| ರಾಮ ಕಿಶನ್ ಕೆ.ವಿ. ಬೆಂಗಳೂರು
ಸಿರಿಧಾನ್ಯದಿಂದ ತಯಾರಿಸಿದ ಬಿಸ್ಕತ್, ಮಿಲೆಟ್ ಮಾಲ್ಟ್, ಕುರುಕಲು ತಿಂಡಿಗಳಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಆದರೆ ಈಗ ಇದೇ ಮೊದಲ ಬಾರಿಗೆ ಸಿರಿಧಾನ್ಯದಿಂದಲೇ ಸಿದ್ಧಪಡಿಸಿರುವ ಐಸ್ಕ್ರೀಂ ಬಂದಿದೆ. ಯಲಚೇನಹಳ್ಳಿಯ ಲಿಕಿ ಫುಡ್ಸ್ ಎಂಬ ಸಂಸ್ಥೆ ಕೃಷಿ ಮೇಳದಲ್ಲಿ ಸಿರಿಧಾನ್ಯದ ಐಸ್ಕ್ರೀಂ ತಯಾರಿಸಿ ಮಾರಾಟ ಮಾಡುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾವು, ಬಟರ್​ಸ್ಕಾಚ್, ವೆನಿಲ್ಲ, ಕಾಫಿ, ಚಾಕೊಲೇಟ್, ಅನಾನಸ್, ಕಿವಿ, ಸ್ಟ್ರಾಬೆರ್ರಿ, ಗಾವ (ಸೀಬೆ) ಸೇರಿ 15ಕ್ಕೂ ಅಧಿಕ ಬಗೆಯ ಸಿರಿಧಾನ್ಯದ ಐಸ್ಕ್ರೀಂ ಲಭ್ಯವಿದೆ. ಮೇಳಕ್ಕೆ ಆಗಮಿಸಿದವರು ಮಧ್ಯಾಹ್ನ ಬಿಸಿಲಿನಲ್ಲಿ ಐಸ್ಕ್ರೀಂ ಸವಿದು ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ.
ಸಿರಿಧಾನ್ಯವನ್ನು ಸಂಸ್ಕರಿಸಿ, ಅದರಲ್ಲಿರುವ ಹಾಲಿನ ಅಂಶವನ್ನು ಹೊರತೆಗೆಯಲಾಗುತ್ತದೆ. ಬಳಿಕ ನೈಸರ್ಗಿಕ ಅಂಶಗಳುಳ್ಳ ವಿವಿಧ ರುಚಿಗಳನ್ನು ಮಿಶ್ರಣ ಮಾಡಿ ಐಸ್ಕ್ರೀಂ ಸಿದ್ಧಪಡಿಸುತ್ತೇವೆ. ಯಾವುದೇ ಕೃತಕ ಬಣ್ಣ ಹಾಗೂ ರುಚಿಯನ್ನು ಬಳಕೆ ಮಾಡುವುದಿಲ್ಲ. ಶುಚಿ ಹಾಗೂ ರುಚಿಗೆ ಪ್ರಾಶಸ್ಱ ಕೊಡಲಾಗುತ್ತದೆ ಎನ್ನುತ್ತಾರೆ ಲಿಕಿ ಫುಡ್ಸ್​ನ ವ್ಯವಸ್ಥಾಪಕ ನಿರ್ದೇಶಕ ಎಸ್. ಗೌತಮ್ ರಾಯ್ಕರ್.
ಫಾಸ್ಟ್​ಫುಡ್, ಬೇಕರಿ ತಿನಿಸುಗಳನ್ನು ಇಷ್ಟಪಡುವ ಮಕ್ಕಳು ಸಿರಿಧಾನ್ಯದಿಂದ ತಯಾರಿಸಿದ ತಿಂಡಿಗಳನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಬಹುಮುಖ್ಯ ಕಾರಣ, ಸಿರಿಧಾನ್ಯದ ರುಚಿ. ಆದರೆ ಐಸ್ಕ್ರೀಂ ಅನ್ನು ಎಲ್ಲ ಮಕ್ಕಳು ತಿನ್ನಲು ಮುಂದೆ ಬರುತ್ತಾರೆ. ಹೀಗಿರುವಾಗ ಸಿರಿಧಾನ್ಯದ ಪೋಷಕಾಂಶವುಳ್ಳ ಐಸ್ಕ್ರೀಂ ಅನ್ನು ನೀಡಿದರೆ ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎನ್ನುತ್ತಾರೆ ಮಲ್ಲೇಶ್ವರ ನಿವಾಸಿ ಕವಿತಾ.
ಸಿರಿಧಾನ್ಯದ ಐಸ್ಕ್ರೀಂ ಎಂಬುದು ಗೊತ್ತಾಗುತ್ತಿದ್ದಂತೆ ರುಚಿ ನೋಡಬೇಕು ಎನ್ನಿಸಿತು. ಹೀಗಾಗಿ ಕಿವಿ ಮತ್ತು ಸ್ಟ್ರಾಬೆರ್ರಿ ರುಚಿಯ ಐಸ್ಕ್ರೀಂ ಸೇವಿಸಿದೆ. ಶುಚಿ ಮತ್ತು ರುಚಿಯಲ್ಲಿ ಗುಣಮಟ್ಟ ಹೊಂದಿದೆ.
| ರಶ್ಮಿ ಬೆಂಗಳೂರು
ಕೃಷಿಮೇಳದ ಮೂಲಕ ಇದೇ ಮೊದಲ ಬಾರಿಗೆ ಸಿರಿಧಾನ್ಯದ ಐಸ್ಕ್ರೀಂ ಸೇವಿಸುವ ಅವಕಾಶ ಸಿಕ್ಕಿತು. ಮ್ಯಾಂಗೋ ಹಾಗೂ ಸೀಬೆಕಾಯಿ ರುಚಿಯ ಐಸ್ಕ್ರೀಂ ಸೇವಿಸಿದೆ. ರುಚಿ ಚೆನ್ನಾಗಿದೆ. ಗುಣಮಟ್ಟದ ಈ ಉತ್ಪನ್ನ ಎಲ್ಲೆಡೆ ಸಿಗುವಂತಾಗಬೇಕು.
| ರೇವತಿ ಬೆಂಗಳೂರು ನಿವಾಸಿ
ಮದುವೆಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ವರನ ಮನೆಯಲ್ಲೇ ಯುವತಿ ದುರಂತ ಸಾವು!

ಇದೊಂದು ಇದ್ದಿದ್ದರೆ ಭಾರತ ವಿಶ್ವಕಪ್​ ಫೈನಲ್​ ಸೋಲುತ್ತಿರಲಿಲ್ಲ: ಕ್ರಿಕೆಟಿಗರ ವಿರುದ್ಧ ನಟ ಚೇತನ್ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
