ಬೆಂಗಳೂರು:ಅತ್ಯಾಚಾರಕ್ಕೊಳಗಾದ ಕಾಸರಗೋಡಿನ ಸಂತ್ರಸ್ತೆಯೊಬ್ಬರು ಕರ್ನಾಟಕ ಸರ್ಕಾರದ ನೆರವು ಬಯಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭಾನುವಾರ ಭೇಟಿ ಮಾಡಿದ ಸಂತ್ರಸ್ತೆ ಹಾಗೂ ಅವರ ಕುಟುಂಬಸ್ಥರು ಆತಂಕ ತೋಡಿಕೊಂಡಿದ್ದಾರೆ.
ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಕೇರಳದ ಕಾಸರಗೋಡಿನ ಯುವಕರಿಬ್ಬರು ಬಾಲಕಿಯನ್ನು ನಂಬಿಸಿ ಅತ್ಯಾಚಾರ ಮಾಡಿ ನಂತರ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದರು. ಕಾಸರಗೋಡಿನ 17 ವರ್ಷದ ಬಾಲಕಿ ಓದುತ್ತಿರುವಾಗಲೇ ಆಕೆಯನ್ನು ಪರಿಚಯಿಸಿ ಕೊಂಡ ರಿಷಭ್ ಮತ್ತು ಮಸೂದ್ ಪುಸಲಾಯಿಸಿ ಮಂಗಳೂರು, ಬೆಂಗಳೂರಲ್ಲಿ ಸುತ್ತಾಡಿಸಿ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ನಡೆಸಿದ್ದಾರೆ. ಅದನ್ನು ವಿಡಿಯೋ ಮಾಡಿ ಬೆದರಿಸಿದ್ದಾರೆ. ಬಾಲಕಿಯ ತಂದೆ ಹೊರತುಪಡಿಸಿ ಇಡೀ ಕುಟುಂಬದ ಸದಸ್ಯರು ಇಸ್ಲಾಂಗೆ ಮತಾಂತರಗೊಳ್ಳಬೇಕು. ಇಲ್ಲವಾದರೆ ವಿಡಿಯೋ ಬಹಿರಂಗ ಮಾಡುವ ಜತೆಗೆ ಮನೆಗೆ ಬೆಂಕಿ ಹಚ್ಚಿ, ಕೊಲ್ಲುವುದಾಗಿ ಬೆದರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಾಲಕಿಯನ್ನು ಬೆಂಗಳೂರಿಗೆ ಕರೆತಂದು ಕೃತ್ಯ ಎಸಗಲಾಗಿದೆ. ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಕ್ವೇರಿಯಂ ವ್ಯಾಪಾರ ಮಾಡುತ್ತಿರುವ ಮಾಹಿತಿ ಇದೆ. ಬಾಲಕಿ ಹೇಳುವ ಪ್ರಕಾರ ಗಾಂಜಾ ವ್ಯಾಪಾರದಲ್ಲೂ ಅವರಿಬ್ಬರು ತೊಡಗಿರಬಹುದು. ಇವರ ವ್ಯಾಪಾರವೇನು, ಸಂಪರ್ಕಗಳೇನು? ಮಂಗಳೂರು, ಬೆಂಗಳೂರಿನಲ್ಲಿ ಇನ್ನೂ ಎಷ್ಟು ಪ್ರಕರಣಗಳಲ್ಲಿ ಈ ರೀತಿ ಮಾಡಿರಬಹುದೆಂಬ ಸಮಗ್ರ ತನಿಖೆಯಾಗಬೇಕಿದೆ ಎಂದರು.
ಸಂತ್ರಸ್ತ ಬಾಲಕಿ ಮತ್ತು ಆಕೆಯ ಕುಟುಂಬ ನನ್ನನ್ನು ಸಂರ್ಪಸಿದಾಗ ನಾನು ಪ್ರವಾಸದಲ್ಲಿದ್ದೆ. ಭಾನುವಾರ ಸಿಎಂ ಬಳಿ ಕರೆದುಕೊಂಡು ಹೋಗಿದ್ದೆ. ತಪ್ಪಿತಸ್ಥರ ಬಂಧನಕ್ಕೆ ಪೊಲೀಸರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
| ಶೋಭಾ ಕರಂದ್ಲಾಜೆ ಸಂಸದೆ
ಪೊಲೀಸ್ ಆಯುಕ್ತರ ಭೇಟಿ
ಪೋಕ್ಸೋ ಕಾಯ್ದೆಯಡಿ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ದೂರು ನೀಡುತ್ತಿದ್ದು, ಅತ್ಯಾಚಾರ ಮತ್ತು ಮತಾಂತರಕ್ಕೆ ಪ್ರಯತ್ನ ಪ್ರಕರಣಗಳಡಿ ಕೇಸು ದಾಖಲಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು. ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣ ಗಂಭೀರ ವಾಗಿ ಪರಿಗಣಿಸಲು ಮನವಿ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + five =
Remember me
