ದಾವಣಗೆರೆ:ಎರಡು ದಶಕಗಳ ಹೊಸ್ತಿಲಲ್ಲಿರುವ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ ವರ್ಷದಿಂದ ವರ್ಷಕ್ಕೆ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದೆ. ಶ್ರೀಶೈಲ ಎಜುಕೇಷನಲ್ ಟ್ರಸ್ಟ್​ನಡಿ ನಡೆಯುತ್ತಿರುವ ಈ ಸಂಸ್ಥೆ ಗುಣಮಟ್ಟದ ಹೈಟೆಕ್ ಶಿಕ್ಷಣ ನೀಡುತ್ತಿದೆ.
ಕೇವಲ ಬೋಧನೆಗೆ ಸೀಮಿತವಾಗದೆ ಸಂಶೋಧನೆ, ಕೌಶಲಾಭಿವೃದ್ಧಿ, ತರಬೇತಿ ಮುಂತಾದ ಚಟುವಟಿಕೆಗಳ ಮೂಲಕ ತನ್ನದೆ ಆದ ಛಾಪು ಮೂಡಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಅಂತಿಮ ವರ್ಷದ 300 ವಿದ್ಯಾರ್ಥಿಗಳು ಉದ್ಯೋಗ ನೇಮಕಾತಿಯಲ್ಲಿ ಆಯ್ಕೆಯಾಗಿರುವುದು ಸಂಸ್ಥೆಯ ವರ್ಚಸ್ಸಿಗೆ ಸಾಕ್ಷಿಯಾಗಿದೆ. ಜಿಲ್ಲಾ ಕೇಂದ್ರದಲ್ಲಿದ್ದು ಎನ್​ಬಿಎ, ನ್ಯಾಕ್ ಮಾನ್ಯತೆ ಗಿಟ್ಟಿಸಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ. 2 ಎಫ್ ಮತ್ತು 12 ಬಿ ಮಾನ್ಯತೆ ಪಡೆದು ಸಂಶೋಧನೆಯಲ್ಲೂ ಸೈ ಎನಿಸಿಕೊಂಡಿದೆ. ಐಎಸ್​ಒ-9001 ಪ್ರಮಾಣಪತ್ರವು ಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಹೇಳುತ್ತದೆ.
ಎಐಸಿಟಿಇ- ಸಿಐಐ ಸರ್ವೆ ಆಫ್ ಇಂಡಸ್ಟ್ರಿ ಲಿಂಕ್ಡ್ ಟೆಕ್ನಿಕಲ್ ಇನ್​ಸ್ಟಿಟ್ಯೂಟ್ಸ್ 2018-19, 2019-20 ಪ್ರಕಾರ ಗೋಲ್ಡ್ ರೇಟಿಂಗ್ ಸಿಕ್ಕಿದೆ. ವಿವಿಧ ಪ್ರಾಜೆಕ್ಟ್​ಗಳಿಗಾಗಿ 8.44 ಕೋಟಿ ರೂ. ಅನುದಾನ ಪಡೆದಿರುವ ಹೆಗ್ಗಳಿಕೆಯೂ ಇದೆ. ಶೈಕ್ಷಣಿಕ ಸಂಸ್ಥೆಯಾಗಿ 68 ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಜಿಎಂಐಟಿ ಕೈಗಾರಿಕೆಗಳ ಜತೆಗೆ ಕೈಜೋಡಿಸಿ ವಿದ್ಯಾರ್ಥಿಗಳಲ್ಲಿ ಕೌಶಲವನ್ನು ಬೆಳೆಸುತ್ತಿದೆ. ಐಎಸ್​ಟಿಇಯಿಂದ ಪ್ರತಿ ವರ್ಷ ನೀಡುವ ‘ಅತ್ಯುತ್ತಮ ವಿದ್ಯಾರ್ಥಿ’ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಜಿಎಂಐಟಿಯ ಹೆಸರು ಇದ್ದೇ ಇರುತ್ತದೆ. ಈ ಬಾರಿ ಸಿವಿಲ್ ವಿಭಾಗದ ವಿದ್ಯಾರ್ಥಿನಿಗೆ ಆ ಪ್ರಶಸ್ತಿ ದೊರೆತಿದೆ. ವಿಶ್ವವಿದ್ಯಾಲಯ ಮಟ್ಟದ 6 ರ್ಯಾಂಕ್​ಗಳು ಮತ್ತು 2 ಚಿನ್ನದ ಪದಕ ಕಾಲೇಜಿನ ಮುಡಿಗೇರಿವೆ.
7 ಯುಜಿ ಪ್ರೋಗ್ರಾಮ್ ಮತ್ತು 1 ಪಿಜಿ ಪ್ರೋಗ್ರಾಂ, ಸಂಶೋಧನೆ-ಅಭಿವೃದ್ಧಿಯ 10 ಕೇಂದ್ರಗಳಿವೆ. 6 ಸೆಂಟರ್ ಆಫ್ ಎಕ್ಸಲೆನ್ಸ್, 3 ಪೇಟೆಂಟ್​ಗಳಿವೆ. ಸರ್ ಎಂ.ವಿ. ಡಿಜಿಟಲ್ ಸ್ಟುಡಿಯೋ ಸ್ಥಾಪಿಸಲಾಗಿದೆ. ಏವಿಯೇಷನ್ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯ ಆವರಣದಲ್ಲಿ ಡಿ ಫಾರ್ವ, ಬಿ ಫಾರ್ವ ಕಾಲೇಜು ಕೂಡಾ ಇದೆ. ಹಸಿರು ಕ್ಯಾಂಪಸ್​ನಲ್ಲಿ ಮೇಲ್ಚಾವಣಿಯಲ್ಲಿ 1500 ಕಿ.ವ್ಯಾ. ಸೌರಶಕ್ತಿ ಉತ್ಪಾದಿಸಲಾಗುತ್ತಿದ್ದು, ದಕ್ಷಿಣ ಭಾರತದಲ್ಲೇ 2ನೇ ಸ್ಥಾನದಲ್ಲಿದೆ.
ಉತ್ಪನ್ನಗಳ ಅಭಿವೃದ್ಧಿ
ಜಿಎಂಐಟಿ ವಿದ್ಯಾರ್ಥಿಗಳು ಅಧ್ಯಾಪಕರ ಜತೆ ಸೇರಿ ಲಾಕ್​ಡೌನ್ ಅವಧಿಯಲ್ಲಿ ಹಲವು ಉತ್ಪನ್ನಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ. ಒರೋಮಾ ಕಾಫಿ ಪುಡಿ, ಸೋಲಾರ್ ಇ-ಕಾರ್, ಟ್ರ್ಯಾಕ್ಟರ್ ಸಹಾಯದಿಂದ ಬಳಸುವ ಡಸ್ಟ್ ಕ್ಲೀನರ್, ಫುಟ್ ಆಪರೇಟೆಡ್ ಸ್ಯಾನಿಟೈಸರ್, ಶುಚಿ ವೈಪ್ಸ್ (ಹ್ಯಾಂಡ್ ಸ್ಯಾನಿಟೈಸರ್), ಎಡಿಬಲ್ ಸ್ಪೂನ್​ಗಳು, ಸೆನ್ಸರ್ ಬೇಸ್ಡ್ ಹ್ಯಾಂಡ್ ಸ್ಯಾನಿಟೈಸರ್, ಬುಕ್ ಎಂಡ್ ಸೆಪೆರೇಟರ್ ಇವು ಅಂಥ ಕೆಲವು ಉತ್ಪನ್ನಗಳಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
