ಬೆಂಗಳೂರು:ಬೆಂಗಳೂರಿನ ಬಾಣಸವಾಡಿಯ ಪಿಳ್ಳಾರೆಡ್ಡಿ ನಗರದಲ್ಲಿ ಶಿಕ್ಷಕಿ ಬೈದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮೃತಾ ಎನ್ನುವ ಹುಡುಗಿ ಟೀಚರ್​ ಎಲ್ಲರ ಮುಂದೆ ಬೈದು ಬಿಟ್ಟರು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಣಸವಾಡಿಯ ಮರಿಯಮ್ ನಿಲಯ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಬಾಲಕಿ ಅಮೃತಾ ಎಲ್ಲಾ ವಿದ್ಯಾರ್ಥಿಗಳ ಮುಂದೆ ಬೈದಿದ್ದಕ್ಕೆ ಮನನೊಂದು ನಿನ್ನೆ ಸಂಜೆ 5.15 ಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನೇಣಿಗೆ ಶರಣಾಗುವ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದು ಅದರಲ್ಲಿ ‘ಅಮ್ಮಾ ಐ ಆ್ಯಮ್ ಸಾರಿ. ನಾನು ಶಾಲೆಯಲ್ಲಿ ನಡೆದದ್ದನ್ನು ಮರೆಯಲಾರೆ. ನಾನು ಈ ಗಿಲ್ಟ್​ನೊಂದಿಗೆ ಬದುಕಲಾರೆ’ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ರದ ಕೊನೆಯಲ್ಲಿ ಐ ಲವ್​ ಯೂ ಅಪ್ಪಾ, ಅಮ್ಮಾ ಎಂದು ಅಮೃತಾ ಬರೆದಿದ್ದಾಳೆ.
ರಾಮಮೂರ್ತಿನಗರದ ಪೊಲೀಸ್ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದ್ದು ಅಸಹಜ ಸಾವು ಎಂದು ಕೇಸು ದಾಖಲಾಗಿದೆ. ಶಾಲೆ ಅಥವಾ ಶಿಕ್ಷಕರ ವಿರುದ್ಧ ಪೊಲೀಸರು ಯಾವುದೇ ರೀತಿಯ ಪ್ರಕರಣವನ್ನು ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಮೃತಾಳ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
