ಗದಗ:ಜಿಲ್ಲೆಯ ಪ್ರವಾಸಿ ತಾಣ ಬಿಂಕದಕಟ್ಟಿ ಕಿರು ಮೃಗಾಲಯ ಈಗಾಗಲೇ ಎರಡು ಹುಲಿಗಳ ವಾಸಸ್ಥಾನವಾಗಿದೆ. ಇದರ ಜತೆಗೆ ಎರಡು ಸಿಂಹಗಳನ್ನು ತರಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಮೃಗಾಲಯದಲ್ಲಿ ಸಿಂಹಗಳ ಗರ್ಜನೆ ಕೇಳಲಿದೆ.
ಸಿಂಹಗಳ ಚಲನವಲನಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಾಜಿನ ಪಂಜರ ನಿರ್ಮಿಸಲಾಗುತ್ತಿದೆ. 3 ಮೀಟರ್ ಅಗಲ, 6 ಮೀಟರ್ ಎತ್ತರ, 12 ಮಿಮೀ ದಪ್ಪ ಗಾತ್ರದ 2 ಪದರದ ಗ್ಲಾಸ್ ಅಳವಡಿಸಲಾಗುತ್ತಿದೆ. ಸಿಂಹಗಳ ಪಂಜರದ ಜತೆಗೆ ಚಿರತೆಗಳ ಪಂಜರಕ್ಕೂ ಗಾಜು ಅಳವಡಿಸಲಾಗುತ್ತಿದೆ.
ಇದನ್ನೂ ಓದಿ:‘ನಿಮಗೊಂದು ಸವಾಲು, ಈ ಫೋಟೋದಲ್ಲಿರುವುದೇನು ಗುರುತಿಸಿ..’: ಬೆರಳುಗಳು ಎಂದುಕೊಂಡಿದ್ದರೆ ಅದು ತಪ್ಪು!
ಸಿಂಹ ವಾಸಿಸುವ ಕೊಠಡಿಯ ಮೂರು ಕಡೆ ಗೋಡೆ ಇರುತ್ತದೆ. ಒಂದು ಕಡೆ ಮಾತ್ರ ಗಾಜು ಅಳವಡಿಸಲಾಗಿರುತ್ತದೆ. ಆ ಗಾಜಿನಿಂದ ನೋಡಿದರೆ ಸಿಂಹದ ಚಲನವಲನಗಳ ಸ್ಪಷ್ಟ ವೀಕ್ಷಣೆ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಪೈಕಿ ಈಗಾಗಲೇ ಹೈನಾಗಳ ಪಂಜರಕ್ಕೆ ಪಾರದರ್ಶಕ ಗಾಜುಗಳನ್ನು ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಮೃಗಾಲಯದಲ್ಲಿನ ಎಲ್ಲ ಪಂಜರಗಳನ್ನು ಗಾಜಿನ ಪಂಜರುಗಳಾಗಿ ಪರಿವರ್ತಿಸಲು ಅಧಿಕಾರಿಗಳು ಬಯಸಿದ್ದಾರೆ.
ಎರಡು ಸಿಂಹಗಳನ್ನು ತರಲು ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ. ಎರಡು ಸಿಂಹಗಳನ್ನು ಒದಗಿಸುವಂತೆ ಕೋರಿ ಕೆಲ ತಿಂಗಳುಗಳ ಹಿಂದೆಯೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಪತ್ರ ಬರೆಯಲಾಗಿದೆ. ಬನ್ನೇರುಘಟ್ಟ ಮೃಗಾಲಯಕ್ಕೂ ಭೇಟಿ ನೀಡಿ ಎರಡು ಸಿಂಹಗಳನ್ನು ಗುರುತಿಸಲಾಗಿದೆ. ಮೈಸೂರು ಇಲ್ಲವೇ ಬನ್ನೇರುಘಟ್ಟ ಮೃಗಾಲಯದಿಂದ ಸಿಂಹಗಳು ಬರಲಿವೆ.
ಕಳೆದ ವರ್ಷ ಎರಡು ಹುಲಿಗಳನ್ನು ತಂದಿದ್ದರಿಂದ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿ, ಆದಾಯವೂ ಹೆಚ್ಚಿದೆ. ಇದೀಗ ಸಿಂಹಗಳನ್ನು ತಂದರೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಸದ್ಯ ಪ್ರತಿನಿತ್ಯ 100 ರಿಂದ 130, ವಾರಾಂತ್ಯದ ದಿನಗಳಲ್ಲಿ 250 ರಿಂದ 400 ಜನರು ಭೇಟಿ ನೀಡುತ್ತಿದ್ದಾರೆ. ಹಬ್ಬಹರಿದಿನಗಳು, ರಾಷ್ಟ್ರೀಯ ಹಬ್ಬಗಳಂದು ಪ್ರವಾಸಿಗರ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ.
ಇದನ್ನೂ ಓದಿ:ಧೋನಿ 3ನೇ ಕ್ರಮಾಂಕದಲ್ಲಿ ಆಡಿದ್ದರೆ ಹಲವು ದಾಖಲೆಗಳು ಮುರಿಯುತ್ತಿದ್ದವು ಎಂದ ಗಂಭೀರ್
ಇದು ಆತ್ಮಹತ್ಯೆಯಲ್ಲ; ಕೊಲೆ ಎಂದ ಕಂಗನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 14 =
Remember me
