ಬೆಂಗಳೂರು:ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಕೃಷಿ ಜಾತ್ರೆ ಆರಂಭಗೊಂಡಿದೆ. ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ ಸೇರಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ನಡೆಯುತ್ತಿರುವ ‘ಕೃಷಿಮೇಳ-2022’ಕ್ಕೆ ಇಂದು(ಗುರುವಾರ) ಚಾಲನೆ ಸಿಕ್ಕಿದೆ.
ಇಂದಿನಿಂದ (ನ.3ರಿಂದ 6ರವರೆಗೆ) ನಾಲ್ಕು ದಿನ ನಡೆಯುವ ಮೇಳದಲ್ಲಿ ವ್ಯವಸಾಯ ಕ್ಷೇತ್ರದತ್ತ ಯುವಜನರನ್ನು ಸೆಳೆಯಲು ಹಾಗೂ ಕೃಷಿಯಲ್ಲಿ ತೊಡಗಿರುವ ಅನ್ನದಾತರಿಗೆ ಹೊಸ ತಳಿ, ತಾಂತ್ರಿಕತೆಯನ್ನು ಪರಿಚಯಿಸಲಾಗುತ್ತಿದೆ. ವಿವಿ ಸಂಶೋಧಿಸಿರುವ ಹತ್ತು ಹಲವು ಆವಿಷ್ಕಾರದ ಸಾಧನೆಯನ್ನು ರೈತರ ಎದುರು ಅನಾವರಣ ಗೊಳಿಸಲಾಗುತ್ತದೆ. ಹೊಸ ತಂತ್ರಜ್ಞಾನದಡಿ ಶೋಧಿಸಿರುವ ಸುಧಾರಿತ ಕೃಷಿ ಯಂತ್ರೊಪಕರಣ, ಕೊಯ್ಲಿನೋತ್ತರ ತಾಂತ್ರಿಕತೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಕೆ, ಸಿರಿಧಾನ್ಯಗಳ ಮಹತ್ವ ಅರಿಯುವ ಅವಕಾಶ ಸಿಗಲಿದೆ. ಮುಖ್ಯವಾಗಿ ಕೃಷಿಗೆ ನವೋದ್ಯಮದ ಸ್ಪರ್ಶ ನೀಡುವ ಹಿನ್ನೆಲೆಯಲ್ಲಿ ಯುವ ಕೃಷಿ ಪದವೀಧರರು ಹುಟ್ಟುಹಾಕಿರುವ ಕಿರು ಉದ್ಯಮಗಳ ಯಶೋಗಾಥೆ ರೈತರ ಆದಾಯ ವೃದ್ಧಿಗೆ ಹೊಸ ಮಾರ್ಗ ತೆರೆದುಕೊಳ್ಳಲು ವೇದಿಕೆ ಸಿಗಲಿದೆ.
ರೈತರಿಗೆ ಭರಪೂರ ಮಾಹಿತಿ:ಕೃಷಿ ಮೇಳದಲ್ಲಿ 700 ಮಳಿಗೆ ತೆರೆಯಲಾಗಿದೆ. ಇವುಗಳಲ್ಲಿ ಬಹುತೇಕ ಮಳಿಗೆಗಳು ರೈತರಿಗೆ ಭರಪೂರ ಮಾಹಿತಿ ಸಿಗಲಿದೆ. ಬಿತ್ತನೆಬೀಜ, ಕಟಾವು, ಕೊಯ್ಲೋತ್ತರ, ಯಂತ್ರೋಪಕರಣ, ಹನಿ/ತುಂತುರು ನೀರಾವರಿ ಪದ್ಧತಿ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಕೆ, ಹವಾಮಾನ ಚತುರ ಕೃಷಿ, ಮಣ್ಣು ರಹಿತ ಕೃಷಿ ಪದ್ಧತಿ, ಮಾರುಕಟ್ಟೆ ನೈಪುಣ್ಯ ಮಾಹಿತಿ ಇತ್ಯಾದಿ ಅಂಶಗಳು ಕೃಷಿಕರಿಗೆ ಲಭ್ಯವಾಗಲಿದೆ. ಪ್ರತಿ ಬೆಳೆಗೂ ಪ್ರತ್ಯೇಕ ವಿಜ್ಞಾನಿಗಳೊಂದಿಗೆ ಮುಖಾಮುಖಿ ಚರ್ಚೆ, ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಮೇಳಕ್ಕೆ ಭೇಟಿ ಹೇಗೆ?:ಬೆಂಗಳೂರು ಕೃಷಿ ವಿವಿ ಕ್ಯಾಂಪಸ್​ ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯಲಿದೆ. ಇಲ್ಲಿಗೆ ತೆರಲು ಮೆಜೆಸ್ಟಿಕ್​, ಕೆ.