ಬೆಂಗಳೂರು:ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಎಲ್ಲರ ಏಳಿಗೆಯೊಂದಿಗೆ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಅವರ ಪ್ರಯತ್ನದಲ್ಲಿ ನಾವೂ ಜತೆಯಾಗಿರುವುದು ಸಹಜವಾಗಿ ಸಂತೋಷ ಉಂಟು ಮಾಡಿದೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹರ್ಷ ವ್ಯಕ್ತಪಡಿಸಿದರು.
ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಗುರುವಾರ ಆಗಮಿಸಿದ ಅವರು, ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಿದರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಐವರನ್ನು ಸಂಸದರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡ ಮೋದಿಯವರಿಗೆ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳನ್ನು ತಿಳಿಸುವೆ ಎಂದರು.
ಮುಂದಿನ ಬಾರಿ ಬಂದಾಗ ರಾಜ್ಯದ ನೆಲೆಯಲ್ಲಿ ನನ್ನ ಇಲಾಖೆ ಕೆಲಸಗಳ ಪರಿಕಲ್ಪನೆಯಲ್ಲಿ ವಿವರಿಸುವೆ. ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುವೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ನೂತನ ಇಲಾಖೆ ಜವಾಬ್ದಾರಿವಹಿಸಿಕೊಂಡು ಕೆಲವು ದಿನಗಳಷ್ಟೇ ಆಗಿವೆ. ಎರಡೂ ಇಲಾಖೆಗಳನ್ನು ಪೂರ್ಣ ತಿಳಿದುಕೊಂಡು, ಇಲಾಖೆಗಳ ಕೆಲಸವನ್ನು ರಾಜ್ಯಕ್ಕೆ ಹೇಗೆ ತರಬೇಕು, ಜಾರಿಗೊಳಿಸಬೇಕು ಆ ನಿಟ್ಟಿನಲ್ಲಿ ಪ್ರಯತ್ನಿಸುವ ಎಂಬ ಭರವಸೆಯಿತ್ತರು.
ನೆಚ್ಚಿನ ನಾಯಕ ಮೋದಿಯವರು ನನಗೆ ಎರಡು ಜವಾಬ್ದಾರಿಯುತ ಸ್ಥಾನಗಳನ್ನು ನೀಡಿದ್ದು, ಪ್ರಾಮಾಣಿಕವಾಗಿ ಶ್ರಮಿಸಿ ಅವರ ನಂಬಿಕೆ ಉಳಿಸಿಕೊಳ್ಳುವೆ. ಐದು ಜನ ಸಚಿವರು ಕರ್ನಾಟಕ ಸೇರಿ ದೇಶದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ಸ್ಥಾಗಳನ್ನು ಪ್ರಧಾನಿ ನೀಡಿದ್ದಾರೆ ಎಂದು ವಿ.ಸೋಮಣ್ಣ ಸಂತಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ವಿ.ಸೋಮಣ್ಣ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಶಾಸಕ ಎಸ್.ರಘು, ಮುಖಂಡರಾದ ಜಗದೀಶ್ ಹಿರೇಮನಿ, ಎಂ.ಜಿ.ಮಹೇಶ್, ಎಸ್.ಹರೀಶ್, ಮಂಜುನಾಥ್, ಪ್ರಶಾಂತ ಕೆಡಂಜಿ ಇನ್ನಿತರರು ಇದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + four =
Remember me
