ರಾಯಚೂರು:ಪಾಗಲ್​ ಪ್ರೇಮಿಯ ಹುಚ್ಚಾಟಕ್ಕೆ ಮನನೊಂದು ಅಪ್ರಾಪ್ತ ವಯಸ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ತಾಲ್ಲೂಕಿನ ಅರಷಣಗಿ ಗ್ರಾಮದಲ್ಲಿ ನಡೆದಿದೆ.
ಪಾಗಲ್​ ಪ್ರೇಮಿಯ ಹುಚ್ಚಾಟಕ್ಕೆ ಬೇಸತ್ತು ಅಪ್ರಾಪ್ತ ವಯಸ್ಕಳು ಆತ್ಮಹತ್ಯೆ ಮಾಡಿಕೊಂಡಡು ಸಾವಿಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ರಾಯಚೂರು ಮಹಿಳಾ ಠಾಣಾ ಪೊಲೀಸರು ಆರೋಪಿ ರಮೇಶ್​ ಎಂಬಾತನನ್ನು ಬಂಧಿಸಿದ್ದಾರೆ. ಘಟನೆಯೂ ಜುಲೈ 30ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ರಮೇಶ್​ ಹಾಗೂ ಅಪ್ರಾಪ್ತ ವಯಸ್ಕೆ ಇಬ್ಬರು ಒಂದೇ ಗ್ರಾಮದವರಾಗಿದ್ದು, ನೆರೆ ಹೊರೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಆರೋಪಿ ಹಾಗೂ ಬಾಲಕಿಯನ್ನು ಇಬ್ಬರು ಪ್ರೀತಿಸುತ್ತಿದ್ದರು, ಈ ವಿಚಾರ ಆಕೆಯ ಪೋಷಕರಿಗೆ ತಿಳಿದು ಶಾಲೆ ಬಿಡಿಸಿ ತಮ್ಮ ಸಂಬಂಧಿಕರಲ್ಲೇ ಗಂಡು ಹುಡುಕಿದ್ದರು.
ಇದನ್ನೂ ಓದಿ:ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಡ್ಯಾನ್ಸ್​ ಮಾಸ್ಟರ್​ ಸೇರಿದಂತೆ ಮೂವರು ಅರೆಸ್ಟ್​
ಈ ವಿಚಾರ ತಿಳಿದ ಆರೋಪಿ ರಮೇಶ್​ ಅಪ್ರಾಪ್ರ ವಯಸ್ಕಳ ಮನೆಗೆ ನುಗ್ಗಿ ಗಲಾಟೆ ಮಾಡಿದ್ದನ್ನು. ನಂತರ ಆಕೆ ಮದುವೆಯಾಗಬೇಕಿದ್ದ ಹುಡುಗನಿಗೆ ಆಕೆ ಜೊತೆ ತೆಗೆಸಿಕೊಂಡಿದ್ದ ಫೋಟೋ, ವಾಯ್ಸ್​ ಮೆಸ್ಸೇಜ್​​ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದ. ಇದನ್ನೆಲ್ಲಾ ನೋಡಿದ ವರನ ಕಡೆಯವರು ಮದುವೆ ಕ್ಯಾನ್ಸಲ್​ ಮಾಡಿದ್ದರು.
ಮದುವೆ ಕ್ಯಾನ್ಸಲ್​ ಆದ ವಿಚಾರ ತಿಳಿದು ಬಾಲಕಿಯ ತಂದೆ ಖಿನ್ನತೆಗೆ ಒಳಗಾಘಿ ಆಸ್ಪತ್ರೆಗೆ ಸೇರಿದ್ದರು. ಇಷ್ಟಾದರು ಸುಮ್ಮನಾಗದ ಆರೋಪಿಯು ಬಾಲಕಿಗೆ ತನ್ನನ್ನು ಮದುವೆಯಾಗುವಂತೆ ಪೀಡಿಸಿದ್ದಾನೆ. ನಡೆದ ಘಟನೆಗಳಿಂದ ತೀವ್ರವಾಗಿ ಮನನೊಂದಿದ್ದ ಅಪ್ರಾಪ್ತ ವಯಸ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣ ಸಂಬಂಧ ರಾಯಚೂರು ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಮೇಶ್​ನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + four =
Remember me
