ಮುಂದಿನ ತಿಂಗಳಿನಿಂದಶಾಲಾ ಮಕ್ಕಳಿಗೆ ಹಾಲಿನ ಜತೆ ರಾಗಿ ಮಾಲ್ಟ್ ನೀಡಲಾಗುವುದು ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿರುವುದು ಸ್ವಾಗತಾರ್ಹ ಹಾಗೂ ಔಚಿತ್ಯಪೂರ್ಣವಾಗಿದೆ.
ಮಕ್ಕಳಲ್ಲಿ ಅಪೌಷ್ಟಿಕತೆ ತಗ್ಗಿಸಲು ರಾಗಿ ಮಾಲ್ಟ್ ನೀಡುವ ರಾಜ್ಯ ಸರಕಾರದ ನಿರ್ಧಾರವೇನೋ ಸೂಕ್ತವಾದುದು. ಆದರೆ, ಇದರ ಜತೆಜತೆಗೇ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೊಳಕೆ ಕಟ್ಟಿದ ಸಿರಿಧಾನ್ಯ ವಿತರಿಸಿದರೆ ಬಹಳ ಉಪಯುಕ್ತವಾಗುತ್ತದೆ. ಇದರಿಂದ ಸಿರಿಧಾನ್ಯ ಬೆಳೆದ ರೈತರಿಗೂ ಆರ್ಥಿಕವಾಗಿ ಉತ್ತೇಜನ-ಪೋ›ತ್ಸಾಹ ನೀಡಿದಂತಾಗುತ್ತದೆ.
ಶಾಲಾ ಮಕ್ಕಳ ಹಾಜರಾತಿ ಹೆಚ್ಚಿಸಲು ಸರಕಾರ ಅನೇಕ ಉಪಯುಕ್ತ ಗುಣಾತ್ಮಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೂ ಸರಕಾರಿ ಶಾಲೆಗಳ ಬಗ್ಗೆ ಬಹುತೇಕ ಪಾಲಕರಲ್ಲಿ ಇನ್ನೂ ಕೀಳಂದಾಜು ಹೋಗದೇ ಇರುವುದು ವಿಷಾದನೀಯ. ಸರಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ ಮೂಡುವಂತೆ ಸುಧಾರಣಾ ಕ್ರಮಗಳನ್ನು ಸರಕಾರ ಕೈಗೊಳ್ಳಲಿ.
| ಜಯವೀರ ಎ.ಕೆ. ಖೇಮಲಾಪುರ, ತಾ. ರಾಯಬಾಗ
ಪಾಲಿಕೆಯ ಸಹಕಾರದೊಂದಿಗೆ ಬೆಂಗಳೂರು ಹಬ್ಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
