ಶಿವಮೊಗ್ಗ:”ರಾಘು ಅಣ್ಣ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡ. ಈ ವಿಷಯವನ್ನು ನಿಮ್ಮ ಬಳಿ ಹೇಳಲಾಗದೆ ಮನನೊಂದಿರುವೆ. ಕ್ಷಮಿಸಿ…” ಇದು ಎಂದು ಡೆತ್​ನೋಟ್​ ಬರೆದಿಟ್ಟ ಬಾಲಕಿ ಬಾರದ ಲೋಕಕ್ಕೆ ಹೋಗಿದ್ದಾಳೆ.
ಹೊಸನಗರ ತಾಲೂಕಿನ ಗ್ರಾಮವೊಂದರಲ್ಲಿ ಅಣ್ಣನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ತೀವ್ರ ಮನನೊಂದಿದ್ದಳು. ಗರ್ಭಿಣಿ ಆಗಿರುವ ವಿಷಯ ಗೊತ್ತಾಗುತ್ತಿದ್ದಂತೆ ತಂದೆ-ತಾಯಿಗೆ ವಿಷಯ ತಿಳಿಸಲಾಗದೆ ಬುಧವಾರ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಪ್ಪ-ಅಮ್ಮ ಇಬ್ಬರೂ ಬುಧವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ಅವರು ಬರುವಷ್ಟರಲ್ಲಿ ಮಗಳು ಮನೆಯ ಪಕಾಶಿಗೆ ನೇಣು ಬಿಗಿದುಕೊಂಡು ಹೆಣವಾಗಿದ್ದಳು. ಬಾಲಕಿ ತಂದೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಬಾಲಕಿಯ ದೊಡ್ಡಮನ ಮಗ ತೀರ್ಥಹಳ್ಳಿ ತಾಲೂಕು ಕಗ್ಗಲಿ ಶಂಕರಾಪುರದ ರಾಘು ಯಾನೆ ರಾಘವೇಂದ್ರ(24) ಅತ್ಯಾಚಾರ ಆರೋಪಿ. ಸ್ಥಳ ಮಹಜರ್ ನಡೆಸಿದ ಹೊಸನಗರ ಸಿಪಿಐ ಮಧುಸೂದನ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಈ ಮನೆಯಲ್ಲಿ ಮೂವರ ಸಾವಾಯ್ತು… ದೋಷವೆಂದು ಕೆಲ ತಿಂಗಳು ಹೊರಗಿದ್ದ ಮಗ ವಾಪಸ್ ​ಬರುಷ್ಟರಲ್ಲಿ ಕಾದಿತ್ತು ಶಾಕ್​!

https://www.vijayavani.net/drug-case-actor-sanjana-galranisanjana-bank-accounts/
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + eight =
Remember me