ಆರ್​. ಮಾರುಕಟ್ಟೆ, ಶಿವಾಜಿನಗರದಿಂದ ಬಿಎಂಟಿಸಿ ಬಸ್​ ಸೌಲಭ್ಯ ಇದೆ. ಏರ್​ಪೋರ್ಟ್​ ರಸ್ತೆಯ ಬ್ಯಾಟರಾಯನಪುರದ ಬಳಿಯಿರುವ ಜಿಕೆವಿಕೆ ಗೇಟ್​ ಬಸ್​ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲಿಂದ ಕ್ಯಾಂಪಸ್​ ಒಳಗೆ ಹೋಗಲು ಉಚಿತ​ ಸಾರಿಗೆ ವ್ಯವಸ್ಥೆಯನ್ನು ವಿವಿ ಮಾಡಿದೆ. ವಾಪಸ್​ ತೆರಳುವಾಗಲೂ ಜಿಕೆವಿಕೆ ಗೇಟ್​ ವರೆಗೆ ಸಾರಿಗೆ ಸೌಲಭ್ಯವಿದ್ದು, ನಂತರ ತಮ್ಮ ಸ್ವಸ್ಥಳಕ್ಕೆ ಬಿಎಂಟಿಸಿ ಬಸ್​ಗಳ ಮೂಲಕ ಪ್ರಯಾಣಿಸಬಹುದು. ಸ್ವಂತ ವಾಹನಗಳಲ್ಲಿ ಆಗಮಿಸುವವರು ಕ್ಯಾಂಪಸ್​ ಒಳಗೆ ಆಗಮಿಸಿ ವಾಹನ ನಿಲುಗಡೆ ಜಾಗದಲ್ಲಿ ಪಾರ್ಕಿಂಗ್​ ಮಾಡಬಹುದು.
ಮೇಳಕ್ಕೆ ತೆರಳುವವರು ಇದನ್ನು ಅನುಸರಿಸಿ– ಮಳಿಗೆಗಳಿಗೆ ಭೇಟಿ ನೀಡುವಾಗ ಮಾರ್ಗದರ್ಶಕರ ಮಾತು ಆಲಿಸಿ– ಕೃಷಿ ಬಗ್ಗೆ ಒಲವಿದ್ದಲ್ಲಿ ರೈತರೊಂದಿಗೆ ಬೆರೆಯಿರಿ, ಒಂದೆರಡು ಗಿಡ ಖರೀದಿಸಿ– ಕುಟುಂಬ ಸಮೇತ ಹೋದಲ್ಲಿ ಎಲ್ಲ ಸದಸ್ಯರೂ ಒಟ್ಟಿಗಿರುವುದು ಉತ್ತಮ– ಮಳೆ ಬರುವ ಸಾಧ್ಯತೆ ಇರುವುದರಿಂದ ಕೊಡೆ, ರೈನ್​ಕೋಟ್​ ಜತೆಗಿರಲಿ– ಕುಡಿಯುವ ನೀರು, ಒಂದಿಷ್ಟು ಆಹಾರ ಜತೆಗೆ ಒಯ್ಯುವುದು ಉತ್ತಮ– ನಿಗದಿತ ಜಾಗದಲ್ಲೇ ವಾಹನ ನಿಲ್ಲಿಸಿ, ಪೊಲೀಸರ ಸಲಹೆ ಅನುಸರಿಸಿ.
2022ನೇ ಸಾಲಿನ ಕೃಷಿ ಮೇಳದಲ್ಲಿ ರೈತರಿಗೆ ಹೊಸ ಬಗೆಯ ತಳಿ, ತಾಂತ್ರಿಕತೆ, ಗೋಷ್ಠಿಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ತಾಕುಗಳಲ್ಲಿ ಪ್ರಾತ್ಯಕ್ಷಿಕೆ, ಬೆಳೆಗಳ ಕುರಿತು ವಿಜ್ಞಾನಿಗಳ ಜತೆ ಸಂವಾದಕ್ಕೂ ಅವಕಾಶ ಇದೆ. ಚರ್ಮಗಂಟು ರೋಗ ಹಿನ್ನೆಲೆಯಲ್ಲಿ ಜಾನುವಾರು ಪ್ರದರ್ಶನ ಇರುವುದಿಲ್ಲ.| ಡಾ.ಎಸ್​.ವಿ.ಸುರೇಶಬೆಂಗಳೂರು ಕೃಷಿ ವಿವಿ ಕುಲಪತಿ
ಗೋಗರೆದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ… ರಾತ್ರಿಯಿಡೀ ನೋವಿಂದ ನರಳಿದ ಗರ್ಭಿಣಿ ದುರಂತ ಸಾವು! ಜನಿಸಿದ ಅವಳಿ ಮಕ್ಕಳೂ ಬದುಕಲಿಲ್ಲ

ಗೋಗರೆದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ… ರಾತ್ರಿಯಿಡೀ ನೋವಿಂದ ನರಳಿದ ಗರ್ಭಿಣಿ ದುರಂತ ಸಾವು! ಜನಿಸಿದ ಅವಳಿ ಮಕ್ಕಳೂ ಬದುಕಲಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 2 =
Remember me
