಶ್ರೀ ಎಂಬಾಕೆ ಮೋಸ ಹೋದ ಬಳಿಕ ದೂರು ನೀಡಿದ್ದಾಳೆ. ಚಾನ್ಸ್​ ಕೊಡಿಸುವುದಾಗಿ ಹಣ ಪಡೆದು ಸಂತೋಷ್​ ವಂಚಿಸಿದ್ದಾರೆ. ಹಂತ ಹಂತವಾಗಿ ಗೂಗಲ್​ ಪೇ, ಫೋನ್​ ಪೇ ಮೂಲಕ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸಂತೋಷ್​ ಹಾಗೂ ಚಂದ್ರು ಎಂಬ ಇಬ್ಬರಿಗೂ ಭವ್ಯಶ್ರೀ ಹಣ ಪಾವತಿ ಮಾಡಿದ್ದಾಳಂತೆ. ಒಟ್ಟು 20 ಸಾವಿರ ರೂ. ಹಣ ಪಡೆದಿರುವ ಸಂತೋಷ್​ ಹಾಗೂ ಚಂದ್ರು, ಇದೀಗ ಹಣ ವಾಪಸ್​ ಕೇಳಿದರೆ ಇಲ್ಲಸಲ್ಲದ ಕಾರಣ ಹೇಳುತ್ತಿದ್ದಾರಂತೆ. ಅಲ್ಲದೆ, ಜೀವ ಬೆದರಿಕೆ ಸಹ ಹಾಕುತ್ತಿದ್ದಾರಂತೆ. ಸಿನಿಮಾ ಅವಕಾಶಗಳ ಬಗ್ಗೆಯೂ ಆರೋಪಿಗಳು ತುಟಿ ಬಿಚ್ಚುತ್ತಿಲ್ಲ.
ಭವ್ಯಶ್ರೀ, ಗೊರಗುಂಟೆ ಪಾಳ್ಯದ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವ ಆಸೆಗೆ ಬಿದ್ದು, ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮೇಕಪ್​ ಕಿಟ್​ಗಾಗಿ 20 ಸಾವಿರ ರೂ. ಹಣ ಬೇಕಿದೆ ಎಂದು ಹಣ ಪಡೆದುಕೊಂಡ ಆರೋಪಿಗಳು ಇದೀಗ ವಂಚನೆ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಿಡುಗಡೆಗೆ ಸಜ್ಜಾಯ್ತು ತೆಲುಗು ವರ್ಷನ್​ನ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’​!

ವಿರಾಟ್​ ಕೊಹ್ಲಿಗಾಗಿ ರೆಡಿಯಾಯ್ತು ಡೈಮಂಡ್​ ಬ್ಯಾಟ್​! ಉದ್ಯಮಿಯಿಂದ ಗಿಫ್ಟ್​, ಬೆಲೆ ಕೇಳಿದ್ರೆ ಬೆರಗಾಗ್ತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
