ಬೆಂಗಳೂರು:ರಾಜಧಾನಿಯಲ್ಲಿ ಕರೊನಾ ಸೋಂಕಿತರನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗ ಲಕ್ಷಣಗಳಿಲ್ಲದ ಸೋಂಕಿತರ ಚಿಕಿತ್ಸೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಸರ್ಕಾರಿ ಆಯುರ್ವೆದ ಆಸ್ಪತ್ರೆ ಹಾಗೂ ವಿವಿಧ ಹೋಟೆಲ್​ಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಬಿಬಿಎಂಪಿ ಮುಂದಾಗಿದೆ.
ಕರೊನಾ ರೋಗ ಲಕ್ಷಣಗಳು ಇಲ್ಲದವರನ್ನು ಕೋವಿಡ್ ಆರೈಕೆ ಕೇಂದ್ರಗಳಲ್ಲಿ (ಸಿಸಿಸಿ), ಗಂಭೀರವಲ್ಲದ ಮಧ್ಯಮ ಪ್ರಮಾಣದ ಲಕ್ಷಣಗಳು ಇರುವವರನ್ನು ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ (ಡಿಸಿಎಚ್​ಸಿ) ಹಾಗೂ ಗಂಭೀರವಾಗಿರುವ ಸೋಂಕಿತರನ್ನು ಮೀಸಲಿಡಲಾದ ಕೋವಿಡ್ ಆಸ್ಪತ್ರೆಗಳಲ್ಲಿರಿಸಿ (ಡಿಸಿಎಚ್) ನಿರ್ವಹಣೆ ಮಾಡಲಾಗುವುದು.
ಇದನ್ನೂ ಓದಿ:ಕೋವಿಡ್ ಪರೀಕ್ಷೆಗೆ ಮತ್ತಷ್ಟು ಬಲ: ವಿಕ್ಟೋರಿಯಾ ಲ್ಯಾಬ್ ಆರಂಭ, ಇಂದಿನಿಂದ ನಿಮ್ಹಾನ್ಸ್ ಲ್ಯಾಬ್ ಕಾರ್ಯ
ಆರೈಕೆ ಕೇಂದ್ರಗಳು ಎಲ್ಲೆಲ್ಲಿ ಇವೆ?
ಹಜ್ ಭವನದಲ್ಲಿ 400, ಶ್ರೀ ಶ್ರೀ ರವಿಶಂಕರ ಗುರೂಜಿ ಆಶ್ರಮದಲ್ಲಿ 400 ಹಾಸಿಗೆಗಳ ಕರೊನಾ ಕೇರ್ ಸೆಂಟರ್ ಆರಂಭಿಸಲಾಗಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 400, ಇಂಜಿನಿಯರಿಂಗ್ ಕಾಲೇಜುಗಳಲ್ಲಿ 3,200, ಖಾಸಗಿ ಹೋಟೆಲ್​ಗಳಲ್ಲಿ 1,500 ಹಾಸಿಗೆ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿಯೂ ಸಾವಿರಾರು ಹಾಸಿಗೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ರಾಜ್ಯದ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರಿಗೆ ವಿವಿಧೆಡೆಯಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದ್ದು, ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚುವರಿ ಕೇಂದ್ರಗಳನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಆಯುರ್ವೆದ ಕಾಲೇಜಿನಲ್ಲಿ 200 ಹಾಸಿಗೆ, ಜಿಕೆವಿಕೆ ವಿದ್ಯಾರ್ಥಿನಿಲಯಗಳ 1,000 ಹಾಸಿಗೆ, ಹೋಟೆಲ್ ಸಿಟಿ ಸೆಂಟಾರ್ ಇಂಟರ್ ನ್ಯಾಷನಲ್​ನ 400 ಹಾಸಿಗೆ, ಚಾನ್ಸರಿ ಪೆವಿಲಿಯನ್ ರೆಸಿಡೆನ್ಸಿಯಲ್ಲಿ 200 ಹಾಸಿಗೆಗಳನ್ನು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅನುಸಾರ ವಶಕ್ಕೆ ಪಡೆದು ಕೋವಿಡ್ ಆರೈಕೆಗೆ ಸಿದ್ಧಪಡಿಸಲು ಆಯಾ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಅಶೋಕ್ ಕರೊನಾ ಉಸ್ತುವಾರಿ ತಾತ್ಕಾಲಿಕ?
ಎನ್​ಜಿವಿ ಒಳಾಂಗಣ ಕ್ರೀಡಾಂಗಣಕ್ಕೆ ಶಿಫ್ಟ್:ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲು ಸಿದ್ಧತೆ ಮಾಡಲಾಗಿತ್ತು. ಆದರೆ, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಗೋವಿಂದರಾಜು ಮನವಿ ನ್ನೆಲೆಯಲ್ಲಿ ಕಂಠೀರವದಲ್ಲಿ ಸಿದ್ಧತೆಗೆ ಮುಂದಾಗಿದ್ದ ಹಾಸಿಗೆ ಗಳನ್ನು ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ (ಎನ್​ಜಿವಿ) ಕ್ರೀಡಾಂಗಣಕ್ಕೆ ಸ್ಥ§ಳಾಂತರಿಸಲಾಗಿದೆ.
ಖಾಸಗಿ ಆಸ್ಪತ್ರೆಗಳಿಗೆ ಸಿಎಸ್ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
