ಬೆಂಗಳೂರು:ಜನತಾ ಜಲಧಾರೆ ಮಹಾ ಸಮಾವೇಶದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದೇ ವೇಳೆ ಸ್ವತಂತ್ರ ಸರ್ಕಾರದ ಸಂಕಲ್ಪವನ್ನೂ ಮಾಡಿದರು. ಅಲ್ಲದೆ ಮೈತ್ರಿ ಸರ್ಕಾರದ ಸಹವಾಸ ಬೇಡ ಎಂದ ಅವರು, ಅದಕ್ಕೆ ಬದಲಾಗಿ ಸ್ವತಂತ್ರ ಸರ್ಕಾರ ತರಲು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು. ಮೈತ್ರಿ ಅಗತ್ಯವಿರದಂತೆ ಅಧಿಕಾರ ನೀಡಿದರೆ ಸಮಗ್ರ ನೀರಾವರಿ ಖಾತ್ರಿ ಎಂಬ ಭರವಸೆಯನ್ನೂ ಅವರು ಕೊಟ್ಟರು.
ನೆಲಮಂಗಲ ಸಮೀಪ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್-ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆ ನಡೆಸುತ್ತೇನೆ. ಹಳ್ಳಿ ಹಳ್ಳಿಗಳಲ್ಲಿ ರಥಯಾತ್ರೆ ನಡೆಸಿ ನಾನೇ ಜನರ ಮುಂದೆ ಬರುತ್ತೇನೆ ಎಂದರು.
ನಮ್ಮ ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ ಜನತಾ ಜಲಧಾರೆ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ ಎಂದರು. 90 ವರ್ಷ ವಯಸ್ಸಿನಲ್ಲೂ ನಾಡಿನ ಜನರಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ರಾಜಕೀಯದ ಬೆಳವಣಿಗೆಗಳ ಪರಿಣಾಮವಾಗಿ ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದೆ. ಆದರೆ ಯಾವುದೇ ಕಾರ್ಯಕ್ರಮ ಕೊಡಲು ಸ್ವತಂತ್ರ ಅಧಿಕಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ನೋವು ಅನುಭವಿದ್ದು ನನಗೆ ಮಾತ್ರ ಗೊತ್ತು ಎಂದ ಅವರು, ಮೈತ್ರಿ ಸಹವಾಸ ಬೇಡ ಎಂದು ಹೇಳಿದರು.
ಜೆಡಿಎಸ್​ನಲ್ಲಿ ಟಿಕೆಟ್ ಸಿಗಬೇಕಾದರೆ ಹಣ ಕೊಡಬೇಕು ಎಂದು ಒಬ್ಬರು ಆರೋಪ ಮಾಡಿದರು. ಆದರೆ ಅನ್ನದಾನಿ ಬಡವರಾದರೂ ಟಿಕೆಟ್ ಕೊಟ್ಟು ಚುನಾವಣಾ ಖರ್ಚನ್ನು ಪಕ್ಷ ಭರಿಸಿದೆ. ದೇವರು ನೋಡ್ತಾನೆ ಎಂಬ ಕನಿಷ್ಠ ತಿಳುವಳಿಕೆ ಬೇಕು ಎಂದರು.
ಕರೊನಾದಿಂದ ಜೆಡಿಎಸ್ ನಾಯಕರು ಹೊರ ಬಂದಿಲ್ಲ ಎನ್ನುತ್ತಿದ್ದರು. ಅದಕ್ಕೆ ಕಾರಣ ಕರೊನಾದಿಂದ ಆದಂತಹ ಸಾವಿರಾರು ಜನರ ಸಾವು. ನಿಮಗೆ ತೊಂದರೆ ಆಗಬಾರದು ಅಂತ ಕಾರ್ಯಕ್ರಮ ಹಾಕಿಕೊಂಡಿರಲಿಲ್ಲ. ಬಿಜೆಪಿ, ಕಾಂಗ್ರೆಸ್ ನಾಯಕರಷ್ಟು ಅವಸರ ನಮಗೆ ಇರಲಿಲ್ಲ. ಕಳೆದ ತಿಂಗಳಿಂದ ಜಲಧಾರೆ ಕಾರ್ಯಕ್ರಮ ಆರಂಭ ಆಯ್ತು. ಅಂದಿನಿಂದ ಇಂದಿನವರೆಗೆ ನಮಗೆ ಸಾಥ್ ಕೊಟ್ಟಿದ್ದೀರಾ. ಮೈಸೂರಿನಲ್ಲಿ ಒಂದು ಸ್ಥಾನ ಬರಲ್ಲ ಎಂದು ಇಲ್ಲೇ ಬೆಳೆದು ಹೋದವರೇ ಹೇಳಿದರು. ಆದರೆ ಇವತ್ತು ನೀವು ಜಲಧಾರೆ ಸಮಾವೇಶದ ಮೂಲಕ ತೋರಿಸಿದ್ದೀರಿ ಎಂದರು. ನನ್ನ ಕೊನೆಯ ಉಸಿರು ಇರುವವರೆಗೂ ನಿಮಗಾಗಿ ಜೀವನ ಇಟ್ಟಿರುತ್ತೇನೆ. ನಾನು ಈ ಮಣ್ಣಿಗೆ ಹೋಗುವುದರೊಳಗೆ ನಿಮ್ಮ ಹೃದಯದಲ್ಲಿ ನನಗೆ ಕೊಡುವ ಸ್ಥಾನ ಒಂದೇ ಎಂದು ಹೇಳಿದರು.

