|ಜಗನ್ ರಮೇಶ್ಬೆಂಗಳೂರು
ಕೆಲಸ ಮಾಡುತ್ತಿದ್ದ ಇಲಾಖಾ ಕಚೇರಿಯ ರ್ಪಾಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳೆದುಕೊಂಡಿದ್ದ ಉದ್ಯೋಗಿಯೊಬ್ಬರಿಗೆ 15 ಸಾವಿರ ರೂ. ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಬೈಕ್ ಕಳವಾಗಲು ಸಂಸ್ಥೆ ಹಾಗೂ ರ್ಪಾಂಗ್ ಮೇಲ್ವಿಚಾರಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಹಿರಿಯ ಕಾನೂನು ಸಹಾಯಕರಾಗಿದ್ದ ಸಿ.ಕೆ. ಪ್ರಸನ್ನಕುಮಾರ್ (61) ಕೋರ್ಟ್ ಮೆಟ್ಟಿಲೇರಿದ್ದರು.
ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ನ್ಯಾಯಾಲಯ, ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ರ್ಪಾಂಗ್ ಮೇಲ್ವಿಚಾರಕ ಜಂಟಿಯಾಗಿ ದೂರುದಾರರಿಗೆ 10 ಸಾವಿರ ರೂ. ಪರಿಹಾರ ಹಾಗೂ ವ್ಯಾಜ್ಯದ ವೆಚ್ಚ 5 ಸಾವಿರ ರೂ. ಪಾವತಿಸಬೇಕು ಎಂದು ಆದೇಶಿಸಿದೆ.
ಪ್ರಕರಣವೇನು?:ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿದ್ದ ರ್ಪಾಂಗ್ ಜಾಗದಲ್ಲಿ ಪ್ರಸನ್ನಕುಮಾರ್ ಪ್ರತಿದಿನ ಬೈಕ್ ನಿಲುಗಡೆ ಮಾಡುತ್ತಿದ್ದರು. ರೈಲ್ವೆ ಉದ್ಯೋಗಿಗಳಿಗೆಂದೇ ಮೀಸಲಿರಿಸಿದ್ದ ಆ ಜಾಗದಲ್ಲಿ ವಾಹನ ನಿಲ್ಲಿಸಲು ರ್ಪಾಂಗ್ ಮೇಲ್ವಿಚಾರಕನಿಂದ ಪ್ರತಿ ತಿಂಗಳು ಪಾಸ್ ಪಡೆಯುತ್ತಿದ್ದ ಅವರು, ಅದಕ್ಕಾಗಿ 100 ರೂ. ಪಾವತಿಸುತ್ತಿದ್ದರು. ದಿನದ 24 ಗಂಟೆಯೂ ಅಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶವಿತ್ತು. 2017ರ ಫೆ.21ರಂದು ಬೆಳಗ್ಗೆ 9.30ಕ್ಕೆ ರ್ಪಾಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದ ಪ್ರಸನ್ನಕುಮಾರ್ ಫೆ.23ರಂದು ಮಧ್ಯಾಹ್ನ 2.30ಕ್ಕೆ ಹಿಂದಿರುಗಿ ಬಂದು ನೋಡಿದಾಗ ಇರಲಿಲ್ಲ. ವಾಹನ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಎಂ.