ವಿಜಯಪುರ:ಮನೆಯ ಆಶಾಕಿರಣದಂತ್ತಿದ್ದ ಮಗಳು ಕ್ಷುಲ್ಲಕ ಕಾರಣಕ್ಕೆ ಜಲ್ಲಿಕ್ವಾರಿಯಲ್ಲಿ ತುಂಬಿದ್ದ ನೀರಿಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ.
ಗಾಂಧಿನಗರದ ನಿವಾಸಿ ಸ್ನೇಹಾ ನಂದಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶುಕ್ರವಾರ ರಾತ್ರಿ ಮನೆಯಲ್ಲಿ ತಾಯಿ ಲಕ್ಷ್ಮೀ ಜತೆ ಸ್ನೇಹಾ ಜಗಳವಾಡಿದ್ದಾಳೆ. ಈ ವೇಳೆ ಮಗಳಿಗೆ ಬೈದಿದ್ದ ತಾಯಿ ಬುದ್ಧಿಮಾತು ಹೇಳಿದ್ದರು.
ಇದನ್ನೂ ಓದಿರಿತಂದೆಯ ಕಣ್ಣೆದುರಲ್ಲೇ ಭೀಮಾನದಿಯಲ್ಲಿ ಬೈಕ್​ ಸಮೇತ ಕೊಚ್ಚಿಹೋದ ಮಗ
ತಾಯಿ ಜತೆ ಜಗಳವಾಡಿಕೊಂಡ ಬಾಲಕಿ ಮನನೊಂದು ರಾತ್ರಿಯೇ ಸಮೀಪದಲ್ಲೇ ಇದ್ದ ಕಲ್ಲಿನ ಕ್ವಾರಿಯತ್ತ ಓಡಿ ಹೋಗಿದ್ದಾಳೆ. ವಾಪಸ್​ ಬಾ ಎಂದು ಕೂಗಿಕೊಳ್ಳುತ್ತಲೇ ತಾಯಿ ಹಿಂಬಾಲಿಸಿದರೂ ಮಗಳು ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತೀಚಿಗೆ ಜೋರಾಗಿ ಮಳೆ ಆಗಿದ್ದರಿಂದ ಕ್ವಾರಿಯಲ್ಲಿ ನೀರು ತುಂಬಿತ್ತು.
ಶನಿವಾರ ಬೆಳಗ್ಗೆಯಿಂದಲೇ ಬಾಲಕಿಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧಕಾರ್ಯ ನಡೆಸಿದ್ದು, ಮಧ್ಯಾಹ್ನ 1ರ ಸುಮಾರಿಗೆ ಶವ ಪತ್ತೆಯಾಯಿತು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

‘ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