ಕುಡಿಯುವ ನೀರಿನ ವಿಚಾರವಾಗಿ ದೇವೇಗೌಡರು ಸಂಸತ್​ನಲ್ಲಿ ಮಾತನಾಡಿದರೆ ಯಾರು ಮಾತನಾಡಲು ಬರುವುದಿಲ್ಲ ಎಂದ ಎಚ್​ಡಿಕೆ, ನಾನು ಎರಡು ಬಾರಿ ಸಿಎಂ ಆಗಿದ್ದೇನೆ. ರಾಜಕೀಯದ ಬೆಳವಣಿಗೆಯಲ್ಲಿ ಸಿಎಂ ಆದೆ. ಅನೇಕ ಒತ್ತಡಗಳ ನಡುವೆ ಅಧಿಕಾರ ಮಾಡಿದೆ. ರೈತರ ಸಾಲ ಮನ್ನಾ ಮಾಡುವಾಗಲು ಎಷ್ಟು ಕಷ್ಟ ಪಟ್ಟಿದ್ದೇನೆ ನಮಗೆ ಗೊತ್ತು ಎಂದರು.
ಕರೊನಾದಿಂದ ಸಾವಿಗೀಡಾದ ಕುಟುಂಬಕ್ಕೆ ಐದು ಲಕ್ಷ ರೂ. ಕೊಡುತ್ತೇವೆ ಎಂದ ಸರ್ಕಾರ ಇನ್ನೂ ಕೊಟ್ಟಿಲ್ಲ. ಶಾಲೆ ಫೀಸ್ ಕಟ್ಟಲು, ಆಸ್ಪತ್ರೆಗಳಿಗೆ ಅಂತ ನಿತ್ಯ ಎಷ್ಟು ಕಷ್ಟ ಪಡ್ತಾ ಇದ್ದೀರಾ ಅಂತ ಗೊತ್ತಿದೆ. ನಿತ್ಯ ಸಾಕಷ್ಟು ಜನರನ್ನು ನೋಡ್ತಾ ಇದ್ದೇನಿ. ಪಂಚರತ್ನ ಯೋಜನೆ ಹುಡುಗಾಟಿಕೆಗೆ ಮಾಡಿದ್ದಲ್ಲ. ನಿಮ್ಮಗಳ ಕಷ್ಟಗಳನ್ನು ನೋಡಿಯೇ ಮಾಡಿರುವುದು ಎಂದು ಹೇಳಿದರು.
ಆಗಲೇ ಅಧಿಕಾರ ಬಿಟ್ಟು ದೇವೇಗೌಡರು ಬಂದ್ರು. ಫೀನಿಕ್ಸ್​ನಂತೆ ಎದ್ದು ಬರ್ತೀನಿ ಅಂತ ದೇವೇಗೌಡರು ಹೇಳಿದ್ದರು ಅಂತ ಪೂಜ್ಯರು ಹೇಳಿದ್ರು. ಆ ಫೀನಿಕ್ಸ್ ಕುಮಾರಸ್ವಾಮಿ ಅಂದಿದ್ದರು. ಹೌದು ಫೀನಿಕ್ಸ್​ನಂತೆ ಎದ್ದು ಬರ್ತೀವಿ. 2023ಕ್ಕೆ ಜನರ ಸಂಕಷ್ಟಕ್ಕೆ ಪರಿಹಾರ ಜನತಾ ದಳ ಎಂದರು.

2023ಕ್ಕೆ ನಾಡಿನ ಜನತೆಗೆ ಜೆಡಿಎಸ್ ಪರಿಹಾರವಾಗಲಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಕುರುಬ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಬೆನ್ನಿಗೆ ನಿಲ್ಲುತ್ತೇನೆ. ಐದು ವರ್ಷಗಳಲ್ಲಿ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸದೆ ಇದ್ದರೆ ನಿಮ್ಮ ಮುಂದೆ ಬರುವುದಿಲ್ಲ ಎಂದು ನುಡಿದರು.
ಸಾಮಾನ್ಯ ಕಡು ಬಡವರಿಗಾಗಿ ಜೀವನ ಮುಡಿಪಾಗಿಡುತ್ತೇನೆ. ನನಗೆ ನೀವು ಸಹಕಾರ ಕೊಡಿ. 123 ಗುರಿ ಏನಿದೆ ಅದು ಮುಟ್ಟುತ್ತೇನೆ. ಸರ್ವ ಜನಾಂಗದ ಶಾಂತಿಯ ತೋಟ ಶಾಶ್ವತವಾಗಿ ಬದುಕುವ ನಿಟ್ಟಿನಲ್ಲಿ ಈ ಸರ್ಕಾರ ಬರಲೇ ಬೇಕು. ಐದು ವರ್ಷದಲ್ಲಿ ಈ ಕಾರ್ಯಕ್ರಮ ಕೊಡದೆ ಹೋದರೆ, ನಾನು ಎಂದೂ ನಿಮ್ಮ ಮುಂದೆ ಮತ ಕೇಳಲು ಬರಲ್ಲ ಎಂದು ಹೇಳಿದರು.
ಜನತಾ ಜಲಧಾರೆ ಸಮಾರೋಪಕ್ಕೆ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಎಚ್‌ಡಿಕೆ

ಬಣ್ಣಬಣ್ಣದ ಡಿಸೈನ್ ಕಾರೊಳಗಿತ್ತು ಕೊಳೆತ ಶವ; 2 ವರ್ಷಗಳಿಂದ ಒಂದೇ ಕಡೆ ನಿಲ್ಲಿಸಲಾಗಿದ್ದ ಕಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