ಡಿ ಹಾಗೂ ರ್ಪಾಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಮಾಸಿಕ ಪಾಸ್ ಪಡೆದಿದ್ದರೂ ತಮ್ಮ ವಾಹನಕ್ಕೆ ಸೂಕ್ತ ಭದ್ರತೆ ಒದಗಿಸಿಲ್ಲ ಎಂದು ಆರೋಪಿಸಿ, ಪ್ರಸನ್ನಕುಮಾರ್ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಸಿಬ್ಬಂದಿಯ ವಾಹನ ನಿಲುಗಡೆಗಾಗಿ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ವಾಹನ ನಿಲ್ಲಿಸುವ ಸಿಬ್ಬಂದಿಯಿಂದ ಅತಿ ಕಡಿಮೆ ಮೊತ್ತದ ಹಣ ಪಡೆಯಲಾಗುತ್ತಿದ್ದು, ರ್ಪಾಂಗ್ ಶುಲ್ಕದ ರೂಪದಲ್ಲಿ ಸಂಗ್ರಹಿಸುತ್ತಿಲ್ಲ. ಕಚೇರಿ ಸಿಬ್ಬಂದಿ ಹೊರತುಪಡಿಸಿ ಇತರರು ಸೌಲಭ್ಯ ದುರುಪಯೋಗ ಪಡಿಸಿಕೊಳ್ಳಬಾರದು ಎಂಬ ಕಾರಣಕ್ಕೆ ವಾಹನಗಳನ್ನು ನೋಡಿಕೊಳ್ಳಲು ವ್ಯಕ್ತಿಯೊಬ್ಬರನ್ನು ನಿಯೋಜಿಸಲಾಗಿದ್ದು, ಅವರಿಗೆ ಆ ಹಣ ಸಿಗುತ್ತಿದೆ. 100 ರೂ. ಪಾವತಿಸಿ ಸೌಲಭ್ಯ ಪಡೆದುಕೊಳ್ಳುವುದು ಸಿಬ್ಬಂದಿ ಇಚ್ಛೆಗೆ ಬಿಡಲಾಗಿದೆ. ಮೇಲಾಗಿ ದೂರುದಾರರ ವಾಹನ ಇದೇ ಜಾಗದಿಂದ ಕಳವಾಗಿದೆ ಎಂಬುದಕ್ಕೆ ಯಾವುದೇ ದಾಖಲೆ ಒದಗಿಸಿಲ್ಲ. ಆದ್ದರಿಂದ, ದೂರು ವಜಾಗೊಳಿಸಬೇಕು ಎಂದು ಎಂ.ಡಿ ಕೋರಿದ್ದರು.
ದೂರುದಾರರು ಒದಗಿಸಿರುವ ಮಾಸಿಕ ಪಾಸ್​ನಲ್ಲಿ ‘ವಾಹನ ಅಥವಾ ಇನ್ನಿತರ ವಸ್ತುಗಳಿಗೆ ಯಾವುದೇ ರೀತಿಯ ಹಾನಿಯಾದರೂ ಅದಕ್ಕೆ ನಾವು ಜವಾಬ್ದಾರರಲ್ಲ’ ಎಂದು ನಮೂದಿಸಲಾಗಿದೆ. ಆದರೆ, ಪಾಸ್ ಮೇಲೆ ‘ರ್ಪಾಂಗ್ ಸ್ಟಾ್ಯಂಡ್​ನಲ್ಲಿ ನಿಲುಗಡೆ ಮಾಡುವ ವಾಹನಗಳು ಕಳವಾದರೆ ನಾವು ಜವಾಬ್ದಾರಲ್ಲ’ ಎಂದು ಎಲ್ಲಿಯೂ ಹೇಳಲಾಗಿಲ್ಲ. ರ್ಪಾಂಗ್ ವ್ಯವಸ್ಥೆ ನೋಡಿಕೊಳ್ಳಲು ನಿಯೋಜನೆಗೊಂಡಿರುವ ವ್ಯಕ್ತಿಯು ಮಾಸಿಕ ಪಾಸ್​ಗಾಗಿ 100 ರೂ. ಪಡೆದಿದ್ದು, ಸುರಕ್ಷಿತ ರ್ಪಾಂಗ್ ವ್ಯವಸ್ಥೆ ಕಲ್ಪಿಸುವುದು ಆತನ ಜವಾಬ್ದಾರಿಯಾಗಿರುತ್ತದೆ. ನಿರ್ಲಕ್ಷ್ಯತನ ಹಾಗೂ ಸೇವಾ ನ್ಯೂನತೆಯಿಂದ ದೂರುದಾರರು ಬೈಕ್ ಕಳೆದುಕೊಂಡಿದ್ದು ಅವರಿಗೆ ಸೂಕ್ತ ಪರಿಹಾರ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, 15 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಕಳವಾದ ಬೈಕ್​ಗೆ ಪ್ರತಿಯಾಗಿ ದೂರುದಾರರು 50 ಸಾವಿರ ರೂ. ಪರಿಹಾರ ಕೇಳಿದ್ದಾರೆ. ಆದರೆ, ಈ ಮನವಿ ಪರಿಗಣಿಸಲು ಸಾಧ್ಯವಿಲ್ಲ. ದೂರುದಾರರು ಸಂಬಂಧಪಟ್ಟ ವಿಮಾ ಸಂಸ್ಥೆಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + ten =
Remember me
