ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್ ಸಂಚು ಇದೆ ಎಂಬ ಆರೋಪ ಮಾಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಯುವತಿಯ ಸಂಭಾಷಣೆ ಇರುವ ಎರಡನೇ ಆಡಿಯೋ ತುಣುಕು ವೈರಲ್ ಆಗಿದೆ.
ಸಿಡಿ ಲೇಡಿಯು ತನ್ನ ಸಹೋದರನೊಂದಿಗೆ ಮಾತನಾಡಿರುವ ಒಂದು ನಿಮಿಷ 51 ಸೆಕೆಂಡುಗಳಿರುವ ಈ ಆಡಿಯೊದಲ್ಲಿ ಆಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಸ್ಪಷ್ಟವಾಗಿ ಬಳಸಿದ್ದಾಳೆ. ಶಿವಕುಮಾರ್ ಅವರು ತನಗೆ ಊರಿಗೆ ಹೋಗಬೇಡ, ನಾವು ಹೇಳಿದ್ಹಂಗೆ ಮಾಡು ಎಂದಿದ್ದು, ದುಡ್ಡು ಕೊಟ್ಟು ಗೋವಾಗೆ ಕಳಿಸುತ್ತಿದ್ದಾರೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ:ಡಿಕೆಶಿ ಗಂಡಸಲ್ಲ, ನಾನು ಗಂಡಸು.. ನಾಲಾಯಕ್ ಮಹಾನಾಯಕನನ್ನು ಕನಕಪುರದಲ್ಲೇ ಸೋಲಿಸ್ತೀನಿ: ಜಾರಕಿಹೊಳಿ
ಆಡಿಯೋದಲ್ಲಿರುವ ದೂರವಾಣಿ ಸಂಭಾಷಣೆಯಲ್ಲಿ ಸೋದರನು, “ನೀ ಊರಿಗೆ ಯಾವಾಗ ಬರತೀ” ಎಂದು ಕೇಳುತ್ತಾನೆ. ಅದಕ್ಕೆ ಯುವತಿ “ನಾಲ್ಕೈದು ದಿನಗಳಲ್ಲಿ ಬರ್ತೀನಿ. ಈಗ ಎಲ್ಲೂ ಹೋಗ್ಬೇಡ. ನಾ ಹೇಳಿದ್ಹಾಂಗೇ ಮಾಡು ಅಂದಿದಾರೆ” ಅನ್ನುತ್ತಾಳೆ. “ಯಾರು ?” ಅಂತ ಕೇಳಿದಾಗ “ಡಿ.ಕೆ.ಶಿವಕುಮಾರ್” ಎನ್ನುತ್ತಾಳೆ. ಸೋದರ “ಅಕ್ಕ, ಮತ್ತೆ ಭಾಳ ಕೆಟ್ಟದಾಗತೈತಿ. ಆಮೇಲೆ ನಿನ್ನ ಕೈಬಿಟ್ಟುಬಿಡ್ತಾರೆ” ಎನ್ನುತ್ತಾನೆ. ಅದಕ್ಕೆ “ಹಾಗೆಲ್ಲಾ ಏನೂ ಆಗಲ್ಲ. ಹೆದರಬೇಡ. ನೀನೊಬ್ಬನಾದ್ರೂ ನನ್ನ ಸಪೋರ್ಟ್ ಮಾಡು” ಎನ್ನುತ್ತಾಳೆ.
“ಇಲ್ಲೀ ತನಕ ಬಂದು ರೊಕ್ಕ ಕೊಟ್ಟು ಗೋವಾಗೆ ಕಳುಹಿಸುತ್ತಿದ್ದಾರೆ. ನಾನು ಆಕಾಶ್ ಈಗ ಗೋವಾಗೆ ಹೊರಟಿದ್ದೀವಿ” ಎನ್ನುತ್ತಾಳೆ. ಸೋದರ “ಈ ಸಿಮ್​ ಕಾರ್ಡ್ ಬಿಸಾಕು” ಎಂದದ್ದಕ್ಕೆ “ನನ್ನ ಫೋನ್ ಎಲ್ಲಾ ಇಸ್ಕೊಂಡಿದಾರೆ. ಆಕಾಶ್​ಗೆ ಫೋನ್ ಕೊಟ್ಟಿದಾರೆ. ನಾವು ಗೋವಾಗೆ ಹೊಂಟೀವಿ. ಯಾರು ಕೇಳಿದರೂ ಆರ್.ಟಿ.ನಗರದಲ್ಲಿದ್ದೇನೆ ಅಂತ ಹೇಳಬೇಡ. ಸಂಜಯನಗರ ಇಲ್ಲ ವಿಜಯನಗರದಲ್ಲಿದ್ದಾಳೆ ಅಂತ ಹೇಳು” ಎನ್ನುತ್ತಾಳೆ.
“ಅತ್ಯಾಚಾರಿ ರಮೇಶ್ ಜಾರಕಿಹೊಳಿಯನ್ನು ಬಂಧಿಸಿ, ಪಕ್ಷದಿಂದ ಉಚ್ಚಾಟಿಸಿ” : ಕಾಂಗ್ರೆಸ್

ಸಿಡಿ ಲೇಡಿ ಹೊಸ ವಿಡಿಯೋ ರಿಲೀಸ್​! ಇವರ ರಹಸ್ಯ ಬಿಚ್ಚಿಡ್ತೀನಿ, ಹೆಲ್ಪ್ ಮಾಡಿ ಎಂದ ಸಂತ್ರಸ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
