ಕೋಲಾರ:ಪ್ರಿಯಕರನಿಂದ ಹಾಡುಹಗಲಲ್ಲೇ ಅಪಹರಣವಾಗಿದ್ದ ಯುವತಿ ತುಮಕೂರಿನಲ್ಲಿ ಶುಕ್ರವಾರ ಪತ್ತೆಯಾಗಿದ್ದಾಳೆ.
ತುಮಕೂರಿನಲ್ಲಿ ಪೊಲೀಸರನ್ನು ನೋಡಿ ಯುವತಿ ಹಾಗೂ ಕಾರನ್ನು ಅಲ್ಲಿಯೇ ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಸದ್ಯ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಿಡ್ನಾಪ್​ ಮಾಡಿದ್ದ ಹುಡುಗರಿಗೆ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?ಕೋಲಾರದ ಕಿಲಾರಿಪೇಟೆಯ ಶಿವ ಎಂಬ ಯುವಕ ಕೋಲಾರ ನಗರದ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್​ ಬಳಿ ಗುರುವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಯುವತಿಯನ್ನು ಕಿಡ್ನಾಪ್​ ಮಾಡಿದ್ದ. ಶಿವ ಕಳೆದ ಹಲವು ವರ್ಷಗಳಿಂದ ದೇವಾಂಗಪೇಟೆಯ ಸಿರಿಶಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಯುವತಿ ಪಾಲಕರು ಇವರಿಬ್ಬರ ಪ್ರೀತಿಗೆ ನಿರಕಾರಿಸಿದ್ದರು. ಆದರೆ ಸಿರಿಶಾಳನ್ನು ಬಿಟ್ಟುಕೊಡಲು ಸಿದ್ಧನಿಲ್ಲದ ಶಿವ, ಇನ್ನೋವಾ ಕಾರಿನಲ್ಲಿ ಬಂದು, ಯುವತಿಯನ್ನು ಪಕ್ಕಾ ಸಿನಿಮೀಯ ಸ್ಟೈಲ್​ನಲ್ಲೇ ಅಪಹರಿಸಿದ್ದ.
ಯುವತಿಯ ಜತೆಗಿದ್ದ ಪುಟ್ಟ ಬಾಲಕಿಯ ಚೀರಾಟದಿಂದ ಸ್ಥಳೀಯರು ಬಂದು ಸುತ್ತುವರೆದರು. ಆದರೆ ಅಷ್ಟರಲ್ಲಾಗಲೇ ಶಿವ ಆಕೆಯನ್ನು ಹೊತ್ತೊಯ್ದಿದ್ದ. ಯುವತಿಯನ್ನು ಕಿಡ್ನಾಪ್​ ಮಾಡಿದ ದೃಶ್ಯ ರೆಡ್ಡಿ ಎಲೆಕ್ಟ್ರಿಕಲ್​ನಲ್ಲಿ ಅಳವಡಿಸಿದ್ದ, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದ್ದು, ಸ್ಥಳಕ್ಕೆ ಗಲ್​ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.(ದಿಗ್ವಿಜಯ ನ್ಯೂಸ್​)
ಕೋಲಾರದಲ್ಲಿ ಯುವಕನೋರ್ವ ತಾನು ಪ್ರೀತಿಸಿದ ಯುವತಿಯನ್ನು ಕಿಡ್ನಾಪ್​ ಮಾಡಿದ್ದು ನೋಡಿ…https://t.co/lP5VMDhlO2pic.twitter.com/uQQTDn4Xam
— Vijayavani (@VVani4U)August 13, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 18 =
Remember me
